/newsfirstlive-kannada/media/post_attachments/wp-content/uploads/2025/07/Neha-Biswal3.jpg)
ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲೇ ಇದ್ದುಕೊಂಡು, ಇಲ್ಲಿಯೇ ಊಟ ಮಾಡಿ, ಇಲ್ಲಿಯೇ ಕೆಲಸ ಮಾಡಿ, ನಮ್ಮ ಬೆಂಗಳೂರಿನ ಬಗ್ಗೆ ಬಾಯಿಗೆ ಬಂದ ಹಾಗೇ ಮಾತಾಡುತ್ತಾಳೆ ಎಂದರೆ ಈಕೆಗೆ ಎಷ್ಟು ದುರಹಂಕಾರ ಇರಬೇಕು. ನಮ್ಮ ಬೆಂಗಳೂರಿನ ಬಗ್ಗೆ ಬಾಯಿಗೆ ಬಂದ ಹಾಗೇ ಮಾತಾಡಿದ ಉತ್ತರ ಭಾರತದ ಯುವತಿ ವಿರುದ್ಧ ಇದೀಗ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/07/Neha-Biswal.jpg)
ಬೆಂಗಳೂರಿಗರ ಬಗ್ಗೆ ನಾಲಿಗೆ ಹರಿಬಿಟ್ಟ ಅನ್ಯರಾಜ್ಯದ ಯುವತಿ ಮಾತಾಡಿರೋ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ, ಮಳೆ ಬರ್ತಿದ್ರೂ ವಾಹನ ಜೋರಾಗಿ ಓಡಿಸ್ತಾರೆ, ಬೆಂಗಳೂರಿನಲ್ಲಿ ಇರುವವರು ಅನಕ್ಷರಸ್ಥರು ಯುವತಿ ಕೋಪಗೊಂಡಿದ್ದಾಳೆ. ಈಗ ಒಡಿಶಾ ಮೂಲದ ಯುವತಿಯ ಮಾತಿಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ:ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?
/newsfirstlive-kannada/media/post_attachments/wp-content/uploads/2025/07/Neha-Biswal1.jpg)
ಇನ್ನೂ, ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಹೆಚ್​ ಶಿವರಾಮೇಗೌಡ ಆಕ್ರೋಶ ಹೊರ ಹಾಕಿದ್ದಾರೆ. ನ್ಯೂಸ್ ಫಸ್ಟ್​ನೊಂದಿಗೆ ಮಾತಾಡಿದ ಅವರು, ಈ ಉತ್ತರ ಭಾರತ ಜನಕ್ಕೆ ಇರುವ ಜಾಗದಲ್ಲಿ ಯಾವುದೇ ಮೂಲಭೂತ ಸೌಕರ್ಯ ಇರೋದಿಲ್ಲ. ಒಂದು ಸಂಸ್ಕಾರ ಮತ್ತು ಸಂಸ್ಕೃತಿ ಇರೋದಿಲ್ಲ. ಅಲ್ಲಿ ಅವರ ಬದುಕು ಮೂರಾಬಟ್ಟೆ ಆಗಿರುತ್ತೆ. ಬದುಕುವುದಕ್ಕಾಗಿ ಇಲ್ಲಿಗೆ ಬರುತ್ತಾರೆ. ಇತ್ತೀಚೆಗೆ ಕನ್ನಡ ಮಾತಾಡೋದಿಲ್ಲ, ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಇಂತಹ ದುರಹಂಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿನ ನೆಲ, ಭಾಷೆ ಕಲಿಬೇಕು ಅನ್ನೋದು ಅವರಲ್ಲಿ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲೇಬೇಕು ಅಂತ ಆಗ್ರಹಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/07/Neha-Biswal4.jpg)
ಅಷ್ಟೇ ಅಲ್ಲದೇ ವೈರಲ್​ ಆದ ವಿಡಿಯೋ ನೋಡಿದ ಕನ್ನಡಿಗರು, ಬೆಂಗಳೂರಿಗರು ಸರಿ ಇಲ್ಲ ಅಂದ್ರೆ ಬೆಂಗಳೂರಿಗ್ಯಾಕೆ ಬಂದ್ಯಮ್ಮ? ನಮ್ಮೂರಿಗೆ ಬಾ ಅಂತ ನಾವೇನಾದ್ರೂ ನಿನ್ನನ್ನ ಕರೆದಿದ್ವಾ? ಇಷ್ಟ ಇಲ್ಲ ಅಂದ್ರೆ ಊರು ಬಿಟ್ಟು ನಿಮ್ಮೂರಿಗೆ ವಾಪಸ್ ಹೋಗ್ಬಹುದು, ಬೆಂಗಳೂರಿಗರು ಅನಕ್ಷರಸ್ಥರಂತೀಯಾ! ಅಕ್ಷರ ಕಲಿತ ನಿನ್ನ ಜ್ಞಾನ ಎಲ್ಲಿದೆ? ಬಾಯಿಗೆ ಬಂದ ಅವಾಚ್ಯ ಪದಗಳು ಬಳಸಿದ್ದೀ.. ಇದಾ ನಿನ್ನ ಅಕ್ಷರ ಸಂಸ್ಕಾರ ಎಂದು ಕಾಮೆಂಟ್ಸ್ ಹಾಕುವ ಮೂಲಕ ಕಿಡಿ ಕಾರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us