ಕೊಟ್ಟ ಮಾತಿನಂತೆ ಬರಲಿಲ್ಲ.. ಕರ್ಣ ಸೀರಿಯಲ್‌ಗೆ ಸವಾಲು ಇದೇ ಮೊದಲಲ್ಲ; ದಾನಶೂರನಿಗೆ ಏನಾಗ್ತಿದೆ?

author-image
Veena Gangani
Updated On
ಒಂದೇ ವೇದಿಕೆಯಲ್ಲಿ ಮೂವರು ಸ್ಟಾರ್ಸ್​.. ಕಿರಣ್ ರಾಜ್, ಭವ್ಯಾ, ನಮ್ರತಾ ಗೌಡರನ್ನು ನೋಡಿ ಫ್ಯಾನ್ಸ್​ ಖುಷ್​!
Advertisment
  • ಕರ್ಣ ಧಾರಾವಾಹಿ ಪ್ರಸಾರ ಆಗದಿದ್ದಕ್ಕೆ ಫ್ಯಾನ್ಸ್ ಬೇಸರ
  • ನಿನ್ನೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ
  • ಕರ್ಣನಿಗೆ ಈ ಹಿಂದೆಯೂ ಸಮಸ್ಯೆ ಆಗಿದ್ದು ನಿಜಾನಾ?

ಅಂದುಕೊಂಡಂತೆ ನಿನ್ನೆ ಕರ್ಣ ಧಾರಾವಾಹಿ ಪ್ರಸಾರ ಆಗಿದ್ದರೇ ಅಭಿಮಾನಿಗಳು ಇಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಆದ್ರೆ, ನಿನ್ನೆ ಕರ್ಣ ಧಾರಾವಾಹಿ ಪ್ರಸಾರ ಕಂಡಿಲ್ಲ. ಅಲ್ಲದೇ ನಟ ಕಿರಣ್​ ರಾಜ್​ ಅವರನ್ನ 2 ವರ್ಷಗಳ ಬಳಿಕ ಕಣ್ತುಂಬಿಕೊಳ್ಳಬೇಕು ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ ನಿನ್ನೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇದನ್ನೂ ಓದಿ: ಕರ್ಣ ಸೀರಿಯಲ್‌ ಲಾಂಚ್ ಆಗಲೇ ಇಲ್ಲ.. ಬೇಸರದಲ್ಲೇ ಕ್ಷಮೆ ಕೇಳಿದ ನಟ ಕಿರಣ್ ರಾಜ್

publive-image

ಹೌದು, ದಿಢೀರ್​ ಅಂತ ಕರ್ಣ ಡೇಟ್​ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ ಕಿರಣ್​ ರಾಜ್​. ಅದೇ ರೀತಿ ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ಗೌಡ ಅವರು ಕೂಡ ಕ್ಷಮೆ ಕೇಳಿದ್ದಾರೆ.

publive-image

ಇನ್ನೂ, ನಿಧಿ ಪಾತ್ರ ಮಾಡ್ತಿರೋ ಭವ್ಯಾ ಗೌಡ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಆಗೋದಲ್ಲ ಒಳ್ಳೆಯದಕ್ಕೆ ಎಂಬ ಅರ್ಥದಲ್ಲಿ ಟ್ರಸ್ಟ್​ ದಿ ಪ್ರೋಸಸ್​ ಎಂದು ಬರೆದುಕೊಂಡಿದ್ದಾರೆ. ಇನ್ನೂ, ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ಕರ್ಣನಿಗೆ ಕಾನೂನು ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಅಧಿಕೃತವಾಗಿ ವಾಹಿನಿ ಬಿಟ್ಟುಕೊಟ್ಟಿಲ್ಲ. ಆದ್ರೆ ಇಂಟರ್​ನಲ್ ಸಮಸ್ಸೆ ಆಗಿರೋದಂತೂ ಸತ್ಯ. ಈ ಎಲ್ಲಾ ಸವಾಲುಗಳನ್ನ ಮೀರಿ ಆದಷ್ಟು ಬೇಗ ನಾವು ನಿಮ್ಮ ಮುಂದೆ ಬರುತ್ತೇವೆ. ತಡ ಆಗಬಹುದು. ಆದರೆ ಖಂಡಿತವಾಗಿ ಬಂದೇ ಬರುತ್ತೇವೆ ಎಂದಿದೆ ತಂಡ. ಆದ್ರೆ ಈ ಹಿಂದೆಯೇ ಕರ್ಣ ಧಾರಾವಾಹಿ ಪ್ರಸಾರ ಆಗಬೇಕಾಗಿತ್ತು. ಆದ್ರೆ ಕಾರಣತರಗಳಿಂದ ಕೆಲವು ತೊಂದರೆಗಳು ಎದುರಾಗಿದ್ದವು. ಆದ್ರೂ ಆದಷ್ಟು ಬೇಗ ಸಮಸ್ಸೆಗಳನ್ನ ಬಗೆ ಹರಿಸಿಕೊಂಡು ಕರ್ಣ ತೆರೆಗೆ ಬರಲಿ ಅನ್ನೋದು ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment