/newsfirstlive-kannada/media/post_attachments/wp-content/uploads/2024/08/SPANDANA.jpg)
ಕನ್ನಡ ಕಿರುತೆರೆಯಲ್ಲಿ ಟ್ರೆಂಡಿಂಗ್ನಲ್ಲಿರೋ ಧಾರಾವಾಹಿಗಳಲ್ಲಿ ಕರಿಮಣಿ ಕೂಡ ಒಂದು. ಟಾಪ್ ಹತ್ತರಲ್ಲಿ ಸ್ಥಾನ ಕಾಪಾಡಿಕೊಂಡು ಬಂದಿರೋ ವೀಕ್ಷಕರ ಫೇವರಿಟ್ ಸೀರಿಯಲ್ ಆಗಿದೆ. ಇನ್ನೂ, ಕರ್ಣ-ಸಾಹಿತ್ಯ ಪಾತ್ರಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇಬ್ಬರ ದಾರಿ ಬೇರೆ ಆಗಿದ್ದರೂ, ಉದ್ದೇಶ ಕುಟುಂಬಕ್ಕಾಗಿ ಬದುಕುವುದು.
ಇದನ್ನೂ ಓದಿ:ಸಂಗೀತಾ ಬರ್ತ್ ಡೇಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಸಮ್ಮಿಲನ; ಯಾರೆಲ್ಲಾ ಬಂದಿದ್ರು? ಡ್ರೋನ್ ಪ್ರತಾಪ್ ಗಿಫ್ಟ್ ಏನು?
ಸಾಹಿತ್ಯ ಕಾಲೇಜು ಮೆಟ್ಟಿಲು ಹತ್ತಿದ್ದಾಳೆ. ಅಲ್ಲಿನ ಆಗು ಹೋಗುಗಳ ಬಗ್ಗೆ ಸ್ಟೋರಿ ಸಾಗುತ್ತಿದೆ. ಆದರೆ ಕರಿಮಣಿ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರ ಮಾಡ್ತಿರೋ ಸ್ಪಂದನಾ ಮೈಸೂರಿನ ಬೆಡಗಿ. ಇತ್ತೀಚೆಗೆ ವಿಭಿನ್ನ ಕಾಸ್ಟ್ಯೂಮ್ಗಳಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮೊದಲಿಗೆ ಕಣ್ಮನ ಸೇಳೆಯೋದು ಮೈಸೂರು ಸಿಲ್ಕ್ ಸೀರೆನಲ್ಲಿ ಟ್ರೆಂಡಿಂಗ್ನಲ್ಲಿ ದ್ವಾಪರ ಹಾಡಿಗೆ ಹೆಜ್ಜೆ ಹಾಕಿರೋದು. ಸಾಂಪ್ರದಾಯಕ ಉಡುಗೆಯಲ್ಲಿ ಅಲ್ಲದೇ, ಮಾಡ್ರನ್ ಡ್ರೆಸ್ನಲ್ಲೂ ಚೆಂದವಾಗಿ ಕಾಣ್ತಾರೆ ಸ್ಪಂದನಾ.
ಕೆಂಪು ಬಣ್ಣದ ಕಾಸ್ಟ್ಯೂಮ್ನಲ್ಲಿ ಮುದ್ದು ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫ್ಲವರ್ ಲೇಡಿ ಅಂತ ಪ್ರಶಂಸಿದ್ದಾರೆ. ಬ್ಯೂಟಿಫುಲ್ ಆಗಿರೋ ಸೀರೆಯಲ್ಲಿ ಕರ್ಣನ ಹುಡುಗಿ ಮಿರ ಮಿರ ಮಿಂಚಿದ್ದಾರೆ. ಒಟ್ಟಿನಲ್ಲಿ ಸ್ಪಂದನಾ ಅವರ ಹೊಸ ಫೋಟೋಸ್ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ