ಕರುನಾಡ ‘ಲೋಕ’ ಅಖಾಡಕ್ಕೆ ಬಿಜೆಪಿ ಚಾಣಕ್ಯ ಎಂಟ್ರಿ.. ನಾಳೆ ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಅಮಿತ್​ ಶಾ​ ಅಬ್ಬರ..!

author-image
Bheemappa
Updated On
ಕರುನಾಡ ‘ಲೋಕ’ ಅಖಾಡಕ್ಕೆ ಬಿಜೆಪಿ ಚಾಣಕ್ಯ ಎಂಟ್ರಿ.. ನಾಳೆ ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಅಮಿತ್​ ಶಾ​ ಅಬ್ಬರ..!
Advertisment
  • ಬ್ಯಾಕ್ ಟು ಬ್ಯಾಕ್ ಸಭೆ, ಮೈತ್ರಿ ನಾಯಕರ ಜತೆ ಅಮಿತ್ ಶಾ ಮಿಂಗಲ್
  • ಡಿಕೆ ಬ್ರದರ್ಸ್​ನ ಕಟ್ಟಿ ಹಾಕಲು ಕೇಸರಿ ಪಾಳಯದ ತಂತ್ರ, ರಣತಂತ್ರಗಳು
  • ಡಿ.ಕೆ ಸುರೇಶ್ ಕ್ಷೇತ್ರದಿಂದ ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ಕಹಳೆ

ಅತಿರಥ ಮಹಾರಥರ ಆಗಮನಕ್ಕೆ ಅಣಿಯಾಗಿರೋ ಕರುನಾಡಿಗೆ ಇಂದು ಬಿಜೆಪಿ ಚುನಾವಣಾ ಚಾಣಕ್ಯ ಎಂಟ್ರಿಯಾಗಲಿದ್ದಾರೆ. ಡಿಕೆ ಬ್ರದರ್ಸ್​ ಅಖಾಡದ ಮೂಲಕವೇ ಕಾಂಗ್ರೆಸ್​ಗೆ ಠಕ್ಕರ್​ ನೀಡಲು ಕೆಸರಿ ಪಾಳಯ ಪ್ಲಾನ್ ಮಾಡಿದೆ. ನಾಳೆ ಚನ್ನಪಟ್ಟಣದಲ್ಲಿ ರೋಡ್​ ಶೋ ನಡೆಸಲಿರುವ ಅಮಿತ್ ಶಾ ಮೈತ್ರಿ ನಾಯಕರಿಗೆ ಬೂಸ್ಟ್​ ನೀಡಲಿದ್ದಾರೆ.

publive-image

ಕರುನಾಡಲ್ಲಿ ಲೊಕಸಭಾ ಕುರುಕ್ಷೇತ್ರದ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಅತಿರಥ ಮಹಾರಥರ ಆಗಮನಕ್ಕೆ ಅಖಾಡಗಳು ಸಜ್ಜಾಗತೊಡಗಿವೆ. ಯುದ್ಧ ಭೂಮಿಯಲ್ಲಿ ಮತಪ್ರಚಾರದ ಮಜಲು ಮೂಡಿಸಿ ಮತ ಬುಟ್ಟಿಯನ್ನ ಭದ್ರಗೊಳಿಸಿಕೊಳ್ಳಲು ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಈ ಮಧ್ಯೆ ಕರುನಾಡಿಗೆ ಎಂಟ್ರಿಕೊಡಲು ಬಿಜೆಪಿ ಚುನಾವಣಾ ಚಾಣಕ್ಯ ತುದಿಗಾಲಲ್ಲಿ ನಿಂತಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಪಾಳಯ ರಣತಂತ್ರಗಳನ್ನ ಹಣೆಯಲು ಮುಂದಾಗಿದೆ. ಅಬ್ಬರದ ಪ್ರಚಾರ ನಡೆಸಿ ವಿಜಯಲಕ್ಷ್ಮಿ ಒಲಿಸಕೊಳ್ಳುವ ತವಕದಲ್ಲಿದೆ. ದೇಶ ವಿಭಜನೆಯ ಬಗ್ಗೆ ಮಾತನಾಡಿದ್ದ ಡಿ.ಕೆ ಸುರೇಶ್ ಕ್ಷೇತ್ರದಿಂದ ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ಕಹಳೆ ಮೊಳಗಿಸಲಿದ್ದಾರೆ.

ಡಿಕೆ ಬ್ರದರ್ಸ್​ ತವರಲ್ಲಿ ಅಮಿತ್​ ಶಾ ಮಿಂಚಿನ ಸಂಚಲನ

ಇಂದು ರಾತ್ರಿ 11 ಗಂಟೆಗೆ ರಾಜಧಾನಿ ಬೆಂಗಳೂರಿಗೆ ಬಂದಿಳಿಯಲಿರುವ ಅಮಿತ್ ಶಾ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ..

ಡಿಕೆ ಕೋಟೆಗೆ ಅಮಿತ್ ಶಾ ಲಗ್ಗೆ

  • ನಾಳೆ ಮೈತ್ರಿ ಪಕ್ಷದ ಪ್ರಮುಖರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್
  • ಮೈತ್ರಿ ಪಕ್ಷದ ಪ್ರಮುಖರ ಜೊತೆ ಅಮಿತ್ ಶಾ ಕ್ಲಸ್ಟರ್​ವಾರು ಸಭೆ
  • ನಾಯಕರ ಜೊತೆ ಗ್ರೌಂಡ್ ರಿಪೋರ್ಟ್ ಬಗ್ಗೆ ಶಾ ಸಮಾಲೋಚನೆ
  • ನಾಳೆ ಮ. 12 ಗಂಟೆಗೆ ಬೂತ್ ಪ್ರಮುಖರ ಸಮಾವೇಶದಲ್ಲಿ ಭಾಗಿ
  • ಮಧ್ಯಾಹ್ನ 3 ಗಂಟೆಗೆ ಖಾಸಗಿ ಹೊಟೇಲ್​ನಲ್ಲಿ ಕೋರ್​ ಕಮಿಟಿ ಸಭೆ
  • ಅಸಮಾಧಾನಿತರಿರುವ ಕ್ಷೇತ್ರದ ಕುರಿತು ಮಾಹಿತಿ ಪಡೆಯುವ ಶಾ
  • ಕ್ಷೇತ್ರದ ಹತ್ತು ಹಲವು ಸಮಸ್ಯೆ ಬಗ್ಗೆ ಅಮಿತ್ ಶಾ ಸುದೀರ್ಘ ಚರ್ಚೆ

publive-image

ಬೊಂಬೆನಗರಿಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್​ ಪರವಾಗಿ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಚನ್ನಪಟ್ಟಣದಲ್ಲಿ 1.5 ಕಿ.ಮೀ ಉದ್ದ ಬೃಹತ್ ರೋಡ್ ಶೋ ನಡೆಸಲಿರುವ ಅಮಿತ್ ಶಾಗೆ ಬಿಜೆಪಿ-ಜೆಡಿಎಸ್ ನಾಯಕರು ಸಾಥ್​ ನೀಡಿಲಿದ್ದಾರೆ. ನಾಳೆ ಸಂಜೆ 6 ಗಂಟೆಗೆ ಚನ್ನಪಟ್ಟಣದ ಮೈತ್ರಿ ಸಮಾವೇಶದಲ್ಲಿ ಭಾಗವಹಿಸಲಿರುವ ಅಮಿತ್ ಶಾ, ಮತಯಾಚನೆ ಮಾಡಲಿದ್ದಾರೆ. ಈ ಮೂಲಕ 10 ಜಿಲ್ಲೆಯ ಅಭ್ಯರ್ಥಿಗಳಿಗೆ ಚಾಣಾಕ್ಯ ಬೂಸ್ಟ್ ನೀಡಲಿದ್ದಾರೆ.

ಡಿಕೆ ಬ್ರದರ್ಸ್​ನ ಕಟ್ಟಿ ಹಾಕಲು ಕೇಸರಿ ಪಾಳಯ ತಂತ್ರ ರಣತಂತ್ರಗಳನ್ನ ಹೂಡಿದ್ದು ಅಮಿತ್ ಶಾ ಮೂಲಕ ಠಕ್ಕರ್​ ನೀಡಲು ಸಜ್ಜಾಗಿದೆ.. ಬೆಂಗಳೂರು ಗ್ರಾಮಾಂತರದ ಮೂಲಕವೇ ಕರುನಾಡ ಲೋಕ ಅಖಾಡಕ್ಕೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ.. ಡಿಕೆ ಸುರೇಶ್​ ನೀಡಿದ್ದ ವಿಭಜನೆ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment