/newsfirstlive-kannada/media/post_attachments/wp-content/uploads/2025/07/karimani.jpg)
ಹೊಸ ಭರವಸೆ ಜೊತೆಗೆ ಕರಿಮಣಿ ತೆರೆಗೆ ಬಂದಿತ್ತು. ಪ್ರೇಮಕಾವ್ಯ ಧಾರಾವಾಹಿಗೆ ಸ್ಥಾನ ಬಿಟ್ಟುಕೊಟ್ಟು, 413 ಸಂಚಿಕೆಗಳಿಗೆ ವಿದಾಯ ಹೇಳಿದ್ದು, ಈ ಕುರಿತು ನಾಯಕ ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ. ಜೊತೆಗೆ ಆದಷ್ಟು ಬೇಗ ನಿಮ್ಮ ಮುಂದೆ ಬರ್ತಿನಿ ಅಂತ ನಟ ಹಾಗೂ ನಟಿ ಗುಡ್​ ನ್ಯೂಸ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/02/karimani.jpg)
ಹೌದು, ನಾಯಕ ಕರ್ಣ ಪಾತ್ರಕ್ಕೆ ಜೀವ ತುಂಬಿದ್ದು ಅಶ್ವಿನ್​ ಎಚ್​. ಐಟಿ ಉದ್ಯೋಗಿಯಾಗಿದ್ದ ಅಶ್ವಿನ್​ ಸತತ 9 ವರ್ಷಗಳ ಪ್ರಯತ್ನದ ನಂತರ ಕರಿಮಣಿ ಮೂಲಕ ನಾಯಕನಾಗಿ ಲಾಂಚ್​ ಆಗಿದ್ರು. ಸಿಕ್ಕ ಅವಕಾಶವನ್ನ ಅದ್ಭುತವಾಗಿ ಬಳಿಸಿಕೊಂಡ ನಟ, ಕೆಲವೇ ದಿನಗಳಲ್ಲಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ್ರು, ಜನ ಮೆಚ್ಚಿದ ನಾಯಕನಾಗಿ ಕೂಡ ಮಿಂಚಿದ್ರು.
/newsfirstlive-kannada/media/post_attachments/wp-content/uploads/2025/02/karimani-1.jpg)
ಹಲವು ಕಾರಣಗಳಿಂದ ಕರಿಮಣಿ ಮುಕ್ತಾಯಗೊಂಡಿದ್ದು, ಹೊಸ ಪ್ರತಿಭೆಗಳಿಗೆ ಬ್ರೇಕ್ ಕೊಟ್ಟ ಧಾರಾವಾಹಿ ಅಂದ್ರು ತಪ್ಪಲ್ಲ. ಫ್ಯಾಮಿಲಿ ರೀತಿ ಬಾಂಡಿಂಗ್​ ಹೊಂದಿದ್ದ ಕಲಾವಿದರು ಸೇರಿದಂತೆ, ಇಡೀ ತಂಡ ಕೊನೆ ದಿನದ ಶೂಟಿಂಗ್​ ವೇಳೆ ​ಭಾವುಕವಾಗಿತ್ತು. ಆದಿ ಅಂತ್ಯ ಸಹಜ, ಈ ನಡುವೆ ಎಷ್ಟು ಇಂಪ್ಯಾಕ್ಟ್​ ಮಾಡ್ತೀವಿ ಅನ್ನೋದೇ ಮುಖ್ಯ. ಅದರಲ್ಲಿ ಕರಿಮಣಿ ಗೆದ್ದಿದೆ ಅಂತ ಹೇಳ್ಬಹುದು.
View this post on Instagram
/newsfirstlive-kannada/media/post_attachments/wp-content/uploads/2025/07/karimani1.jpg)
ನಟ ಅಶ್ವಿನ್​ ಎಚ್​. ನಿಮ್ಮ ಪ್ರೀತಿಯ ನಾಯಕ ಕರ್ಣ signing off. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆ ಸದಾ ನನ್ನ ಮೇಲೆ ಇರಲಿ. ಮತ್ತೆ ಸಿಗೋಣ ಆದಷ್ಟು ಬೇಗ ಎಂದು ಬರೆದುಕೊಂಡಿದ್ದಾರೆ. ಇನ್ನೂ, ಈ ಬಗ್ಗೆ ನಟಿ ಸ್ಪಂದನ ಸೋಮಣ್ಣ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/07/karimani2.jpg)
ನಾನು ಈ ಪೋಸ್ಟ್ ಮಾಡಿ ನಿಮಗೆ ವಿದಾಯ ಹೇಳಲು ಬಯಸುವುದಿಲ್ಲ. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಒಂದು ಪ್ರಾಜೆಕ್ಟ್. ನಾನು ಸಂಪೂರ್ಣವಾಗಿ ಆನಂದಿಸಿದ ಪಾತ್ರ. ಮೊದಲ ನೋಟ ಪರೀಕ್ಷೆಯಿಂದಲೇ ನಾನು ತುಂಬಾ ಉತ್ಸುಕನಾಗಿದ್ದೆ. ಮತ್ತು ಇಂದಿಗೂ ಸಹ ಕೊನೆಯ ಸಂಚಿಕೆಯನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. "ಕರಿಮಣಿ" ಗೊಂದಲದಲ್ಲಿ ನನ್ನ ಮನೆಯಾಗಿತ್ತು. ನೀವು ನನಗೆ ನೀಡಿದ ಎಲ್ಲದಕ್ಕೂ ಧನ್ಯವಾದಗಳು ಎಂಬುದು ಬಹಳ ಸಣ್ಣ ಪದ. ಆದರೆ "ಕರಿಮಣಿ" ಅತ್ಯುತ್ತಮ ಅತ್ಯುತ್ತಮ ಅಭಿಮಾನಿಗಳನ್ನು ಹೊಂದಿದೆ. ನೀವು ಪ್ರೇಕ್ಷಕರೇ ಅಭಿಮಾನಿಗಳು "ಕರಿಮಣಿ" ಯನ್ನು ತುಂಬಾ ವಿಶೇಷವಾಗಿಸಿದ್ದಾರೆ. ನನ್ನ ಕಲಾವಿದರ ಗುಂಪಿನಲ್ಲಿ ನೀವೆಲ್ಲರೂ ಅತ್ಯುತ್ತಮರು. ಎಲ್ಲರೂ ಪಾತ್ರದಲ್ಲಿ ಬದುಕಿದರು. ನಾನು ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇನೆ. ವಿಶೇಷವಾಗಿ ಹೇಮಾ ಪ್ರಭಾತ್ ಅಂತಹ ಪ್ರತಿಭಾನ್ವಿತ ಸುಂದರ ಮಹಿಳೆಯೊಂದಿಗೆ ಪರದೆಯನ್ನು ಹಂಚಿಕೊಳ್ಳುವುದು ಎಷ್ಟು ಕನಸಾಗಿತ್ತು ಎಂದು ನಾನು ನಿಮಗೆ ನೆನಪಿಸುತ್ತೇನೆ. ಹೊಸ ಪಾತ್ರದೊಂದಿಗೆ ಮತ್ತೆ ಸಿಗೋಣ ಅಂತ ಬರೆದುಕೊಂಡಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us