Advertisment

ಕಾರ್ಕಳ ಪರಶುರಾಮ ಮೂರ್ತಿಯ ಅಸಲಿ ರಹಸ್ಯ ರಿವೀಲ್.. ಪೊಲೀಸರಿಂದ ಚಾರ್ಜ್​ಶೀಟ್ ಸಲ್ಲಿಕೆ

author-image
Ganesh
Updated On
ಕಾರ್ಕಳ ಪರಶುರಾಮ ಮೂರ್ತಿಯ ಅಸಲಿ ರಹಸ್ಯ ರಿವೀಲ್.. ಪೊಲೀಸರಿಂದ ಚಾರ್ಜ್​ಶೀಟ್ ಸಲ್ಲಿಕೆ
Advertisment
  • ಪರಶುರಾಮ ಮೂರ್ತಿಯ ಅಸಲಿ ರಹಸ್ಯ ಕೊನೆಗೂ ಬಹಿರಂಗ
  • ಕಂಚಿನ ಮೂರ್ತಿಯಲ್ಲ.. ಹಿತ್ತಾಳೆ ಎಂದು ವರದಿಯಲ್ಲಿ ಉಲ್ಲೇಖ
  • ಪೊಲೀಸರು ಕೋರ್ಟ್​ಗೆ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಪರಶುರಾಮ.. ಶ್ರೀವಿಷ್ಣುವಿನ ಆರನೇಯ ಅವತಾರ.. ಬ್ರಹ್ಮನ ವಂಶಸ್ಥ.. ಶಿವನ ಶಿಷ್ಯ.. ರೇಣುಕ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ.. ಪಾಶ್ಚಿಮಾತ್ಯ ಕರಾವಳಿಯ ಭೂಮಿಯ ಸೃಷ್ಟಿ ಕರ್ತ.. ಇಷ್ಟೊಂದು ಮಹಾತ್ಮೆ ಇರೋ ಈ ಭಗವಂತನ ಥೀಂ ಪಾರ್ಕ್​ನಲ್ಲಿ ನಡೆದಿರೋ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳ ಪೊಲೀಸರು ಕೋರ್ಟ್ ಮುಂದೆ ಚಾರ್ಜ್ ಶೀಟ್ ಇಟ್ಟಿದ್ದಾರೆ. ಆ ತನಿಖಾ ವರದಿಯಲ್ಲಿ ಅನೇಕ ವಿಚಾರ ಬಹಿರಂಗವಾಗಿದೆ. ​

Advertisment

ಹಿತ್ತಾಳೆ ಎಂದು ವರದಿಯಲ್ಲಿ ಉಲ್ಲೇಖ

ಆಗಿನ ಸಿಎಂ ಬೊಮ್ಮಾಯಿ.. ಸಚಿವ ಸುನೀಲ್​ ಕುಮಾರ್​.. ಶೋಭ ಕರಂದ್ಲಾಜೆ.. ಬಿಜೆಪಿ ನಾಯಕರು ಪರುಶುರಾಮನ ವಿಗ್ರಹ ಲೋಕಾರ್ಪಣೆ ಮಾಡಿ.. ವಿಕ್ಟರಿ ಸಂಬಲ್​ ತೋರ್ಸಿ.. ಗೆದ್ವಿ ಅಂತ ಬೀಗಿದ್ರು. ಆದ್ರೆ, ಆಗಿನ ಬಿಜೆಪಿ ಸರ್ಕಾರಕ್ಕೆ ಕೇಳರದ ಶಿಲ್ಪಿಗಳು ಸರಿಯಾಗಿ ಟೋಪಿ ಹಾಕಿ ಮೂರ್ನಾಮ ಹಾಕಿದ್ದಾರೆ. ಇದನ್ನ ಕೋರ್ಟ್​ಗೆ ಸ್ವತಃ ಪೊಲೀಸರೇ ಚಾರ್ಜ್ ಶೀಟ್ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!

publive-image

ವಿಗ್ರಹ ನೋಡಿದ ಕೆಲವರು ಕಂಚಿನ ವಿಗ್ರಹ ಅಂದ್ರು. ಇನ್ನೂ ಕೆಲವರು ರಟ್ಟು.. ಫೈಬರ್.. ಪ್ಲಾಸ್ಟಿಕ್ ಅಂದ್ರು.. ಇನ್ನೂ ಕೆಲವ್ರು ತನಿಖೆ ಅಂದ್ರು.. ಇದೆಕ್ಕೆಲ್ಲಾ ಕಾರ್ಕಳ ಪೊಲೀಸರು ಸ್ಪೀಡ್​ ಬ್ರೇಕರ್​ ಆಕಿದ್ದಾರೆ. 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳದ ನ್ಯಾಯಾಲಯದ ಮುಂದಿಟ್ಟಿದ್ದಾರೆ.

Advertisment

ಚಾರ್ಜ್​ಶೀಟ್​​ನಲ್ಲಿ ಏನಿದೆ?

  • ಪರಶುರಾಮ ಮೂರ್ತಿಯನ್ನು ಹಿತ್ತಾಳೆಯಿಂದ ಮಾಡಲಾಗಿದೆ
  • ಕಂಚಿನ ಮೂರ್ತಿಯಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖ
  • ರಟ್ಟು, ಫೈಬರ್, ಪ್ಲಾಸ್ಟಿಕ್ ಎಂದು ವಾದ ಮಾಡುತ್ತಿದ್ದ ಕಾಂಗ್ರೆಸ್
  • ಪರಶುರಾಮ ಕಂಚಿನ ಮೂರ್ತಿ ಎಂದು ವಾದಿಸುತ್ತಿದ್ದ ಬಿಜೆಪಿ
  • ತಜ್ಞರು ಮತ್ತು ಪೊಲೀಸ್ ತನಿಖೆಯಲ್ಲಿ ಹಿತ್ತಾಳೆ ಅಂತ ಸಾಬೀತು

ಏನಿದು ಪ್ರತಿಮೆ ವಿವಾದ?

2023ರ ಜನವರಿ 27 ರಂದು ಪರಶುರಾಮ ಥೀಂ ಪಾರ್ಕ್​​ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಕ್ರಿಶ್​ ಆರ್ಟ್​ ವರ್ಲ್ಡ್​ ಸಂಸ್ಥೆಯು ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದಿತ್ತು. ನಂತರದ ದಿನಗಳಲ್ಲಿ ಅಲ್ಲಿ ಸ್ಥಾಪಿಸಲಾಗಿದ್ದ ಪರಶುರಾಮ ಮೂರ್ತಿಯನ್ನ ಫೈಬರ್​ನಿಂದ ನಿರ್ಮಿಸಲಾಗಿದೆ ಹೊರತು ಕಂಚಿನ ಪ್ರತಿಮೆ ಅಲ್ಲ ಎಂದು ಕಾಂಗ್ರೆಸ್​ ನಾಯಕರು ಮತ್ತು ಸ್ಥಳೀಯರು ಆರೋಪ ಮಾಡಿದ್ದರು.

ಇದನ್ನೂ ಓದಿ: ಸರೋಜಾದೇವಿಗಾಗಿ ಕಂಬನಿ ಮಿಡಿದ ಚಿತ್ರರಂಗ.. ಇವತ್ತು ಹುಟ್ಟೂರಿನಲ್ಲಿ ಕಲಾದೇವಿಯ ಅಂತ್ಯಕ್ರಿಯೆ..

Advertisment

publive-image

2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿಯಿಂದ ನಕಲಿ ಮೂರ್ತಿ ಅಂತ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅರ್ಧ ಮೂರ್ತಿ ತೆರವು ಮಾಡಿ ಶೆಡ್​ನಲ್ಲಿಟ್ಟು, ಬಳಿಕ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಈ ಬಗ್ಗೆ ಶಿಲ್ಪಿ ಕೃಷ್ಣನಾಯ್ಕ, ನಿರ್ಮಿತಿ ಕೇಂದ್ರದ ಅರುಣ್, ಸಚಿನ್ ವಿರುದ್ಧ ಕಂಚಿನ ಮೂರ್ತಿ ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿರೋ ಆರೋಪ ಕೇಳಿ ಬಂದಿತ್ತು. ಒಳಸಂಚು, ನಂಬಿಕೆ ದ್ರೋಹ, ವಂಚನೆ, ಸಾಕ್ಷ್ಯ ನಾಶ ಮಾಡಿದ್ದು ಎಂದು ಸಾಬೀತಾಗಿದ್ದು. ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್​ ಪಿತೂರಿಗೆ ಸೋಲು

ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್ ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ‌‌ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಪ್ರತಿಮೆ ಫೈಬರ್​ನದ್ದುದು ಎಂಬ ವ್ಯವಸ್ಥಿತ ಪಿತೂರಿಗೆ ಸೋಲಾಗಿದೆ-ಸುನೀಲ್​ ಕುಮಾರ್​, ಮಾಜಿ ಸಚಿವ

ಒಟ್ಟಾರೆ, ರಾಜಕೀಯದ ವಿವಾದಗಳ ಹೋಮಕ್ಕೆ ಬಿಸಿ ತುಪ್ಪವಾಗಿರೋ ಪರಶುರಾಮನ ಥೀಂ ಪಾರ್ಕ್ ವಿಚಾರ ಸದ್ಯ ಕೋರ್ಟ್​ ಮೆಟ್ಟಿಲೇರಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು ಸತ್ಯಾಸತ್ಯತೆ ಹೊರಬರಬೇಕಿದೆ. ನಮ್ಮ ತೆರಿಗೆ ದುಡ್ಡಿನಲ್ಲಿ ನಕಲಿ ಆಟವಾಡಿ ದುಡ್ಡು ಹೊಡೆದು ತಿಂದವರ ಸತ್ಯ ಹೊರಬರಬೇಕಿದೆ.

Advertisment

ಇದನ್ನು ಓದಿ: ಹೊಸ ಮನೆಗೆ ಕಾಲಿಟ್ಟ ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ದಂಪತಿ.. ಫೋಟೋಸ್ ಇಲ್ಲಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment