/newsfirstlive-kannada/media/post_attachments/wp-content/uploads/2025/02/KARAVE-NARAYANAGOWDA.jpg)
ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ವಿರುದ್ಧ ಕರವೇ ಸಿಡಿದೆದ್ದಿದ್ದು, ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಆಗಮಿಸಲಿದ್ದಾರೆ.
ಕಳೆದ ಡಿಸೆಂಬರ್ 29 ರಂದು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಕೆಪಿಎಸ್ಸಿ ಕನ್ನಡದ ಕಗ್ಗೊಲೆ ಮಾಡಿದೆ ಎಂಬ ಆರೋಪವನ್ನು ಪರೀಕ್ಷಾರ್ಥಿಗಳು ಮಾಡಿದ್ದಾರೆ. KAS ಪ್ರಶ್ನೆ ಪತ್ರಿಕೆಯ ಭಾಷಾಂತರದಲ್ಲಿ 79 ಪ್ರಶ್ನೆಗಳು ತಪ್ಪಾಗಿದೆ. ಇದರಿಂದಾಗಿ ಸಾವಿರಾರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ ಅನ್ನೋದು ಆರೋಪ. ಇದಕ್ಕೆ ಪುಷ್ಟಿ ಕೊಡುವಂತೆ KAS ಪ್ರಿಲಿಮ್ಸ್ ಅರ್ಹ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡಿಗರ ಸಂಖ್ಯೆ ಕುಸಿತವಾಗಿದೆ. ಇದಕ್ಕೆ ಕಾರಣ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ದೋಷವೇ ಕಾರಣ. ಆಗಿರುವ ದೋಷ ಸರಿಪಡಿಸಲು ಮರು ಪರೀಕ್ಷೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಂತೆಯೇ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಇಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: KPSC Exam: ಮತ್ತೆ KAS ಮರು ಪರೀಕ್ಷೆ..? ರಾಜ್ಯಪಾಲರು ನೀಡಿದ ಭರವಸೆ ಏನು?
ಏನಂದ್ರು ನಾರಾಯಣ ಗೌಡ..?
KPSC ಭ್ರಷ್ಟರ ಕೂಪವಾಗಿ ಬದಲಾಗುತ್ತಿದೆ. ಅಲ್ಲಿ ಭ್ರಷ್ಠ ಅಧಿಕಾರಿಗಳೇ ತುಂಬಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಗಳನ್ನೇ ಸರಿಯಾಗಿ ಕೇಳಿರಲಿಲ್ಲ. ಆಗ ಕೂಡ ಕರವೇ KPSC ವಿರುದ್ಧ ಪ್ರತಿಭಟನೆ ನಡೆಸಿತ್ತು. ನಂತರ ಸಿಎಂ ಸಿದ್ದರಾಮಯ್ಯ ಮರು ಪರೀಕ್ಷೆಗೆ ಆದೇಶಿಸಿದ್ರು. ಆದರೆ ಮರು ಪರೀಕ್ಷೆಯಲ್ಲೂ ಕನ್ನಡ ಪ್ರಶ್ನೆಗಳಲ್ಲಿ ಲೋಪ ಕಂಡುಬಂದಿದೆ. KPSC ಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಆದ್ದರಿಂದ ಈ ಕೂಡಲೇ ಸಿಎಂ KPSC ಅಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಬೇಕು. ಇಲ್ಲದಿದ್ರೆ ಕರವೇ ಕಾರ್ಯಕರ್ತರು KPSC ಗೆ ನುಗ್ಗಲಿದ್ದಾರೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಹಾಲಿನ ದರ ಮತ್ತಷ್ಟು ಏರಿಕೆ ಆತಂಕ; KMF ಎಷ್ಟು ರೂಪಾಯಿ ಹೆಚ್ಚಿಸಲು ಹೊರಟಿದೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ