newsfirstkannada.com

ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣದ ಗದ್ದಲ; ಸಾರಿಗೆ ಬಸ್​ಗಳ ಕಂಡಕ್ಟರ್​ಗಳಿಗೆ ಧರ್ಮ ಸಂಕಟ

Share :

Published June 2, 2023 at 1:39am

Update June 2, 2023 at 4:48am

    ಮಹಿಳೆಯರು ಬಸ್​​ ಟಿಕೆಟ್​ ಪಡೆಯಲು ನಿರಾಕರಣೆ

    ಮಹಿಳೆಯರಿಗೆ ಆಟ ಕಂಡಕ್ಟರ್​ಗಳಿಗೆ ಧರ್ಮ ಸಂಕಟ

    ಇಂದು ಸಿಎಂ ಗ್ಯಾರಂಟಿ ಯೋಜನೆ ಬಗ್ಗೆ ಘೋಷಣೆ

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ಸಾರಿಗೆ ಬಸ್​ಗಳ ಕಂಡಕ್ಟರ್​ಗಳಿಗೆ ಧರ್ಮ ಸಂಕಟ ಶುರುವಾಗಿದೆ. ಇತ್ತ ಸರ್ಕಾರವೂ ಸರಿಯಾಗಿ ಹೇಳ್ತಿಲ್ಲ. ಅತ್ತ ಮಹಿಳಾ ಪ್ರಯಾಣಿಕರು ಮಾತು ಕೇಳ್ತಿಲ್ಲ. ಸಾರಿಗೆ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರು ಟಿಕೆಟ್​ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದು, ಈ ಎಲ್ಲ ಗೊಂದಲಗಳಿಗೂ ಇಂದು ಬ್ರೇಕ್​ ಬೀಳುವ ಸಾಧ್ಯತೆ ಇದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅನ್ನುವಂತಾಗಿದೆ, ಸರ್ಕಾರಿ ಬಸ್​ ಕಂಕ್ಟರ್​ಗಳ ಪರಿಸ್ಥಿತಿ. ಸಾರಿಗೆ ಬಸ್​ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಸರ್ಕಾರ ಇನ್ನೂ ಯಾವುದೇ ಸ್ಪಷ್ಟವಾದ ಆದೇಶವಾಗಲಿ, ಸೂಚನೆಯನ್ನಾಗಲಿ ನೀಡಿಲ್ಲ. ಇಂದು ಎನ್ನುತ್ತಲೇ ದಿನವನ್ನು ದೂಡ್ತಿದೆ. ಮತ್ತೊಂದೆಡೆ ಮಹಿಳಾ ಪ್ರಯಾಣಿಕರು, ಟಿಕೆಟ್​ ತೆಗೆದುಕೊಳ್ಳಲು ನಿರಾಕರಣೆ ಮಾಡ್ತಿದ್ದಾರೆ. ಮತ್ತೆ ಕೆಲವರು ಸಾರಿಗೆ ಬಸ್​ಗಳ ನಿರ್ವಾಹಕ ಜೊತೆಗೆ ಗುದ್ದಾಟಕ್ಕೆ ಇಳಿತಿದ್ದಾರೆ. ಇದು ಸಾರಿಗೆ ಬಸ್​ ನಿರ್ವಾಹಕರಿಗೆ ದೊಡ್ಡ ತೆಲೆನೋವಾಗಿ ಪರಿಣಮಿಸಿದೆ.

ಸಾರಿಗೆ ಬಸ್​ಗಳಲ್ಲಿ ಟಿಕೆಟ್​​ ಪಡೆಯಲು ಮಹಿಳೆಯರ ನಿರಾಕರಣೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಿಳೆಯ ಉಚಿತ ಪ್ರಯಾಣದ ಗದ್ದಲ ಜೋರಾಗುತ್ತಿದೆ. ಬಸ್​ ಟಿಕೆಟ್​​ ಪಡೆಯಲು ಮಹಿಳೆಯರ ನಿರಾಕರಣೆ ಮಾಡ್ತಿದ್ದಾರೆ. ಇದಕ್ಕೆ ಈ ದೃಶ್ಯವೇ ಸಾಕ್ಷಿ. ಯಾದಗಿರಿ ಶಹಾಪುರದಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್​ನಲ್ಲಿ ಟಿಕೆಟ್​ ಯಾಕೆ ತೆಗೆದುಕೊಳ್ಬೇಕು ಎಂದು ನಿರ್ವಾಹಕರ ಜೊತೆ ವಾದ ಮಾಡಿದ್ದಾರೆ. ಕೊನೆಗೆ ಕಂಡಕ್ಟರ್​ ಮನವೊಲಿಸಿದ ಬಳಿಕ ಕಾಂಗ್ರೆಸ್​ ಸರ್ಕಾರವನ್ನು ಶಪಿಸುತ್ತಲೇ ಟಿಕೆಟ್​ ತೆಗೆದುಕೊಂಡು ಪ್ರಯಾಣ ಮಾಡಿದ್ದಾರೆ.

ಇಂದು ಮೊದಲ ಗ್ಯಾರೆಂಟಿಯಾಗಿ ಫ್ರೀ ಪ್ರಯಾಣ ಘೋಷಣೆ

ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಬಗ್ಗೆ ಗಲಾಟೆ ಜೋರಾಗ್ತಿದ್ದಂತೆ ಸಾರಿಗೆ ಸಚಿವರು, ಉಚಿತ ಪ್ರಯಾಣಕ್ಕೆ ಆದಾಯ ಕ್ರೋಢೀಕರಣದ ಬಗ್ಗೆ ತಲೆ ಕೆಡಿಸಿಕೊಂಡು ಕುಳಿತಿದ್ದಾರೆ. ಈ ಯೋಜನೆಯ ಜಾರಿಗೆ ಇರುವ ಸಾಧಕ ಭಾದಕಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿ, ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇವತ್ತು ಕೂಡ, ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದ್ದರು.

ಸಂಸ್ಥೆಯಲ್ಲಿ ಎಷ್ಟು ಬಸ್​ಗಳಿವೆ, ಎಷ್ಟು ಪ್ರತಿನಿತ್ಯ ಬಸ್​ಗಳು ಕಾರ್ಯಾಚರಣೆ ಮಾಡುತ್ತವೆ. ಬಸ್​ಗಳ ಕಂಡಿಷನ್ ಹೇಗಿದೆ, ಎಷ್ಟು ಹೊಸ ಬಸ್​ಗಳ ಅಗತ್ಯವಿದೆ. ಎಷ್ಟು ಜನ ನೌಕರರಿದ್ದಾರೆ. ಸಂಸ್ಥೆಗೆ ಎಷ್ಟು ನೌಕರರ ಅಗತ್ಯವಿದೆ. ಪ್ರತಿನಿತ್ಯ ಬಸ್ ಕಾರ್ಯಾಚರಣೆಯಿಂದ ಬರುವ ಆದಾಯವೆಷ್ಟು. ಬೇರೆ ಬೇರೆ ಮೂಲದಿಂದ ಬಿಎಂಟಿಸಿಗೆ ಎಷ್ಟು ಆದಾಯ ಬರುತ್ತೆ. ಬೇರೆ ಮೂಲದಿಂದ ಬಿಎಂಟಿಸಿಗೆ ಆದಾಯ ತರಲು ಸಾಧ್ಯವಿದ್ಯಾ. ಆದಾಯ ಹೆಚ್ಚಳಕ್ಕೆ ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬಹುದು. ಆದಾಯ ಸೋರಿಕೆ ತಡೆಯಲು ಏನು ಮಾಡಬಹುದು. ಮಹಿಳೆಯರ ಉಚಿತ ಪ್ರಯಾಣದಿಂದ ಇಲಾಖೆಗೆ ಆಗುವ ನಷ್ಟವೆಷ್ಟು. ಹೀಗೆ ಹಲವು ವಿಚಾರಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ರು.

ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾಳೆ ಸಭೆ ಮಾಡುತ್ತೇವೆ. ಬಳಿಕ ಮುಖ್ಯಮಂತ್ರಿ ಅವರು ಸುದ್ದಿಗೋಷ್ಠಿಯಲ್ಲಿ ಎಲ್ಲ ಮಾಹಿತಿಯನ್ನು ನೀಡಿದ್ದಾರೆ.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು

ಒಟ್ಟಾರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್​, ಹೈಸ್ಪೀಡ್​ನಲ್ಲಿ ಘೋಷಣೆ ಮಾಡಿತ್ತು. ಆದ್ರೀಗ ಅಧಿಕಾರಕ್ಕೆ ಬಂದ್ಮೇಲೆ, ಗ್ಯಾರೆಂಟಿಗಳ ಜಾರಿಗೆ ವಿಳಂಬ ಮಾಡ್ತಿರೋದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್​ ನಡೆದುಕೊಳ್ಳುತ್ತಾ. ಇಲ್ವಾ ಅನ್ನೋದು ಇಂದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣದ ಗದ್ದಲ; ಸಾರಿಗೆ ಬಸ್​ಗಳ ಕಂಡಕ್ಟರ್​ಗಳಿಗೆ ಧರ್ಮ ಸಂಕಟ

https://newsfirstlive.com/wp-content/uploads/2023/06/SIDDU-5-1.jpg

Load More