/newsfirstlive-kannada/media/post_attachments/wp-content/uploads/2024/07/Rajanikanth.jpg)
ಕಳೆದ ವರ್ಷ ‘ಜೈಲರ್​​​’ನಂತ ಸೂಪರ್​ ಹಿಟ್​ ಸಿನಿಮಾ ನೀಡಿದ್ದವರು ಸೂಪರ್​ ಸ್ಟಾರ್​ ರಜನಿಕಾಂತ್​​. ಜೈಲರ್​ ಸಿನಿಮಾ ಬಾಕ್ಸಾಫೀಸ್​ನಲ್ಲಿ ಕಮಾಲ್​ ಮಾಡಿತ್ತು. ಈ ಸಿನಿಮಾ ನಿರ್ಮಾಣ ಮಾಡಿದ್ದು ಸನ್ ಪಿಕ್ಚರ್ಸ್ ಸಂಸ್ಥೆ. ಸದ್ಯ ಸೂಪರ್​ ಸ್ಟಾರ್​ ರಜನಿಕಾಂತ್​​​ ಸನ್ ಪಿಕ್ಚರ್ಸ್ ಸಂಸ್ಥೆಯೊಂದಿಗೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ. ಹೊಸ ಸಿನಿಮಾಗೆ 'ಕೂಲಿ' ಅಂತ ಟೈಟಲ್ ಇಡಲಾಗಿದೆ.
ಇನ್ನು, ವಿಶೇಷ ಎಂದರೆ ಕಾಲಿವುಡ್‌ನಲ್ಲಿ ಲಿಯೋ, ಮಾಸ್ಟರ್, ಖೈದಿ, ವಿಕ್ರಮ್ ಥರದ ಹಿಟ್​ ಸಿನಿಮಾಗಳನ್ನು ಕೊಟ್ಟ ಸ್ಟಾರ್​ ಡೈರೆಕ್ಟರ್​ ಲೋಕೇಶ್ ಕನಕರಾಜ್ ರಜನಿಗೆ ಆಕ್ಷನ್​ ಕಟ್​ ಹೇಳುತ್ತಿರುವುದು. ರಜನಿಕಾಂತ್ & ಲೋಕೇಶ್ ಕನಕರಾಜ್ ಕಾಂಬಿನೇಷನ್​ನಲ್ಲಿರೋ ಮೂಡಿ ಬರುತ್ತಿರೋ 'ಕೂಲಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದಲ್ಲಿ ರಜನಿ ಜೊತೆಗೆ ಶೃತಿ ಹಾಸನ್​​ ಮತ್ತು ಸತ್ಯರಾಜ್ ಸೇರಿ ಹಲವು ಪ್ರಮುಖ ತಾರೆಯರು ನಟಿಸಲಿದ್ದಾರೆ ಎನ್ನುವಂತಿದೆ ಈ ಟ್ವೀಟ್​​. ಈ ಸಿನಿಮಾದ ತಂಡದ ಜೊತೆಗೆ ಮತ್ತೊಬ್ಬರು ಸೇರಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋವೊಂದು ಭಾರೀ ವೈರಲ್​ ಆಗಿದೆ. ಇವರು ದೊಡ್ಡ ಸೆಲಬ್ರಿಟಿ ಏನಲ್ಲ, ಬದಲಿಗೆ ಕರ್ನಾಟಕದ ಮೂಲದ ಹುಡುಗ ಅನ್ನೋದು ವಿಶೇಷ.
#Thalaivar with @MrIndian94 ❤️❤️❤️#SuperstarRajinikanth | #Coolie | #Rajinikanth | #Jailer | #CoolieTitleTeaser | #Vettaiyan | #CoolieDisco | #Superstar@rajinikanthpic.twitter.com/4LFYka35tR
— Suresh Balaji (@surbalu)
#Thalaivar with @MrIndian94 ❤️❤️❤️#SuperstarRajinikanth | #Coolie | #Rajinikanth | #Jailer | #CoolieTitleTeaser | #Vettaiyan | #CoolieDisco | #Superstar@rajinikanthpic.twitter.com/4LFYka35tR
— Suresh Balaji (@surbalu) July 9, 2024
">July 9, 2024
ಹೌದು, ಸುರೇಶ್​ ಬಾಲಾಜಿ ಎಂಬುವರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ತಲೈವರ್​​ ವಿತ್​​ ಮಿಸ್ಟರ್​ ಇಂಡಿಯನ್​​ ಎಂದು ಕೂಲಿ ಸಿನಿಮಾದ ಸೆಟ್​ನಲ್ಲಿ ತೆಗೆದಿರೋ ಫೋಟೋ ಪೋಸ್ಟ್​ ಮಾಡಿದ್ದಾರೆ. ಈ ಫೋಟೋ ಸದ್ಯ ಭಾರೀ ವೈರಲ್​ ಆಗಿದೆ.
/newsfirstlive-kannada/media/post_attachments/wp-content/uploads/2024/07/Rajesh.jpg)
ಯಾರು ಈ ಮಿಸ್ಟರ್​ ಇಂಡಿಯನ್​​..?
ಫೇಸ್​​ಬುಕ್​ನಲ್ಲಿ ಲಭ್ಯವಾಗಿರೋ ಮಾಹಿತಿ ಪ್ರಕಾರ ಮಿಸ್ಟರ್​ ಇಂಡಿಯನ್​​ ಅನ್ನೋ ಯುವಕನ ಹೆಸರು ರಾಜೇಶ್​ ಸಂಜು. ಇವರು ತಮ್ಮ ಟ್ವಿಟರ್​ ಅಕೌಂಟ್​ ಬಯೋದಲ್ಲಿ ಫಿಲ್ಮ್​ ಮೇಕಿಂಗ್​​, ಸ್ಟೋರಿ ಟೆಲ್ಲರ್​ ಎಂದು ಬರೆದುಕೊಂಡಿದ್ದಾರೆ. ಇವರು ಮೂಲತಃ ಬೆಂಗಳೂರಿನವರು ಆಗಿದ್ದು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರಾಜೇಶ್​ ಸಂಜು ಅವರು ಶಾವೊಲಿನ್ ಕುಂಗ್ ಫೂ ಕೂಡ ಕಲಿತಿದ್ದಾರೆ ಅನ್ನೋದು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಿಂದ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us