/newsfirstlive-kannada/media/post_attachments/wp-content/uploads/2024/08/KAS-EXAM.jpg)
ಬೆಂಗಳೂರು: ಗೊಂದಲ, ಪ್ರತಿಭಟನೆಗಳ ಮಧ್ಯೆ ಕೆಎಎಸ್ (ಕರ್ನಾಟಕ ಆಡಳಿತ ಸೇವೆ) ಪ್ರಿಲಿಮ್ಸ್ ಪರೀಕ್ಷೆ ಇಂದು ನಡೆಯುತ್ತಿದೆ. ಪರೀಕ್ಷೆಯಲ್ಲಿ ಸುಮಾರು 2.5 ಲಕ್ಷ ಆಕಾಂಕ್ಷಿಗಳು ಭಾಗಿಯಾಗಲಿದ್ದಾರೆ.
KAS ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಕೆಲವು ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ನಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಕೆಎಎಸ್ ಆಕಾಂಕ್ಷಿಗಳು ಪ್ರತಿಭಟನೆ ಮಾಡಿದ್ದರು. ಈ ಹೋರಾಟಕ್ಕೆ ಕೆಲವು ಬಿಜೆಪಿ ನಾಯಕರು ಸಾಥ್ ನೀಡಿದ್ದರು. ಕೊನೆ ಕ್ಷಣದವರೆಗೂ ಪರೀಕ್ಷೆ ಪೋಸ್ಟ್ ಪೋನ್ ಮಾಡಿಸುವ ಯತ್ನ ಮಾಡಲಾಗಿತ್ತು.
ಇದನ್ನೂ ಓದಿ:KAS ಪರೀಕ್ಷೆ ಮತ್ತೆ ಮುಂದೂಡಿಕೆ ಆಗುತ್ತಾ..? ಯಾಕೆ ಗೊಂದಲ? ಬೆಂಗಳೂರಲ್ಲಿ ಇಂದು ಮಹತ್ವದ ಬೆಳವಣಿಗೆ
ರಾಜ್ಯ ಸರ್ಕಾರ ಹಾಗೂ ಕೆಪಿಎಸ್ಸಿ ತನ್ನ ನಿರ್ಧಾರ ಬದಲಿಸಿಲ್ಲ. ಆಗಸ್ಟ್ 27ಕ್ಕೆ KAS ಪರೀಕ್ಷೆ ನಡೆದೆ ನಡೆಯುತ್ತೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಇಂದು ರಾಜ್ಯಾದ್ಯಂತ ಪರೀಕ್ಷೆ ಆಯೋಜನೆ ಆಗಿದೆ. ಒಟ್ಟು 384 ಹುದ್ದೆಗಳಿಗಾಗಿ ಪರೀಕ್ಷೆ ನಡೆಯುತ್ತಿವೆ. 2017-18 ಸಾಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಪರೀಕ್ಷೆ ಬರೆಯಲು ಕೊನೆ ಅವಕಾಶ ಕಲ್ಪಿಸಿದೆ. ಹೀಗಾಗಿ 2017-18 ಬ್ಯಾಚ್ನ 1500ಕ್ಕೂ ಹೆಚ್ಚು ಮಂದಿ ಈ ಪರೀಕ್ಷೆ ಬರೆಯಲಿದ್ದಾರೆ.
[caption id="attachment_82396" align="aligncenter" width="800"] ಪ್ರಾತಿನಿಧಿಕ ಚಿತ್ರ[/caption]
ಈ ಹಿಂದೆ ನಾಲ್ಕು ಬಾರಿ ಕೆಎಎಸ್ ಪರೀಕ್ಷೆ ಮುಂದೂಡಿಕೆಯಾಗಿತ್ತು. ಫೆಬ್ರುವರಿ 25ರ ಅಧಿಸೂಚನೆಯ ಪ್ರಕಾರ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು ಮೇ 05ರಂದು ನಿಗದಿಯಾಗಿತ್ತು. ಮೇ 7ರಂದು ಚುನಾವಣೆ ಇರುವ ಕಾರಣದಿಂದಾಗಿ ಜುಲೈ 7ಕ್ಕೆ ಮುಂದೂಡಲಾಗಿತ್ತು. ಆದರೆ ಆ ದಿನ UPSC ಪರೀಕ್ಷೆ ಇದ್ದ ಕಾರಣ ಜುಲೈ 21ಕ್ಕೆ ಬದಲಾಯಿಸಲಾಗಿತ್ತು. 2017-18ರ ವಯೋಮಿತಿ ನಿರ್ಬಂಧಿತ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಅವಕಾಶ ನೀಡುವ ಬೇಡಿಕೆ ಹಿನ್ನೆಲೆ ಆಗಸ್ಟ್ 25ಕ್ಕೆ ಮುಂದೂಡಿಕೆ ಆಯ್ತು.
ಆಮೇಲೆ ಅದೇ ದಿನ ಐಬಿಪಿಎಸ್ ಪರೀಕ್ಷೆ ಘೋಷಣೆಯಾದ ಹಿನ್ನೆಲೆ ಮತ್ತೆ ಎರಡು ದಿನ ಪೋಸ್ಟ್ ಪೋನ್ ಆಯ್ತು. ಆದರೆ ಇಂದು ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡಿದೆ. ಮುಂದಿನ 2 ತಿಂಗಳವರೆಗೆ ಯಾವುದೇ ಭಾನುವಾರಗಳು ಖಾಲಿ ಇಲ್ಲದ ಕಾರಣದಿಂದಾಗಿ ಕೆಲಸದ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗಿದೆ. ಹಾಗಾಗಿ ಇದೇ ದಿನ ಎಕ್ಸಾಂ ನಡೆಸಲು ಸರ್ಕಾರ ತೀರ್ಮಾನಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ