SSLC Result: ಇದೇನಿದು.. ನಂಬೋಕಾಗ್ತಿಲ್ಲ.. ಕಳೆದ ವರ್ಷಕ್ಕಿಂತ ಈ ವರ್ಷ ಇಷ್ಟೊಂದು ವಿದ್ಯಾರ್ಥಿಗಳು ಫೇಲ್​?

author-image
AS Harshith
Updated On
ಮಾ.​ 25ರಿಂದ SSLC ಪರೀಕ್ಷೆ ಆರಂಭ.. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
Advertisment
  • 20 ಪರ್ಸೆಂಟ್ ಗ್ರೇಸ್ ಮಾರ್ಕ್ ಕೊಟ್ಟರು ಪಾಸ್​ ಆಗದ ವಿದ್ಯಾರ್ಥಿಗಳು
  • ಈ ಬಾರಿ ಇಷ್ಟೊಂದು ವಿದ್ಯಾರ್ಥಿಗಳು SSLCಯಲ್ಲಿ ಫೇಲ್​ ಆಗಿದ್ದಾರಾ?
  • ವಿದ್ಯಾರ್ಥಿಗಳೇ ಟೆನ್ಶನ್​ ಬೇಡ.. 3 ಬಾರಿ ಪರೀಕ್ಷೆ ಬರೆಯೋ ಅವಕಾಶವಿದೆ

2024ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆದರೆ ಕಳೆದ ವರ್ಷವನ್ನು ಗಮನಿಸದರೆ ಈ ವರ್ಷ ಶೇ10ರಷ್ಟು ಕುಸಿತ ಕಂಡಿದೆ.

ಅಂದಹಾಗೆಯೇ ಈ ಬಾರಿ 2,87,416 (65.90%) ಬಾಲಕರು, 3,43,788 (81.11%) ಬಾಲಕಿಯರು ಪರೀಕ್ಷೆಯಲ್ಲಿ ಉತ್ತೀಣರಾಗಿದ್ದಾರೆ. ಒಟ್ಟು 8.59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2,28,763 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಪರೀಕ್ಷೆ ಫೇಲ್​ ಆದವರಿಗೆ ಮೂರು ಬಾರಿ ಪಾಸ್​ ಮಾಡಲು ಅವಕಾಶ ನೀಡಲಾಗುತ್ತದೆ.

ಇನ್ನು ಕಳೆದ ವರ್ಷ 8.35102 ಲಕ್ಷ ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿದ್ದರು. ಅದರಲ್ಲಿ 7,00,619 (83.89) ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ.

ಲಿಂಗವಾರು ಫಲಿತಾಂಶ ಹೇಗಿದೆ?

ಈ ವರ್ಷ 4,36,138 ಬಾಲಕರು ಪರೀಕ್ಷೆಗೆ ಹಾಜರಾಗಿದ್ದಾರೆ. ಅದರಲ್ಲಿ 2,87,416 (65.90%) ಬಾಲಕರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು 4,23,289 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದಾರೆ. ಅದರಲ್ಲಿ 3,43,788 (81.11%) ಬಾಲಕಿಯರು ಉತ್ತೀಣರಾಗಿದ್ದಾರೆ.

ಕಳೆದ ವರ್ಷ 4,25,968 ಬಾಲಕರು ಪರೀಕ್ಷಗೆ ಹಾಜರಾಗಿದ್ದಾರೆ. ಅದರಲ್ಲ್ಲಿ 3,411,08 ಬಾಲಕರರು ಪಾಸ್, ಇನ್ನು 4,09134 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 3,59511 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: SSLC Result: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ.. ಕೊನೆ ಸ್ಥಾನ ಯಾವುದು ಗೊತ್ತಾ?

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ

ಈ ಬಾರಿ ಓರ್ವ ವಿದ್ಯಾರ್ಥಿ 625 ಅಂಕ ಪಡೆದರೆ, ಕಳೆದ ವರ್ಷ 4 ಜನರು 625 ಅಂಕ ಪಡೆದಿದ್ದಾರೆ. ಅಂದಹಾಗೆಯೇ ಈ ಬಾರಿ ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು 625/625 ಪಡೆದು ರಾಜ್ಯಕ್ಕೆ ಫ್ರಥಮ ಸ್ಥಾನ ಪಡೆದಿದ್ದಾರೆ.

ಗ್ರೇಸ್ ಮಾರ್ಕ್​ ಕೊಟ್ಟರೂ ಕಡಿಮೆ ಅಂಕ

ಅಚ್ಚರಿ ಸಂಗತಿ ಎಂದರೆ ಈ ಬಾರಿ ಇಲಾಖೆ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ ಕೊಟ್ಟರು  ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದೆ. 20 ಪರ್ಸೆಂಟ್ ಗ್ರೇಸ್ ಮಾರ್ಕ್ ಕೊಟ್ಟರೂ ಕಡಿಮೆ ಫಲಿತಾಂಶ ಬಂದಿದೆ. 1ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment