newsfirstkannada.com

ಮೋದಿ 3.O ಕ್ಯಾಬಿನೆಟ್‌ನಲ್ಲಿ ಕರ್ನಾಟಕದ ಐವರಿಗೆ ಸಚಿವ ಸ್ಥಾನ; ಯಾರಿಗೆಲ್ಲಾ ಜಸ್ಟ್ ಮಿಸ್‌?

Share :

Published June 9, 2024 at 10:22pm

  ಮಾಜಿ ಸಿಎಂಗಳಾದ ಬೊಮ್ಮಾಯಿ, ಶೆಟ್ಟರ್​ಗೆ ಸಿಗದ ಸಚಿವ ಸ್ಥಾನ

  ಮೂವರಿಗೆ ಕ್ಯಾಬಿನೆಟ್ ದರ್ಜೆ, ಇಬ್ಬರಿಗೆ ರಾಜ್ಯ ಖಾತೆ ಹಂಚಿಕೆ

  ಒಕ್ಕಲಿಗ ಕೋಟಾದಲ್ಲಿ ಹೆಚ್​.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ

ದೇಶದಲ್ಲಿ ಮತ್ತೊಮ್ಮೆ ಮೋದಿ ಯುಗಾರಂಭ ಆಗಿದೆ. ಇವತ್ತು ಗೋಧೂಳಿಯ ಸಮಯ ಮುಗಿದು ಸಂಜೆಗತ್ತಲು ಆವರಿಸ್ತಿದ್ದಂತೆ ಶುಭಘಳಿಗೆಯಲ್ಲಿ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಮೋದಿ ಜೊತೆ ಹಲವರು ಸಚಿವರಾಗಿ ಸಂಪುಟ ಸೇರ್ಪಡೆಯಾಗಿದ್ದಾರೆ. ಕರ್ನಾಟಕದ ಐವರಿಗೆ ಮೋದಿ ಕ್ಯಾಬಿನೆಟ್​​​​ನಲ್ಲಿ ಸ್ಥಾನ ಲಭಿಸಿದ್ದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಮುದಾಯವಾರು ಸಚಿವ ಸ್ಥಾನ ನೀಡಿದ್ದು ಪ್ರಲ್ಹಾದ್ ಜೋಶಿ, ಹೆಚ್​.ಡಿ.ಕುಮಾರಸ್ವಾಮಿ ಸೇರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​​​ಗೆ ಕ್ಯಾಬಿನೆಟ್​​​ ಸ್ಥಾನ ಸಿಕ್ಕಿದೆ. ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣಗೆ ರಾಜ್ಯ ಖಾತೆ ನೀಡಲಾಗಿದೆ. ಕಳೆದ ಬಾರಿ ಕೃಷಿ ಖಾತೆ ರಾಜ್ಯ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಸಹ ಈ ಬಾರಿಯೂ ರಾಜ್ಯ ಖಾತೆ ಒಲಿದಿದೆ. ಇನ್ನು ಕಳೆದ ವಿಧಾನಸಭೆಯಲ್ಲಿ ಸೋತು ತುಮಕೂರು ಲೋಕಸಭಾದಿಂದ ಗೆದ್ದಿರುವ ಸೋಮಣ್ಣಗೆ ಮೊದಲ ಬಾರಿಗೆ ಕೇಂದ್ರ ಸಚಿವರಾಗುವ ಭಾಗ್ಯ ಲಭಿಸಿದೆ.

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರೋ ಮೋದಿ ಕನಸಿನ ಕ್ಯಾಬಿನೆಟ್​​​ನಲ್ಲಿ ಕರ್ನಾಟಕದ ಐವರಿಗೆ ಮಂತ್ರಿಸ್ಥಾನದ ಭಾಗ್ಯ ಸಿಕ್ಕಿದೆ. ಮೂವರಿಗೆ ಕ್ಯಾಬಿನೆಟ್​ ಖಾತೆ ಹಾಗೂ ಇಬ್ಬರಿಗೆ ರಾಜ್ಯ ಖಾತೆಗಳನ್ನು ನೀಡಲಾಗಿದೆ. ಮಾಜಿ ಸಿಎಂಗಳಾದ ಬೊಮ್ಮಾಯಿ, ಜಗದೀಶ್ ಶೆಟ್ಟರ್​​ಗೆ ಸಚಿವ ಸ್ಥಾನ ಮಿಸ್ ಆಗಿದೆ, ಡಾ.ಸಿ.ಎನ್​.ಮಂಜುನಾಥ್​​​ಗೂ ಸಚಿವ ಸ್ಥಾನ ಜಸ್ಟ್ ಮಿಸ್ ಆಗಿದೆ.

ಇದನ್ನೂ ಓದಿ: ಬರೋಬ್ಬರಿ 155 ನಿಮಿಷ.. ಪ್ರಧಾನಿ ಮೋದಿ 3.O ಸಂಪುಟ ಸೇರಿದ ಒಟ್ಟು ಕೇಂದ್ರ ಸಚಿವರು ಎಷ್ಟು?

ಮೋದಿ ಸಂಪುಟದಲ್ಲಿ ಜಗದೀಶ್ ಶೆಟ್ಟರ್, ಬೊಮ್ಮಾಯಿಗಿಲ್ಲ ಸ್ಥಾನ

ಇನ್ನು ಮೋದಿ ಕನಸಿನ ಕ್ಯಾಬಿನೆಟ್​​ನಲ್ಲಿ ಸ್ಥಾನ ಪಡೆಯಲು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್​ ಶೆಟ್ಟರ್​​​​​ ವಿಫಲರಾಗಿದ್ದಾರೆ. ಮೋದಿ ಸಂಪುಟದಲ್ಲಿ ಈ ಇಬ್ಬರಿಗೂ ಸ್ಥಾನ ನೀಡಲಾಗುತ್ತೆ ಅಂತ ಹೇಳಲಾಗ್ತಿತ್ತು. ಆದ್ರೆ ಸಚಿವ ಸ್ಥಾನ ಸಿಗದೇ ಇರೋದು ಈ ಇಬ್ಬರನ್ನು ನಿರಾಸೆಗೆ ತಳ್ಳಿದೆ. ಈ ಇಬ್ಬರು ನಾಯಕರನ್ನು ಸಮಾಧಾನಪಡಿಸುವ ಯತ್ನ ನಡೆದಿದೆ.

ಸಂಸದ ಡಾ.ಸಿ.ಎನ್.ಮಂಜುನಾಥ್​ಗೂ ಸಿಗದ ಮಂತ್ರಿಗಿರಿ!

ಇನ್ನು ರಾಜ್ಯದಿಂದ ಆಯ್ಕೆಯಾದ 17 ಬಿಜೆಪಿ ಸಂಸದರಲ್ಲಿ ಹಲವರು ಕೇಂದ್ರ ಸಚಿವರಾಗುವ ವಿಶ್ವಾಸ ಹೊಂದಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನ ಛಿದ್ರಗೊಳಿಸಿದ್ದ ಡಾ.ಸಿ.ಎನ್. ಮಂಜುನಾಥ್​ಗೂ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದ್ರೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ.. ಹೀಗಾಗಿ ಎನ್‌ಡಿಎ ಮೈತ್ರಿಕೂಟದ ಇತರೆ ಪಕ್ಷಗಳಿಗೂ ಸ್ಥಾನ ನೀಡಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ನಾಯಕರಿಗೆ ಮಂತ್ರಿಸ್ಥಾನ ಮಿಸ್ ಆಗಿದೆ. ಒಟ್ಟಾರೆ, ಈ ಬಾರಿಯ ಮೋದಿ ಸಂಪುಟದಲ್ಲಿ ಕರ್ನಾಟಕದ ಎಷ್ಟು ಮಂದಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಮುಂದೆ ಸಂಪುಟ ವಿಸ್ತರಣೆ ಆದಲ್ಲಿ ಕರ್ನಾಟಕದ ಸಂಸದರಿಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ 3.O ಕ್ಯಾಬಿನೆಟ್‌ನಲ್ಲಿ ಕರ್ನಾಟಕದ ಐವರಿಗೆ ಸಚಿವ ಸ್ಥಾನ; ಯಾರಿಗೆಲ್ಲಾ ಜಸ್ಟ್ ಮಿಸ್‌?

https://newsfirstlive.com/wp-content/uploads/2024/06/today.jpg

Load More