/newsfirstlive-kannada/media/post_attachments/wp-content/uploads/2025/02/JOBS_EXAMS.jpg)
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ನಾಳೆ ಅಂದರೆ ಮಾರ್ಚ್ 01 ರಿಂದ ಆರಂಭವಾಗಲಿದ್ದು ಈಗಾಗಲೇ ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆಗಳು ನಾಳೆಯಿಂದ ಮಾರ್ಚ್ 20 ರವರೆಗೆ ನಡೆಯಲಿವೆ.
ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೆಕು. ಹಾಲ್ ಟಿಕೆಟ್, ಪೆನ್ನು ತೆಗೆದುಕೊಂಡು ಬರಬೇಕು. ವಿದ್ಯಾರ್ಥಿಗಳು ಪರೀಕ್ಷೆ ಹೇಗೆ ಬರೆಯಬೇಕು ಎನ್ನುವುದರ ಕುರಿತು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದಕ್ಕೆ ಅಭ್ಯಾಸ ಮಾಡಿದ್ದು ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನಾಳೆಯಿಂದ ನಡೆಯುವ ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ.
ಕಾಲೇಜಿಗೆ ಬಸ್ನಲ್ಲಿ ಹೋಗುವಾಗ ವಿದ್ಯಾರ್ಥಿಗಳು ತಮ್ಮ ಹಾಲ್ಟಿಕೆಟ್ ಅನ್ನು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳ ಕಂಡಕ್ಟರ್ಗೆ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಈ ಪ್ರಯಾಣವು ಕೇವಲ ಪರೀಕ್ಷೆ ಸಮಯದಲ್ಲಿ ಮಾತ್ರ ಅನುಮತಿ ಇರುತ್ತದೆ. ಈ ಬಾರಿ ಪರೀಕ್ಷೆಯನ್ನ ವೆಬ್ ಕಾಸ್ಟಿಂಗ್ ಮೂಲಕ ಮಾನಿಟರ್ ಮಾಡಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದೆ.
ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳು
- ಪರೀಕ್ಷೆಯ ಮುಖ್ಯ ಅಧೀಕ್ಷಕರು ಕ್ಯಾಮೆರಾ ಇರದ ಸಾಮಾನ್ಯ ಮೊಬೈಲ್ ಇಟ್ಟುಕೊಳ್ಳಬಹುದು
- ಎಲ್ಲಾ ಪರೀಕ್ಷಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್, ಸ್ಮಾಟ್ ವಾಚ್ ಬಳಕೆ ನಿಷೇಧ
- ಪರೀಕ್ಷೆ ಸಮಯದಲ್ಲಿ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ನಿಷೇಧ ಮಾಡಲಾಗಿದೆ
- ಪರೀಕ್ಷಾ ಕೇಂದ್ರದ ಒಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಸಂಪೂರ್ಣವಾಗಿ ನಿರ್ಬಂಧ
- ಮಾರಕ ಆಯುಧ ಹಾಗೂ ಸ್ಫೋಟಕ ವಸ್ತುಗಳನ್ನು ಪರೀಕ್ಷಾ ಆವರಣದಲ್ಲಿ ಅವಕಾಶ ಇರಲ್ಲ
- ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು, ಮಾಹಿತಿಯನ್ನು ರವಾನಿಸುವುದಕ್ಕೆ ನಿಷೇಧ
- ಮಾಹಿತಿ ತಿಳಿಸಲು ಸಂಜ್ಞೆ, ಸನ್ನೆ ಮಾಡುವುದು ಸೇರಿ ಮುಂತಾದ ಕ್ರಿಯೆಗೆ ಅವಕಾಶ ಇಲ್ಲ
- ಪರೀಕ್ಷೆ ನಡೆಯುವಾಗ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನ ನಿಷೇಧಿಸಲಾಗಿದೆ
ಇದನ್ನೂ ಓದಿ:1,161 ಕಾನ್‌ಸ್ಟೆಬಲ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ, ಅಪ್ಲೇ ಮಾಡಿ
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ-
ಮಾರ್ಚ್ 01- ಕನ್ನಡ, ಅರೇಬಿಕ್
ಮಾರ್ಚ್ 03- ಗಣಿತ, ಶಿಕ್ಷಣ ಶಾಸ್ತ್ರ, ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ
ಮಾರ್ಚ್ 04- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 05- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್ 07- ಇತಿಹಾಸ, ಭೌತಶಾಸ್ತ್ರ
ಮಾರ್ಚ್ 10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12- ಮನಃಶಾಸ್ತ್ರ, ಮೂಲ ಗಣಿತ, ರಸಾಯನಶಾಸ್ತ್ರ,
ಮಾರ್ಚ್ 13- ಅರ್ಥ ಶಾಸ್ತ್ರ
ಮಾರ್ಚ್ 15- ಇಂಗ್ಲೀಷ್
ಮಾರ್ಚ್ 17- ಭೂಗೋಳಶಾಸ್ತ್ರ
ಮಾರ್ಚ್ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನಶಾಸ್ತ್ರ
ಮಾರ್ಚ್ 19- ಮಾಹಿತಿ ತಂತ್ರಜ್ಞಾನ, ರೀಟೈಲ್, ಹಿಂದೂಸ್ತಾನಿ ಸಂಗೀತ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್
ಮಾರ್ಚ್ 20- ಹಿಂದಿ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ