newsfirstkannada.com

ಧೋನಿ ಬ್ಯಾಟಿಂಗ್​ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್​.. ಮಾಹಿ ಸಿಕ್ಸ್​ಗೆ ಕರೀನಾ, ನೇಹಾ ಫುಲ್ ಶಾಕ್

Share :

Published April 16, 2024 at 11:02am

Update April 16, 2024 at 11:06am

    ಧೋನಿ ಯಾವುದೇ ಮೈದಾನಕ್ಕೆ ಇಳಿದರೂ ಯೆಲ್ಲೋಮಯ

    ರೋಹಿತ್, ಹಾರ್ದಿಕ್​, ಸಚಿನ್​ಗೂ ಧೋನಿ ಅಂದರೆ ಇಷ್ಟ.!

    ಧೋನಿ.. ಧೋನಿ.. ಎನ್ನುವ ಚಾಂಟ್​​ ಮುಗಿಲು ಮುಟ್ಟುತ್ತಿದೆ

ಕ್ರಿಕೆಟ್​ ಜಾತ್ರೆ ಐಪಿಎಲ್​ನಲ್ಲಿ MS ಧೋನಿಯ ಜಾತ್ರೆ ನಡೀತಾಯಿದೆ. ಇಡೀ ಟೂರ್ನಿ ಮಾಹಿಯ ಮ್ಯಾಜಿಕ್​​ಗೆ ಮಂತ್ರ ಮುಗ್ಧರಾಗಿವಾಗಿದೆ. ಚೆಪಾಕ್​, ವೈಜಾಗ್​, ವಾಂಖೆಡೆ.. ಎಲ್ಲೆ ಹೋಗಲಿ, ಧೋನಿಯದ್ದೇ ಆರಾಧನೆ. ಯಾಕಂದ್ರೆ ಧೋನಿ ಅಂದ್ರೆ ಎಲ್ಲರಿಗೂ ಇಷ್ಟ.

ಸೀಸನ್​ 17ರ ಐಪಿಎಲ್​ ಟೂರ್ನಿಯಲ್ಲಿ ಧೋನಿಯ ದರ್ಬಾರ್​ ಜೋರಾಗಿದೆ. ಹೋಮ್​ಗ್ರೌಂಡ್​ ಚೆನ್ನೈನ ಚೆಪಾಕ್​ ಬಿಟ್ಟುಬಿಡಿ. ಪಂದ್ಯವನ್ನಾಡಲು ಧೋನಿ ಯಾವುದೇ ಮೈದಾನಕ್ಕೆ ತೆರಳಲಿ ಸ್ಟೇಡಿಯಂ ಪೂರ್ತಿ ಯೆಲ್ಲೋಮಯವಾಗ್ತಿದೆ. ನಂಬರ್-​ 7 ಜೆರ್ಸಿಗಳು ರಾರಾಜಿಸ್ತಿವೆ. ಧೋನಿ.. ಧೋನಿ.. ಎಂಬ ಚಾಂಟ್​​ ಮುಗಿಲು ಮುಟ್ತಿದೆ. ಇದ್ರ ಹಿಂದಿನ ರೀಸನ್​ ಇಷ್ಟೇ.. ಧೋನಿ ಅಂದ್ರೆ ಎಲ್ಲರಿಗೂ ಇಷ್ಟ.

ಮಹೇಂದ್ರ ಬಾಹುಬಲಿಯ ಗುಣಗಾನ ಮಾಡಿದ ರಾಯುಡು.!

ಅಂಬಟಿ ರಾಯುಡು.. ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಮುಂಬೈ ಇಂಡಿಯನ್ಸ್​ ಮಾಜಿ ಪ್ಲೇಯರ್​​​ ಎರಡೂ ಫ್ರಾಂಚೈಸಿಗಳ ಪರ ಆಡಿದ್ದ ರಾಯುಡುರ ಫೇವರಿಟ್​​ ಯಾರು ಅಂದ್ರೆ ಅದಕ್ಕೆ ಉತ್ತರ ಧೋನಿ. ರಾಯುಡು ಪ್ರಕಾರ ಕ್ರಿಕೆಟ್​ ಲೋಕಕ್ಕೆ ಒಬ್ಬನೇ ಒಬ್ಬ ಬಾಹುಬಲಿಯಂತೆ. ಅದೇ ಧೋನಿ.

ಪಂದ್ಯ ಸೋತರೂ ಧೋನಿ ಚಾಣಕ್ಷತೆಗೆ ಸಲಾಂ.!

ಕ್ರಿಕೆಟ್​ ಲೋಕ ಕಂಡ ಅಲ್ಟಿಮೆಟ್​ ಮಾಸ್ಟರ್​ ಮೈಂಡ್​ ಧೋನಿ. ವಿಕೆಟ್​ ಹಿಂದೆ ನಿಂತುಕೊಂಡೆ ರಣತಂತ್ರವನ್ನ ಹೆಣೆಯಬಲ್ಲ ರಣಬೇಟೆಗಾರ. ಮೊನ್ನೆ ಹೋಮ್​ಗ್ರೌಂಡ್​ನಲ್ಲಿ ಮುಂಬೈ ಸೋಲಿಗೆ ಶರಣಾಯ್ತು. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಕ್ಯಾಪ್ಟನ್​ ಹಾರ್ದಿಕ್​ ಮಾಡಿದ್ದು ಧೋನಿಯ ಗುಣಗಾನವನ್ನ. ಹಾರ್ದಿಕ್​ ಪ್ರಕಾರ ಇಡೀ ಪಂದ್ಯವನ್ನ ಬದಲಿಸಿದ್ದು, ವಿಕೆಟ್​ ಹಿಂದಿನ ಚಾಣಕ್ಯ ಧೋನಿಯಂತೆ.

ವಿಕೆಟ್​ ಹಿಂದೆ ಇದ್ದ ವ್ಯಕ್ತಿ, ಬೌಲರ್​​ಗಳಿಗೆ ಏನ್​ ಆಗ್ತಿದೆ ಅಂತಾ ಸದಾ ಹೇಳುತ್ತಿದ್ರು. ಅದು ಅವರಿಗೆ ಹೆಚ್ಚು ಸಹಾಯ ಮಾಡಿತು. ಬಾಲ್​ ನಿಂತು ಬರುತ್ತಿದೆ ಎಂದು ಅವರಿಗೆ ಗೊತ್ತಾಯ್ತು. ಇದ್ರಿಂದಾಗಿ ಅವರು ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ರು.

ಹಾರ್ದಿಕ್ ಪಾಂಡ್ಯ, ಮುಂಬೈ ಕ್ಯಾಪ್ಟನ್

ಇದನ್ನೂ ಓದಿ: ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!

ಫೋಟೋಗಾಗಿ ಡ್ರೆಸ್ಸಿಂಗ್​ ರೂಮ್​ಗೆ ದೌಡಾಯಿಸಿದ ಬೂಮ್ರಾ.!

ಮುಂಬೈ -ಚೆನ್ನೈ ಪಂದ್ಯ ಮುಗಿದಿದ್ದೇ ಮುಗಿದಿದ್ದು, ಸಿಎಸ್​​ಕೆ ಡ್ರೆಸ್ಸಿಂಗ್​ ರೂಮ್​ಗೆ ಮುಂಬೈ ವೇಗಿ ಜಸ್​​ಪ್ರಿತ್​ ಬೂಮ್ರಾ ದೌಡಾಯಿಸಿದ್ರು. ಅಷ್ಟು ತುರಾತುರಿಯಲ್ಲಿ ಬಂದಿದ್ದು ಧೋನಿ ಜೊತೆಗಿನ ಒಂದೇ ಒಂದು ಫೋಟೋಗಾಗಿ..

ರೋಹಿತ್ – ಕೊಹ್ಲಿ.. ಎಲ್ಲರ ಫೇವರಿಟ್​ ಧೋನಿ.!

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​​ ಸೂಪರ್​ ಸ್ಟಾರ್​​ಗಳಾಗಿ ಬೆಳೆದಿದ್ದಾರೆ. ಇವ್ರನ್ನ ಆರಾಧಿಸೋ, ಅಭಿಮಾನಿಗಳು, ಹಾಡಿಹೊಗಳೋ ಲೆಜೆಂಡ್​​ಗಳಿಗೆ ಬರವಿಲ್ಲ.. ಎಲ್ಲರ ಫೇವರಿಟ್ ಸ್ಟಾರ್​​ಗಳಾಗಿ ಬೆಳೆದಿರೋ ಇವ್ರಿಗೆ​ ಧೋನಿಯೇ ಸರ್ವಸ್ವ. ಕ್ರಿಕೆಟ್​ ದೇವರು ಸಚಿನ್​ಗೂ​ ಧೋನಿ ಅಂದ್ರೆ ಇಷ್ಟ.

‘ಮಾಂತ್ರಿಕ ಮಾಹಿ’ ಆಟಕ್ಕೆ ಬೆರಗಾದ ಬಾಲಿವುಡ್​ ತಾರೆಯರು.!

ವಾಂಖೆಡೆ ಅಂಗಳದಲ್ಲಿ ಧೋನಿ ಬ್ಯಾಟಿಂಗ್​ಗಿಳಿದ ಕೂಡಲೇ ಸೆನ್ಸೇಷನ್​ ಸೃಷ್ಟಿಯಾಯ್ತು. ಆ ಅಬ್ಬರ ಕಂಡು ಬಾಲಿವುಡ್​ ತಾರೆಯರೂ ಕಳೆದುಹೋದ್ರು. ಸ್ವತಃ ಕ್ರಿಕೆಟ್​ ದೇವರ ಪುತ್ರಿ ಸಾರಾ ತೆಂಡುಲ್ಕರ್​ ಧೋನಿ ಎಂಟ್ರಿಯನ್ನ ತಮ್ಮ ಸೋಷಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ರು. ಧೋನಿ ಹ್ಯಾಟ್ರಿಕ್​ ಸಿಕ್ಸ್​ ಬಾರಿಸಿದ್ದನ್ನ ಕರೀನಾ ಕಪೂರ್​ ವಿಡಿಯೋ ಮಾಡಿದ್ರೆ, ಪಕ್ಕದಲ್ಲಿದ್ದ ನೇಹಾ ದುಪಿಯಾ ಹೌಹಾರಿದ್ರು.

ಇದನ್ನೂ ಓದಿ: ಪ್ರೇಯಸಿ ಸಿಕ್ಕಿಲ್ಲವೆಂದು ಹೆಣ್ಮಕ್ಕಳೇ ಟಾರ್ಗೆಟ್; ಚೂರಿ ಚುಚ್ಚಿ ​5 ಮಹಿಳೆಯರ ಬಲಿ ಪಡೆದ ಸೈಕೋ!

ಹ್ಯಾಟ್ರಿಕ್​ ಸಿಕ್ಸ್​.. ನಮಸ್ಕಾರ ಹೊಡೆದ ಮುಂಬೈ ಫ್ಯಾನ್ಸ್​.!

ಕೊನೆ ಓವರ್​ನಲ್ಲಿ ಬ್ಯಾಟಿಂಗಿಳಿದ ಧೋನಿ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿದ್ರು. ಇದನ್ನ ನೋಡಿದ ಮುಂಬೈ ಫ್ಯಾನ್ಸ್​ ಫುಲ್​ ಥ್ರಿಲ್​ ಆದ್ರು. ಮೆಜಿಶಿಯನ್​ ಮಾಹಿಗೆ ಸ್ಟ್ಯಾಂಡ್​ನಿಂದಲೇ ಶಿರಬಾಗಿ ನಮಿಸಿದ್ರು.

ಸಿಎಸ್​​ಕೆ ಕ್ಯಾಂಪ್​​ನಲ್ಲೂ ಧೋನಿಯೇ ಅಟ್ರಾಕ್ಷನ್​.!

ಎದುರಾಳಿ ತಂಡದ ಆಟಗಾರರು, ಅಭಿಮಾನಿಗಳಂತೆ ಸಿಎಸ್​​ಕೆ ತಂಡದಲ್ಲಿರೋ ಆಟಗಾರರಿಗೂ ಧೋನಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಜೂನಿಯರ್ಸ್​​, ಸೀನಿಯರ್ಸ್​ ಎನ್ನದೇ ಎಲ್ಲ ಆಟಗಾರರು ಧೋನಿ ಜೊತೆ ಸದಾ ಮಸ್ತಿ ಮಾಡ್ತಾರೆ. ಈ ಬಾರಿಯ ಟೂರ್ನಿ ಧೋನಿಯ ಪಾಲಿಗೆ ಕೊನೆಯ ಐಪಿಎಲ್​ ಎನ್ನಲಾಗ್ತಿದೆ. ಇಂಜುರಿ ಸಮಸ್ಯೆಯನ್ನೂ ಎದುರಿಸ್ತಾ ಇರೋ ಧೋನಿ, ಮುಂದಿನ ಐಪಿಎಲ್​ ಆಡೋದು ಬಹುತೇಕ ಅನುಮಾನವೇ. ಆದ್ರೆ, ಈಗಿರೋ ಕ್ರೇಜ್ ನೋಡಿದ್ರೆ,​ ಧೋನಿ ಮುಂದೆಯೂ ಆಡಲಿ ಅಂತಾ ಅನ್ನಿಸದೇ ಇರಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಬ್ಯಾಟಿಂಗ್​ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್​.. ಮಾಹಿ ಸಿಕ್ಸ್​ಗೆ ಕರೀನಾ, ನೇಹಾ ಫುಲ್ ಶಾಕ್

https://newsfirstlive.com/wp-content/uploads/2024/04/DHONI_SIXER.jpg

Load More