ಸೋನು ನಿಗಮ್‌ಗೆ FIR ಸಂಕಷ್ಟ.. ಬಂಧನಕ್ಕೆ ಇಂದು ಕರವೇ ನಾರಾಯಣ ಗೌಡ ಬೃಹತ್ ಹೋರಾಟ!

author-image
admin
Updated On
ಗಾಯಕ ಸೋನು ನಿಗಮ್‌ಗೆ ಬಿಗ್ ರಿಲೀಫ್‌.. ಆದ್ರೆ ಹೈಕೋರ್ಟ್‌ ಖಡಕ್ ಸೂಚನೆ; ಹೇಳಿದ್ದೇನು?
Advertisment
  • ಕನ್ನಡಿಗರ ಕಿಚ್ಚನ್ನೇ ಬಡಿದೆಬ್ಬಿಸಿದ ಸಿಂಗರ್ ಸೋನು ನಿಗಮ್ ಮಾತು
  • ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕರವೇ ಹೋರಾಟ
  • ಕನ್ನಡ ಚಿತ್ರರಂಗದಿಂಲೇ ಸಂಪೂರ್ಣ ಬ್ಯಾನ್ ಮಾಡಲು ಕನ್ನಡಿಗರ ಆಗ್ರಹ

ಬೆಂಗಳೂರು: ಅನ್ನ ಕೊಟ್ಟ ಕನ್ನಡ ಭಾಷೆಯನ್ನ ದೂಷಿಸಿದ್ರೆ ನಮ್ಮ ಕನ್ನಡಿಗರು ಸುಮ್ನೆ ಇರ್ತಾರಾ. ಭಾಷೆಯಿಂದ ಮತ್ತೇಲ್ಲಿಗೆ ಸಂಬಂಧ ಅನ್ನುವಂತೆ ಪಹಲ್ಗಾಮ್ ದಾಳಿಗೂ ಕನ್ನಡಕ್ಕೂ ಏನ್ ಸಂಬಂಧ ಅಲ್ವಾ. ಖ್ಯಾತ ಬಾಲಿವುಡ್ ಸಿಂಗರ್ ಸೋನು ನಿಗಮ್ ಆಡಿರೋ ಒಂದು ಮಾತು ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡೋದಲ್ಲ. ಕನ್ನಡಿಗರ ಕಿಚ್ಚನ್ನೇ ಬಡಿದೆಬ್ಬಿಸಿದೆ.

ಫೇಮಸ್ ಸಿಂಗರ್‌ ಸೋನು ನಿಗಮ್‌ನ ಇದೊಂದು ಮಾತು ಕನ್ನಡಿಗರ ಕಣ್ಣನ್ನ ಕೆಂಪಾಗಿಸಿದೆ. ಈ ಮಹಾನುಭಾವ ಕನ್ನಡದ ಅನ್ನ ತಿಂದು ಕನ್ನಡದ ಬಗ್ಗೆ ಮಾತನಾಡ್ತಾರೆ ಅಂದ್ರೆ ಕನ್ನಡಿಗರಾದ ನಾವು ಸುಮ್ನೇ ಇರ್ತೀವಾ ಹೇಳಿ. ಅದ್ಯಾವಾಗ ಕನ್ನಡದ ಬಗ್ಗೆ ಸೋನು ನಿಗಮ್ ನಾಲಿಗೆ ಹರಿಬಿಟ್ರೋ. ತಪ್ಪಿಗೆ ಪ್ರಾಯಶ್ಚಿತ ಆಗ್ಬೇಕು ಅಂತೇಳಿ ಕನ್ನಡ ಚಿತ್ರರಂಗದಿಂಲೇ ಬ್ಯಾನ್ ಆಗ್ರಹ ಕೇಳಿ ಬಂದಿದೆ.

publive-image

ಸಿಂಗರ್ ಸೋನು ನಿಗಮ್ ವಿರುದ್ಧ ಕನ್ನಡ ಸಂಘಟನೆಗಳು ಕೆಂಡ
ಫಿಲ್ಮ್‌ ಚೇಂಬರ್‌ಗೆ ದೂರು.. ಸ್ಯಾಂಡಲ್‌ವುಡ್‌ನಿಂದ ಬ್ಯಾನ್‌ಗೆ ಆಗ್ರಹ
ಕನ್ನಡದಲ್ಲಿ ಹಾಡು ಹಾಡ್ಬೇಕು.. ಅದರಿಂದಲೇ ಜೀವನ ಸಾಗ್ಬೇಕು.. ಆದ್ರೆ.. ಕನ್ನಡದ ಹಾಡು ಹಾಡಿ ಅಂದ್ರೆ ಬಾಯಿಗೆ ಬಂದಂಗೆ ಮಾತಾಡೋದಾ? ಕನ್ನಡ ಭಾಷೆಗೂ ಪಹಲ್ಗಾಮ್‌ ದಾಳಿಗೂ ಹೋಲಿಕೆ ಮಾಡಿರೋ ಸೋನು ನಿಗಮ್ ವಿರುದ್ಧ ಕನ್ನಡಿಗರು, ಕನ್ನಡ ಸಂಘಟನೆಗಳು ನಿಗಿನಿಗಿ ಕೆಂಡವಾಗಿವೆ. ಇನ್ಮೇಲೆ ಕನ್ನಡ ಚಿತ್ರರಂಗದಲ್ಲಿ ಸೋನು ಸಿಗಮ್‌ ಅವ್ರಿಗೆ ಹಾಡು ಹಾಡೋಕೆ ಅವಕಾಶನೇ ಕೊಡಬಾರ್ದು ಅಂತಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಪರ ಸಂಘಟನೆಯ ರೂಪೇಶ್ ರಾಜಣ್ಣ ದೂರು ಕೊಟ್ರು.. ಜೊತೆಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕೂಡ ಕ್ರಮಕ್ಕೆ ಆಗ್ರಹಿಸಿದ್ದಾರೆ.

publive-image

ಫಿಲ್ಮ್‌ ಚೇಂಬರ್ ಉಪಾಧ್ಯಕ್ಷ, ನಿರ್ಮಾಪಕ ಸಂಘದ ಅಧ್ಯಕ್ಷರು ದೂರು ಸ್ವೀಕರಿಸಿ ಸೋನು ನಿಗಮ್ ವಿರುದ್ಧ ಕ್ರಮದ ಭರವಸೆ ನೀಡಿದ್ರು. ಸೋಮವಾರ ಫಿಲ್ಮ್ ಚೇಂಬರ್‌ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕನ್ನಡ ಚಿತ್ರಗಳಲ್ಲಿ ಸೋನು ನಿಗಮ್‌ಗೆ ಹಾಡಲು ಅವಕಾಶ ಕೊಡಬೇಕಾ.. ಬೇಡ್ವಾ ಎಂಬ ನಿರ್ಧಾರ ಮಾಡಲಾಗುತ್ತೆ ಎಂದಿದ್ದಾರೆ.

ಕನ್ನಡ ಸಂಘಟನೆ ದೂರಿನ ಬೆನ್ನಲ್ಲೇ.. ಗಾಯಕ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿದೆ.

publive-image

ಸೋನು ನಿಗಮ್​ಗೆ ಸೆಕ್ಷನ್ ಸಂಕಷ್ಟ!
BNS 351(2) ವಿವಿಧ ಗುಂಪುಗಳ ನಡುವೆ ಧ್ವೇಷ ಉತ್ತೇಜನ
BNS 352(1) ಕ್ರಿಮಿನಲ್ ಮಾನಹಾನಿ ಮಾಡುವುದು
BNS 353 ಧಾರ್ಮಿಕ, ಭಾಷಿಕ ಭಾವನೆ ಕೆರಳಿಸುವುದು

ವಿವಾದದ ಬಳಿಕ ಮೊದಲ ಬಾರಿಗೆ ಹೇಳಿಕೆ ಬಗ್ಗೆ ಸೋನು ನಿಗಮ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೃದುವಾಗಿ ಕನ್ನಡ.. ಕನ್ನಡ ಎನ್ನೋದಕ್ಕೂ ಬೆದರಿಕೆಯೊಡ್ಡುವ ರೀತಿಯಲ್ಲಿ ಕೂಗೋದಕ್ಕೂ ವ್ಯತ್ಯಾಸವಿದೆ ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಸೋನು ನಿಗಮ ಕನ್ನಡಿಗರ ಆಕ್ರೋಶ ಮುಂದುವರೆದಿದೆ. ಸೋನು ನಿಗಮ್ ಬಂಧನಕ್ಕೆ ಒತ್ತಾಯಿಸಿ ಇಂದು ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶೀಘ್ರವೇ ಸೋನು ನಿಗಮ್ ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment