/newsfirstlive-kannada/media/post_attachments/wp-content/uploads/2025/07/karna1.jpg)
ವೀಕ್ಷಕರ ಫೇವರಿಟ್​ ಲಿಸ್ಟ್​ನಲ್ಲಿ ಕರ್ಣನಿಗೆ ವಿಶೇಷ ಸ್ಥಾನ ಸಿಕ್ಕಿದೆ. ಸ್ಟಾರ್​ಗಳೇ ತುಂಬಿರೋ ಸೀರಿಯಲ್​ ಬಗ್ಗೆ ಇದ್ದ ನಿರೀಕ್ಷೆ ಹುಸಿ ಆಗಲಿಲ್ಲ. ನಂಬರ್​ ಒನ್​ ಸ್ಥಾನದಲ್ಲಿ ಕರ್ಣನ ಮೆರಗು ಮೆರವಣಿಗೆ ಮುಂದುವರೆದಿದೆ. ಹೌದು, ಶೃತಿ ನಾಯ್ಡು ನಿರ್ಮಾಣ, ರಮೇಶ್​ ಇಂದಿರಾ ಅವರ ನಿರ್ದೇಶನದ ಕೈಚಳಕ ಕ್ಲಿಕ್​ ಆಗಿದ್ದು, ಕರ್ಣನ ಮೇಕಿಂಗ್​ ಕ್ವಾಲಿಟಿ ಅಂತೂ ಅದ್ಭುತವಾಗು ಮೂಡಿ ಬಂದಿದೆ. ಫೈಟು.. ಹಾಡು.. ಡ್ಯಾನ್ಸು.. ಸ್ನೇಹ.. ಲವ್ವು.. ನೋವು.. ಅಬ್ಬಾ ಹೀಗೆ ಅರ್ಧ ಗಂಟೆ ಬ್ಲಾಕ್​ ಬಾಸ್ಟರ್​ ಸಿನಿಮಾ ನೋಡಿದ ಅನುಭವ ನೀಡ್ತಿದೆ ಕರ್ಣ ಸೀರಿಯಲ್.
/newsfirstlive-kannada/media/post_attachments/wp-content/uploads/2025/07/karna.jpg)
ಇನ್ನು, ಕಲಾವಿದರ ಬಗ್ಗೆ ಹೆಚ್ಚಿಗೆ ಮಾತೇ ಇಲ್ಲ. ಪ್ರತಿಯೊಬ್ಬರ ಅಭಿನಯಕ್ಕೂ ಒಂದಂಕ ಜಾಸ್ತಿನೇ ಕೊಡಬಹುದು. ಅದರಲ್ಲೂ ಮುಖ್ಯವಾಗಿ ಆಶಾ ಅಮ್ಮ ಹಾಗೂ ಗಾಯತ್ರಿ ಅಮ್ಮನ ಸ್ನೇಹದ ಮಾತು. ಹಿರಿ ವಯಸ್ಸಲ್ಲೂ ಮಗುವಿನ ರೀತಿ ಆಡೋ ಅವರ ನಡೆ, ನುಡಿಗೆ ವೀಕ್ಷಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟೆಲ್ಲಾ ಮಸಾಲೆದಾರ್​ ದೃಶ್ಯಗಳು ಇದ್ಮೇಲೆ ಕರ್ಣನಿಗೆ ಮನಸೋಲದೇ ಇರ್ತಾರಾ ವೀಕ್ಷಕರು? ಕರ್ಣ ಟಿಆರ್​ಪಿನಲ್ಲಿ ನಂಬರ್​ ಒನ್​. ಈ ಖುಷಿನ ಸೇಲೆಬ್ರೇಟ್​ ಮಾಡಿದೆ ಸೀರಿಯಲ್​ ತಂಡ.
/newsfirstlive-kannada/media/post_attachments/wp-content/uploads/2025/05/karna-serial3.jpg)
ಅಂದುಕೊಂಡಂತೆ ಜೂನ್​ 16ರಂದು ಕರ್ಣ ಧಾರಾವಾಹಿ ಪ್ರಸಾರ ಕಾಣಬೇಕಿತ್ತು. ಆದ್ರೆ ಅಭಿಮಾನಿಗಳು ಅಂದುಕೊಂಡಂತೆ ಆ ದಿನ ಸೀರಿಯಲ್​ ಪ್ರಸಾರ ಕಂಡಿರಲಿಲ್ಲ. ಬರೋಬ್ಬರಿ ಎರಡು ವರ್ಷಗಳ ನಂತರ ನಟ ಕಿರಣ್​ ರಾಜ್​ ಅವರನ್ನು ಕಣ್ತುಂಬಿಕೊಳ್ಳಬೇಕು ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ, ಕೆಲವು ಕಾರಣಾಂತರಗಳಿಂದ ಕರ್ಣ ಸೀರಿಯಲ್​ ಜೂನ್​ 16ರಂದು ಪ್ರಸಾರ ಕಂಡಿರಲಿಲ್ಲ. ಇದಾದ ಬಳಿಕ ಜೂಲೈ 3ರಂದು ಕರ್ಣ ಸೀರಿಯಲ್​ ಫಸ್ಟ್​ ಎಪಿಸೋಡ್​ ಪ್ರಸಾರ ಕಂಡಿತ್ತು. ಅಂದಿನಿಂದ ಇಂದಿನವರೆಗೂ ಪ್ರಸಾರಕಂಡ ಕರ್ಣ ಸೀರಿಯಲ್​ ಟಿಆರ್​ಪಿಯಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ.
/newsfirstlive-kannada/media/post_attachments/wp-content/uploads/2025/07/karna3.jpg)
ಕೇಕ್​ ಕಟ್​ ಮಾಡೋದರ ಮೂಲಕ ತಂಡಕ್ಕೆ ಹುರಿದುಂಬಿಸಿದ್ದಾರೆ ನಿರ್ಮಾಪಕಿ ಶ್ರುತಿ ನಾಯ್ಡು. ಕರ್ಣ ಸೆಟ್​ನಲ್ಲಿ ಕಲಾವಿದರು ಕುಟುಂಬದ ರೀತಿ ಇದ್ದೀವಿ. ವೀಕ್ಷಕರಿಗೆ ಥ್ಯಾಂಕ್ಯೂ ಎಂದು ಆ ಅವಿನಾಭವದ ಸಂಬಂಧದ ಕ್ಷಣಗಳನ್ನ ಹಂಚಿಕೊಂಡಿದ್ದಾರೆ ನಟಿ ನಮ್ರತಾ ಹಾಗೂ ಭವ್ಯಾ ಗೌಡ. ಇನ್ನೂ ನಮ್ಮ ಕಡೆಯಿಂದಲೂ ಇಡೀ ತಂಡಕ್ಕೆ ಶುಭ ಹಾರೈಕೆಗಳು, ಕರ್ಣನ ಯಶಸ್ಸಿನ ಓಟ ಹೀಗೆ ಮುಂದುವರೆಯಲಿ.
/newsfirstlive-kannada/media/post_attachments/wp-content/uploads/2025/07/karna2.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us