/newsfirstlive-kannada/media/post_attachments/wp-content/uploads/2025/05/Karnataka-Rain-3.jpg)
ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಆರಂಭದಲ್ಲೇ ಪೂರ್ವ ಮುಂಗಾರು ಅವಾಂತರವನ್ನ ಸೃಷ್ಟಿಸಿದೆ. ಹಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ರೆ, ಕೆಲವೆಡೆ ಜನಜೀವನವೇ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಕಂಗಾಲಾಗಿದ್ದಾರೆ.
ಮಳೆ ಬಂದು ಅವಾಂತರವನ್ನೂ ಹೊತ್ತು ತಂದಿದೆ.. ಬಿಸಿಲ ಬೇಗೆಯಿಂದ ಬಸವಳಿದಿದ್ದ ರಾಜ್ಯದ ಜನತೆ ಪೂರ್ವ ಮುಂಗಾರು ಬಂತು ಅಂತ ಖುಷಿ ಪಡುವಷ್ಟರಲ್ಲೇ, ಅದ್ರಿಂದ ಸೃಷ್ಟಿಯಾಗಿರೋ ಅವಾಂತರಗಳನ್ನ ಕಂಡು ಕಂಗಾಲಾಗಿದ್ದಾರೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ನಿನ್ನೆ ಧಾರಾಕಾರ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಗ್ರಾಮದ ಹಳ್ಳವೂ ಉಕ್ಕಿ ಹರಿದಿದ್ದು, ಮೇಯಲು ಹೋಗಿದ್ದ ಎಮ್ಮೆಗಳು ಹಳ್ಳದಲ್ಲಿ ಕೊಚ್ಚಿ ಹೋಗಿವೆ.
ಇದನ್ನೂ ಓದಿ: ಕೆಕೆಆರ್ ವಿರುದ್ಧ ನಾಳೆ ಬಲಿಷ್ಠ ಟೀಂ ಕಣಕ್ಕೆ.. ಆರ್ಸಿಬಿ ತಂಡದಲ್ಲಿ ಯಾರೆಲ್ಲ ಇರ್ತಾರೆ..?
ಬೆಳಗಾವಿ
ಎಡಬಿಡದೇ ಸುರಿದ ವರುಣ ಕುಂದಾನಗರಿ ಜನರನ್ನ ಹೈರಾಣಾಗಿಸಿದ್ದಾನೆ. ಗುಡಗು ಸಿಡಿಲು ಸಹಿತ ಬಿರುಗಾಳಿ ಮಳೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಅಬ್ಬರಕ್ಕೆ ಬೈಲಹೊಂಗಲ ತಾಲೂಕಿನ ಸುತ್ತಗಟ್ಟಿ ಗ್ರಾಮ ಪಂಚಾಯತ್ ಕಚೇರಿ ಜಲಾವೃತವಾಗಿದೆ. ಪಂಚಾಯತಿ ಕಿಟಕಿಯಿಂದ ಮಳೆ ನೀರು ಧುಮಿಕ್ಕುತ್ತಿದೆ. ನಿರಂತರ ಮಳೆಗೆ ರಸ್ತೆಗಳು ಕೆರೆಯಂತಾಗಿವೆ.
ಇದನ್ನೂ ಓದಿ: ಬೆಳ್ಳಿ ಬಳೆಗಳಿಗಾಗಿ ತಾಯಿಯ ಚಿತೆ ಮೇಲೆ ಮಲಗಿದ ಮಗ.. ದುಃಖದ ಮಡುವಿನಲ್ಲಿ ಸುಪುತ್ರನ ವಿಲಕ್ಷಣ ವರ್ತನೆ..
ತುಮಕೂರು
ಗಾಳಿ ಮಳೆಗೆ ಅತ್ತ ತುಮಕೂರಲ್ಲಿ ಮರಗಳು ಧರೆಗುರುಳಿವೆ.. ವರುಣಾರ್ಭಟಕ್ಕೆ ತಿಪಟೂರಿನ ಎಪಿಎಂಸಿಯಲ್ಲಿ ಮರ ಬಿದ್ದು ಕಾರು ಜಖಂ ಆಗಿದೆ. ಕಾರಿನ ಮೇಲ್ಭಾಗ ಸಂಪೂರ್ಣ ಹಾಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಬೆಂಗಳೂರು ಇಸ್ಕಾನ್ಗೆ ಸುಪ್ರೀಂ ಕೋರ್ಟ್ನಲ್ಲಿ ದೊಡ್ಡ ಗೆಲುವು.. ಏನಿದು ಮಾಲೀಕತ್ವದ ವಿವಾದ..?
ಬೆಂಗಳೂರು
ಇತ್ತ ಬೆಂಗಳೂರಲ್ಲೂ ಭಾರೀ ಮಳೆಗೆ ಮರ ನೆಲಕ್ಕುರುಳಿದೆ. ಶಿವಾನಂದ ಸರ್ಕಲ್ನಲ್ಲಿ ಬುಡ ಸಮೇತ ಮರ ಧರಶಾಯಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಓರ್ವ ವ್ಯಕ್ತಿ ಮರದಡಿಯಲ್ಲಿ ಸಿಲುಕಿಕೊಂಡಿದ್ರು. ಕೂಡಲೇ ಸ್ಥಳೀಯರು ಅವ್ರನ್ನ ರಕ್ಷಿಸಿದ್ದಾರೆ. ಆದ್ರೆ, ಮರ ಬಿದ್ದು ಆ ವ್ಯಕ್ತಿಯ ಕಾಲು ಕಟ್ ಆಗಿದೆ..
ಕಲಬುರಗಿ
ಬಿರುಗಾಳಿ ಮಳೆಗೆ ಅತ್ತ ಕಲಬುರಗಿ ಬಾಳೆ ಬೆಳೆ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಬಾಳಿ ನೀರುಪಾಲಾಗಿದ್ದು, ರೈತರಿಗೆ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗಿದೆ. ಕಲಬುರಗಿ ತಾಲೂಕಿನ ನಂದೂರ ಗ್ರಾಮವೊಂದರಲ್ಲೇ 80 ಎಕರೆ ಪ್ರದೇಶದಲ್ಲಿ ಬಾಳೆ ಹಾನಿಯಾಗಿದೆ. ರೈತ ಕಾಶಿರಾಯ ಎರಡುವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ಹಾನಿಯಾಗಿದ್ದು, ಅಂದಾಜು 7 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾರೆ. ಸರಕಾರ ಕೂಡಲೇ ಬೆಳೆ ಹಾನಿಗೆ ಪರಿಹಾರ ಕಲ್ಪಿಸಬೇಕೆಂದು ರೈತರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: VIDEO- ಚಿನ್ನಸ್ವಾಮಿ ಪಿಚ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಆರ್ಸಿಬಿ ಸ್ಟಾರ್.. ಫುಲ್ ಎಂಜಾಯ್!
ದಾವಣಗೆರೆ
ದಾವಣಗೆರೆಯಲ್ಲಿ ಸುರಿದ ಧಾರಾಕಾರ ಮಳೆಗೆ ಫಸಲಿಗೆ ಬಂದಿದ್ದ ಭತ್ತದ ಬೆಳೆ ನೀರು ಪಾಲಾಗಿದೆ. ದಾವಣಗೆರೆಯ ಮಿಟ್ಲಕಟ್ಟೆ, ಬಿಸಲೇರಿ, ಹರಿಹರ, ಚನ್ನಗಿರಿಯ ಸುತ್ತ-ಮುತ್ತ ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸಾವಿರ ಎಕರೆಗೂ ಹೆಚ್ಚು ಭತ್ತದ ಬೆಳೆ ನಾಶವಾಗಿದೆ. ಅಧಿಕಾರಿಗಳು ಬೆಳೆ ನಾಶಕ್ಕೆ ಪರಿಹಾರ ಇಲ್ಲಾ ಅಂತ ಹೇಳುತ್ತಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದೇ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಅಕ್ರಮ ಐಷಾರಾಮಿ ಕಾರುಗಳ ಆಮದು.. 100 ರೂ ಕೋಟಿ ಹಗರಣ, ಶೋ ರೂಂ ಮಾಲೀಕ ಅರೆಸ್ಟ್
ಮುಂದಿನ ಐದು ದಿನಗಳವರೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ, ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.. ಅದೇನೆ ಇರ್ಲಿ, ಇನ್ನೊಂದು ವಾರ ಮಳೆ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳೋದು ಒಳ್ಳೆಯದು.
ಇದನ್ನೂ ಓದಿ: ನಾಳೆ KKR ವಿರುದ್ಧ ಪಂದ್ಯ.. ಅಭಿಮಾನಿಗಳು ಮತ್ತೆ ಮತ್ತೆ ಬೇಡಿಕೊಳ್ತಿರೋದು ಏನು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್