/newsfirstlive-kannada/media/post_attachments/wp-content/uploads/2025/07/KARIZMA-XMR.jpg)
ಕರಿಜ್ಮಾ.. ಕರಿಜ್ಮಾ (Karizma) ಅನ್ನೋ ಈ ಪದ ಬಹುಶಃ ನಮ್ಮ ಕನ್ನಡಿಗರಿಗೆ ಚಿರಪರಿಚಿತ ಆಗಿರೋದು ಅಹಂ ಪ್ರೇಮಾಸ್ಮಿ ಚಿತ್ರದಿಂದ ಅನ್ಸುತ್ತೆ. ಆ ಚಿತ್ರದಲ್ಲಿ ಬರುವ ಶರಣ್ ಅವರ ಪಾತ್ರದಲ್ಲಿ, ಈ ಬೈಕ್ನದ್ದೇ ಜಪ.. ಇನ್ನೂ, 2003ರಲ್ಲಿ ಈ ಬೈಕ್ ದೇಶದಲ್ಲಿ ಲಾಂಚ್ ಆಗಿದ್ರೂ ಕೂಡ 2005ರ ಹೊತ್ತಿಗೆ ಎಲ್ಲರ ಬಾಯಲ್ಲೂ ಇದರ ಹೆಸರು ಹರಿದಾಡಿತ್ತು. ಆಗ ಈ ಫಿಲ್ಮ್ ಕೂಡ ರಿಲೀಸ್ ಆಗಿತ್ತು.
ಇದನ್ನೂ ಓದಿ: ರಾಶಿ ರಾಶಿ ಚಿನ್ನಾಭರಣದ ಗೊಂಚಲು.. ಲೋಕಾಯುಕ್ತ ಅಧಿಕಾರಿಗಳೇ ಬೆರಗಾದ್ರು..
ಎಷ್ಟು ಪಾಪ್ಯುಲರ್ ಆಗಿತ್ತು ಅಂದ್ರೆ, ಎಲ್ಲೆಲ್ಲೂ ಇದರದ್ದೇ ಹವಾ. ಆಟೋಮೊಬೈಲ್ ವಿಷ್ಯಕ್ಕೆ ಬಂದರೆ, ಇದರ ಕ್ರೇಝ್ 2006-2008ರಲ್ಲಿ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಪ್ರತಿಯೊಬ್ಬರ ಡ್ರೀಮ್ ಬೈಕ್ ಕೂಡ ಆಗಿತ್ತು. ಅಲ್ಲಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತ ಕಂಡ ಈ ಬೈಕ್ ನಂತರ ಹೊಸ ಡಿಸೈನ್ನೊಂದಿಗೆ ಮತ್ತೊಮ್ಮೆ ರೀ-ಲಾಂಚ್ ಆಗಿತ್ತು. ಆಗ KARIZMA ZMR ಲಾಂಚ್ ಆಗಿತ್ತು. ಇದಾದ ಮೇಲೆ ಈಗಿರುವ ಪ್ರಸ್ತುತ KARIZMA XMRನ ಮಾಡೆಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಆದ್ರೆ ಅಲ್ಲಿಂದ ಇಲ್ಲಿಯವರೆಗೆ ಅಂದ್ರೆ ಸುಮಾರು 22 ವರ್ಷಗಳ ಸುದೀರ್ಘ ಜರ್ನಿಯನ್ನು ಸವೆಸಿರುವ ಈ ಬೈಕ್ ಕಡೆಯಿಂದ ಈಗ ಮತ್ತೊಂದು ಅಪ್ಡೇಟ್ ಬಂದಿದೆ.
ಈಗಿರುವ ಪ್ರಸ್ತುತ KARIZMA XMR ಮೂರು ವೇರಿಯಂಟ್ಗಳಲ್ಲಿ ಲಭ್ಯವಿತ್ತು. ಒಂದು ಬೇಸ್ ವೇರಿಯಂಟ್, ಎರಡನೇಯದ್ದು ಟಾಪ್ ವೇರಿಯಂಟ್ ಹಾಗೂ ಮತ್ತೊಂದು ಕಾಂಬ್ಯಾಟ್ ವೇರಿಯಂಟ್. ಆದ್ರೆ, ಇದೀಗ ಹೀರೋ ಕಂಪನಿ ತನ್ನ KARIZMA XMRನ ಮೂರು ವೇರಿಯಂಟ್ಗಳಲ್ಲಿ ಒಂದನ್ನು ನಿಲ್ಲಿಸೋಕೆ ಮುಂದಾಗಿದೆ. ತನ್ನ ಬೇಸ್ ವೇರಿಯಂಟ್ ಮಾಡೆಲ್ ಇನ್ಮುಂದೆ ಮಾರುಕಟ್ಟೆಯಲ್ಲಿ ಸಿಗೋದಿಲ್ಲ. ಟಾಪ್ ವೇರಿಯಂಟ್ ಪರಿಚಯಿಸಿದಾಗ, ಇದು ಬೇಸ್ ವೇರಿಯಂಟ್ಗಿಂತ 19,000 ರೂ.ಗಳಷ್ಟು ಜಾಸ್ತಿ ಬೆಲೆ ಇತ್ತು, ಬೇಸ್ ವೇರಿಯಂಟ್ನ ಬೆಲೆ ರೂ. 1.81 ಲಕ್ಷವಾಗಿತ್ತು.
ಆದ್ರೆ, ಇದೀಗ ಯಾವುದೇ ಕಾರಣಗಳನ್ನು ಕೊಡದೆ, ತನ್ನ ಬೇಸ್ ವೇರಿಯಂಟ್ನ ವೆಬ್ಸೈಟ್ನಿಂದಲೇ ಕೈಬಿಟ್ಟಿರೋದ್ರಿಂದ, ಕರಿಜ್ಮಾ XMR ಸೀರೀಸ್ ಬೈಕ್ನ ಸ್ಟಾರ್ಟಿಂಗ್ ಪ್ರೈಸ್ ಇದೀಗ 2 ಲಕ್ಷಕ್ಕೆ ಏರಿದೆ. ಹೀಗಾಗಿ ಈ ಸೀರೀಸ್ನ ಬೈಕ್ಗಳಲ್ಲಿ ನಿಮಗೆ ಈಗ ಎರಡು ವೇರಿಯಂಟ್ ಮಾತ್ರ ಲಭ್ಯವಿದೆ. ಅದೇ ಟಾಪ್ ಹಾಗೂ ಕಾಂಬ್ಯಾಟ್. ಟಾಪ್ ವೇರಿಯಂಟ್ನ ಬೆಲೆ 2 ಲಕ್ಷ ಇದ್ರೆ, ಕಾಂಬ್ಯಾಟ್ ವೇರಿಯಂಟ್ನ ಬೆಲೆ 2.02 ಲಕ್ಷ ಈಗ ಪ್ರಸ್ತುತವಾಗಿದೆ.
ಆದ್ರೆ, ಈ ವಿಷ್ಯ ಕೇಳಿ ಕರಿಜ್ಮಾ ಫ್ಯಾನ್ಸ್ ಬೇಸರಗೊಳ್ಳಬೇಕಾ ಅಂದ್ರೆ, ಖಂಡಿತ ಇಲ್ಲ.. ಯಾಕಂದ್ರೆ ಬೇಸ್ ವೇರಿಯಂಟ್ ಹಾಗೂ ಟಾಪ್ ಹಾಗೂ ಕಾಂಬ್ಯಾಟ್ ವೇರಿಯಂಟ್ಗಳಿಗೆ ಹೆಚ್ಚೇನು ವ್ಯತ್ಯಾಸ ಕಾಣಿಸೋದಿಲ್ಲ. ಈ ವ್ಯತ್ಯಾಸ ಟಾಪ್ ಹಾಗೂ ಕಾಂಬ್ಯಾಟ್ ವೇರಿಯಂಟ್ಗಲ್ಲಿ ಇನ್ನೂ ತುಂಬಾ ಕಡಿಮೆ ಇದೆ. 6-ಸ್ಪೀಡ್ ಗೇರ್‌ಬಾಕ್ಸ್‌ಗೆ 25hp ಮತ್ತು 20.4Nm ಉತ್ಪಾದಿಸುವ 210cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ನ ಜೋಡಿಸಲಾಗಿದೆ. TFT DISPLAY ಹೊಂದಿದೆ. 11 ಲೀಟರ್ ಪೆಟ್ರೋಲ್ ಕಪ್ಯಾಸಿಟಿ ಜೊತೆಗೆ ಪ್ರತಿ ಲೀಟರ್ ಪೆಟ್ರೋಲ್ಗೆ 35 ಕಿ.ಮೀ ಮೈಲೇಜ್ನ ಈ ಬೈಕ್ಗಳು ನೀಡ್ತಿವೆ.
ವಿಶೇಷ ವರದಿ: ರಾಹುಲ್ ದಯಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ