/newsfirstlive-kannada/media/post_attachments/wp-content/uploads/2024/04/DHONI_SIXER.jpg)
ಕ್ರಿಕೆಟ್​ ಜಾತ್ರೆ ಐಪಿಎಲ್​ನಲ್ಲಿ MS ಧೋನಿಯ ಜಾತ್ರೆ ನಡೀತಾಯಿದೆ. ಇಡೀ ಟೂರ್ನಿ ಮಾಹಿಯ ಮ್ಯಾಜಿಕ್​​ಗೆ ಮಂತ್ರ ಮುಗ್ಧರಾಗಿವಾಗಿದೆ. ಚೆಪಾಕ್​, ವೈಜಾಗ್​, ವಾಂಖೆಡೆ.. ಎಲ್ಲೆ ಹೋಗಲಿ, ಧೋನಿಯದ್ದೇ ಆರಾಧನೆ. ಯಾಕಂದ್ರೆ ಧೋನಿ ಅಂದ್ರೆ ಎಲ್ಲರಿಗೂ ಇಷ್ಟ.
ಸೀಸನ್​ 17ರ ಐಪಿಎಲ್​ ಟೂರ್ನಿಯಲ್ಲಿ ಧೋನಿಯ ದರ್ಬಾರ್​ ಜೋರಾಗಿದೆ. ಹೋಮ್​ಗ್ರೌಂಡ್​ ಚೆನ್ನೈನ ಚೆಪಾಕ್​ ಬಿಟ್ಟುಬಿಡಿ. ಪಂದ್ಯವನ್ನಾಡಲು ಧೋನಿ ಯಾವುದೇ ಮೈದಾನಕ್ಕೆ ತೆರಳಲಿ ಸ್ಟೇಡಿಯಂ ಪೂರ್ತಿ ಯೆಲ್ಲೋಮಯವಾಗ್ತಿದೆ. ನಂಬರ್-​ 7 ಜೆರ್ಸಿಗಳು ರಾರಾಜಿಸ್ತಿವೆ. ಧೋನಿ.. ಧೋನಿ.. ಎಂಬ ಚಾಂಟ್​​ ಮುಗಿಲು ಮುಟ್ತಿದೆ. ಇದ್ರ ಹಿಂದಿನ ರೀಸನ್​ ಇಷ್ಟೇ.. ಧೋನಿ ಅಂದ್ರೆ ಎಲ್ಲರಿಗೂ ಇಷ್ಟ.
Absolute madness last night #MIvsCSK#Dhonipic.twitter.com/j2UHmisaCH
— Cricbuzz (@cricbuzz) April 15, 2024
ಮಹೇಂದ್ರ ಬಾಹುಬಲಿಯ ಗುಣಗಾನ ಮಾಡಿದ ರಾಯುಡು.!
ಅಂಬಟಿ ರಾಯುಡು.. ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಮುಂಬೈ ಇಂಡಿಯನ್ಸ್​ ಮಾಜಿ ಪ್ಲೇಯರ್​​​ ಎರಡೂ ಫ್ರಾಂಚೈಸಿಗಳ ಪರ ಆಡಿದ್ದ ರಾಯುಡುರ ಫೇವರಿಟ್​​ ಯಾರು ಅಂದ್ರೆ ಅದಕ್ಕೆ ಉತ್ತರ ಧೋನಿ. ರಾಯುಡು ಪ್ರಕಾರ ಕ್ರಿಕೆಟ್​ ಲೋಕಕ್ಕೆ ಒಬ್ಬನೇ ಒಬ್ಬ ಬಾಹುಬಲಿಯಂತೆ. ಅದೇ ಧೋನಿ.
ಪಂದ್ಯ ಸೋತರೂ ಧೋನಿ ಚಾಣಕ್ಷತೆಗೆ ಸಲಾಂ.!
ಕ್ರಿಕೆಟ್​ ಲೋಕ ಕಂಡ ಅಲ್ಟಿಮೆಟ್​ ಮಾಸ್ಟರ್​ ಮೈಂಡ್​ ಧೋನಿ. ವಿಕೆಟ್​ ಹಿಂದೆ ನಿಂತುಕೊಂಡೆ ರಣತಂತ್ರವನ್ನ ಹೆಣೆಯಬಲ್ಲ ರಣಬೇಟೆಗಾರ. ಮೊನ್ನೆ ಹೋಮ್​ಗ್ರೌಂಡ್​ನಲ್ಲಿ ಮುಂಬೈ ಸೋಲಿಗೆ ಶರಣಾಯ್ತು. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಕ್ಯಾಪ್ಟನ್​ ಹಾರ್ದಿಕ್​ ಮಾಡಿದ್ದು ಧೋನಿಯ ಗುಣಗಾನವನ್ನ. ಹಾರ್ದಿಕ್​ ಪ್ರಕಾರ ಇಡೀ ಪಂದ್ಯವನ್ನ ಬದಲಿಸಿದ್ದು, ವಿಕೆಟ್​ ಹಿಂದಿನ ಚಾಣಕ್ಯ ಧೋನಿಯಂತೆ.
ವಿಕೆಟ್ ಹಿಂದೆ ಇದ್ದ ವ್ಯಕ್ತಿ, ಬೌಲರ್ಗಳಿಗೆ ಏನ್ ಆಗ್ತಿದೆ ಅಂತಾ ಸದಾ ಹೇಳುತ್ತಿದ್ರು. ಅದು ಅವರಿಗೆ ಹೆಚ್ಚು ಸಹಾಯ ಮಾಡಿತು. ಬಾಲ್ ನಿಂತು ಬರುತ್ತಿದೆ ಎಂದು ಅವರಿಗೆ ಗೊತ್ತಾಯ್ತು. ಇದ್ರಿಂದಾಗಿ ಅವರು ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ರು.
ಹಾರ್ದಿಕ್ ಪಾಂಡ್ಯ, ಮುಂಬೈ ಕ್ಯಾಪ್ಟನ್
ಇದನ್ನೂ ಓದಿ: ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!
/newsfirstlive-kannada/media/post_attachments/wp-content/uploads/2024/04/NEHA_DUPIA-1.jpg)
ಫೋಟೋಗಾಗಿ ಡ್ರೆಸ್ಸಿಂಗ್​ ರೂಮ್​ಗೆ ದೌಡಾಯಿಸಿದ ಬೂಮ್ರಾ.!
ಮುಂಬೈ -ಚೆನ್ನೈ ಪಂದ್ಯ ಮುಗಿದಿದ್ದೇ ಮುಗಿದಿದ್ದು, ಸಿಎಸ್​​ಕೆ ಡ್ರೆಸ್ಸಿಂಗ್​ ರೂಮ್​ಗೆ ಮುಂಬೈ ವೇಗಿ ಜಸ್​​ಪ್ರಿತ್​ ಬೂಮ್ರಾ ದೌಡಾಯಿಸಿದ್ರು. ಅಷ್ಟು ತುರಾತುರಿಯಲ್ಲಿ ಬಂದಿದ್ದು ಧೋನಿ ಜೊತೆಗಿನ ಒಂದೇ ಒಂದು ಫೋಟೋಗಾಗಿ..
ರೋಹಿತ್ - ಕೊಹ್ಲಿ.. ಎಲ್ಲರ ಫೇವರಿಟ್​ ಧೋನಿ.!
ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​​ ಸೂಪರ್​ ಸ್ಟಾರ್​​ಗಳಾಗಿ ಬೆಳೆದಿದ್ದಾರೆ. ಇವ್ರನ್ನ ಆರಾಧಿಸೋ, ಅಭಿಮಾನಿಗಳು, ಹಾಡಿಹೊಗಳೋ ಲೆಜೆಂಡ್​​ಗಳಿಗೆ ಬರವಿಲ್ಲ.. ಎಲ್ಲರ ಫೇವರಿಟ್ ಸ್ಟಾರ್​​ಗಳಾಗಿ ಬೆಳೆದಿರೋ ಇವ್ರಿಗೆ​ ಧೋನಿಯೇ ಸರ್ವಸ್ವ. ಕ್ರಿಕೆಟ್​ ದೇವರು ಸಚಿನ್​ಗೂ​ ಧೋನಿ ಅಂದ್ರೆ ಇಷ್ಟ.
‘ಮಾಂತ್ರಿಕ ಮಾಹಿ’ ಆಟಕ್ಕೆ ಬೆರಗಾದ ಬಾಲಿವುಡ್​ ತಾರೆಯರು.!
ವಾಂಖೆಡೆ ಅಂಗಳದಲ್ಲಿ ಧೋನಿ ಬ್ಯಾಟಿಂಗ್​ಗಿಳಿದ ಕೂಡಲೇ ಸೆನ್ಸೇಷನ್​ ಸೃಷ್ಟಿಯಾಯ್ತು. ಆ ಅಬ್ಬರ ಕಂಡು ಬಾಲಿವುಡ್​ ತಾರೆಯರೂ ಕಳೆದುಹೋದ್ರು. ಸ್ವತಃ ಕ್ರಿಕೆಟ್​ ದೇವರ ಪುತ್ರಿ ಸಾರಾ ತೆಂಡುಲ್ಕರ್​ ಧೋನಿ ಎಂಟ್ರಿಯನ್ನ ತಮ್ಮ ಸೋಷಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ರು. ಧೋನಿ ಹ್ಯಾಟ್ರಿಕ್​ ಸಿಕ್ಸ್​ ಬಾರಿಸಿದ್ದನ್ನ ಕರೀನಾ ಕಪೂರ್​ ವಿಡಿಯೋ ಮಾಡಿದ್ರೆ, ಪಕ್ಕದಲ್ಲಿದ್ದ ನೇಹಾ ದುಪಿಯಾ ಹೌಹಾರಿದ್ರು.
ಇದನ್ನೂ ಓದಿ:ಪ್ರೇಯಸಿ ಸಿಕ್ಕಿಲ್ಲವೆಂದು ಹೆಣ್ಮಕ್ಕಳೇ ಟಾರ್ಗೆಟ್; ಚೂರಿ ಚುಚ್ಚಿ ​5 ಮಹಿಳೆಯರ ಬಲಿ ಪಡೆದ ಸೈಕೋ!
Neha Dhupia's reaction on MS Dhoni's sixes. 💥 pic.twitter.com/4U8Ercv4i6
— Mufaddal Vohra (@mufaddal_vohra) April 15, 2024
ಹ್ಯಾಟ್ರಿಕ್​ ಸಿಕ್ಸ್​.. ನಮಸ್ಕಾರ ಹೊಡೆದ ಮುಂಬೈ ಫ್ಯಾನ್ಸ್​.!
ಕೊನೆ ಓವರ್​ನಲ್ಲಿ ಬ್ಯಾಟಿಂಗಿಳಿದ ಧೋನಿ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿದ್ರು. ಇದನ್ನ ನೋಡಿದ ಮುಂಬೈ ಫ್ಯಾನ್ಸ್​ ಫುಲ್​ ಥ್ರಿಲ್​ ಆದ್ರು. ಮೆಜಿಶಿಯನ್​ ಮಾಹಿಗೆ ಸ್ಟ್ಯಾಂಡ್​ನಿಂದಲೇ ಶಿರಬಾಗಿ ನಮಿಸಿದ್ರು.
ಸಿಎಸ್​​ಕೆ ಕ್ಯಾಂಪ್​​ನಲ್ಲೂ ಧೋನಿಯೇ ಅಟ್ರಾಕ್ಷನ್​.!
ಎದುರಾಳಿ ತಂಡದ ಆಟಗಾರರು, ಅಭಿಮಾನಿಗಳಂತೆ ಸಿಎಸ್​​ಕೆ ತಂಡದಲ್ಲಿರೋ ಆಟಗಾರರಿಗೂ ಧೋನಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಜೂನಿಯರ್ಸ್​​, ಸೀನಿಯರ್ಸ್​ ಎನ್ನದೇ ಎಲ್ಲ ಆಟಗಾರರು ಧೋನಿ ಜೊತೆ ಸದಾ ಮಸ್ತಿ ಮಾಡ್ತಾರೆ. ಈ ಬಾರಿಯ ಟೂರ್ನಿ ಧೋನಿಯ ಪಾಲಿಗೆ ಕೊನೆಯ ಐಪಿಎಲ್​ ಎನ್ನಲಾಗ್ತಿದೆ. ಇಂಜುರಿ ಸಮಸ್ಯೆಯನ್ನೂ ಎದುರಿಸ್ತಾ ಇರೋ ಧೋನಿ, ಮುಂದಿನ ಐಪಿಎಲ್​ ಆಡೋದು ಬಹುತೇಕ ಅನುಮಾನವೇ. ಆದ್ರೆ, ಈಗಿರೋ ಕ್ರೇಜ್ ನೋಡಿದ್ರೆ,​ ಧೋನಿ ಮುಂದೆಯೂ ಆಡಲಿ ಅಂತಾ ಅನ್ನಿಸದೇ ಇರಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us