newsfirstkannada.com

ರಾಜ್ಯಕ್ಕೆ ಮುಂಗಾರು ಆಗಮನ.. ಈ ಸಲ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆದ ಜಿಲ್ಲೆ ಯಾವುದು?

Share :

Published June 3, 2024 at 8:44pm

  ₹13 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ ಬಾವಿ ಮಳೆಯಿಂದ ಮುಳುಗಿದೆ

  ರಾಜ್ಯದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆದುಕೊಂಡ ಜಿಲ್ಲೆ ಯಾವುದು?

  ಕರ್ನಾಟಕಕ್ಕೆ ಮುಂಗಾರು ಮಳೆ ಆಗಮನದ ದಿನವೇ ಅವಾಂತರ ಸೃಷ್ಟಿ

ಕೇರಳ ಮೂಲಕ ದೇಶಕ್ಕೆ ಎಂಟ್ರಿ ಕೊಟ್ಟಿದ್ದ ಮುಂಗಾರು ಮಳೆ ಇದೀಗ ಅಧಿಕೃತವಾಗಿ ಕರ್ನಾಟಕ ರಾಜ್ಯಕ್ಕೆ ಕಾಲಿಟ್ಟಿದೆ. ಮುಂಗಾರು ಆಗಮನದ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯಕ್ಕೆ ಆಗಮನದ ಮೊದಲ ದಿನವೆ ಮುಂಗಾರು ಮಳೆಯಿಂದಾಗಿ ಅವಾಂತರಗಳ ಸರಮಾಲೆಯನ್ನೇ ಹೊತ್ತುಕೊಂಡು ಬಂದಿದೆ.

ಕರ್ನಾಟಕಕ್ಕೆ ಅಧಿಕೃತವಾಗಿ ಮುಂಗಾರು ಮಳೆ ಎಂಟ್ರಿ

ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗ್ಲೇ ಮುಂಗಾರು ಮಳೆಯ ಎಂಟ್ರಿಯಾಗಿದೆ. ರಾಜ್ಯದಲ್ಲಿ ಹಿಂಗಾರು ಮಳೆಯೇ ಇಷ್ಟು ದಿನ ಆರ್ಭಟಿಸುತ್ತಿತ್ತು. ಆದ್ರೀಗ ದಕ್ಷಿಣ ಕರ್ನಾಟಕ ಭಾಗಕ್ಕೆ ಮುಂಗಾರು ಮಳೆಯ ಎಂಟ್ರಿಯಾಗಿದೆ. ಕರಾವಳಿ, ಮಲೆನಾಡು, ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯ ಆಗಮನವಾಗಿದೆ. ರಾಜ್ಯಕ್ಕೆ ಮುಂಗಾರು ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ. ಕರುನಾಡಿಗೆ ಮುಂಗಾರು ಆಗಮನದ ಮೊದಲ ದಿನವೇ ಅವಾಂತರಗಳ ಸಂಕೋಲೆಯನ್ನೇ ತಂದೊಡ್ಡಿದೆ.

ಉದ್ಯಾನ ನಗರಿಯಲ್ಲಿ 133 ವರ್ಷದ ದಾಖಲೆ ಮುರಿದ ವರುಣ

ರಾಜ್ಯ ರಾಜಧಾನಿಯಲ್ಲಿ ಮಳೆಯ ಆರ್ಭಟಕ್ಕೆ 133 ವರ್ಷದ ಹಿಂದಿನ ದಾಖಲೆ ಮುರಿದುಬಿದ್ದಿದೆ. ಒಂದು ತಿಂಗಳು ಸುರಿಯುವ ಮಳೆ ನಿನ್ನೆ ಒಂದೇ ದಿನ ಸುರಿದಿದೆ. 1891ರಲ್ಲಿ ಜೂನ್‌ ತಿಂಗಳಲ್ಲಿ ಕೇವಲ 24 ಗಂಟೆಯಲ್ಲಿ 101.5 ಮಿಲಿಮೀಟರ್ ಮಳೆಯಾಗಿತ್ತು. ಆದ್ರೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ 111 ಮಿಲಿ ಮೀಟರ್ ಮಳೆಯಾಗಿದೆ. ಜೂನ್ ಆರಂಭವಾಗಿ ಇನ್ನೂ 3 ದಿನವಾಗಿದೆ. ಅಷ್ಟರಲ್ಲಿ 141 ಮೀಟರ್ ವರುಣ ಅಬ್ಬರಿಸಿದ್ದಾನೆ. ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ 40 ಮಿಲಿಮೀಟರ್‌ನಿಂದ 110 ಮಿಲಿಮೀಟರ್‌ವರೆಗೂ ಮಳೆಯಾಗಿದೆ. ನಿನ್ನೆ ಸಂಜೆಯಿಂದ ತಡರಾತ್ರಿವರೆಗೂ ಸುರಿದ ಮಳೆಗೆ ಕೆಲವು ಕಡೆ ಅಂಡರ್‌ಪಾಲ್ ಜಲಾವೃತವಾಗಿದ್ರೆ, ಮತ್ತೊಂದೆಡೆ ಮರಗಳು ನೆಲಕ್ಕುರುಳಿದ್ವು.

ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿದ್ದು ಬಾಗಲಕೋಟೆ ಜಿಲ್ಲೆ

ಬಾಗಲಕೋಟೆ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆೆಗೆ ಇಳಕಲ್ ತಾಲೂಕಿನ ಕರಡಿ ಹಳ್ಳ ತುಂಬಿ ಹರಿಯುತ್ತಿದೆ. ರಸ್ತೆ ಕೂಡ ಜಲಾವೃತವಾಗಿರೋದ್ರಿಂದ ಸಂಚಾರಕ್ಕೆ ನಿಷೇಧಿಸಲಾಗಿದೆ. ಮತ್ತೊಂದೆಡೆ ನಿರ್ಮಾಣ ಹಂತದ ಕಾಲುವೆಯಿಂದ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ. 13 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ ಬಾವಿ ಕೂಡ ಮಳೆಯಿಂದ ಮುಳುಗಡೆಯಾಗಿದೆ. ಇನ್ನು, ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿರೋ ಜಿಲ್ಲೆಯಾಗಿದೆ. ಬಿಂಜವಾಡಗಿ ಗ್ರಾಮದ ವ್ಯಾಪ್ತಿಯಲ್ಲಿ 145.5 ಮಿಲಿ ಮೀಟರ್ ದಾಖಲೆಯ ಮಳೆಯಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ. ಬೂದಿಹಾಳ ಎಸ್‌ಕೆ ಗ್ರಾಮದಲ್ಲಿ 122 ಮಿಲಿ ಮೀಟರ್ ಮಳೆ ಆದ್ರೆ, ಜಂಬಲದಿನ್ನಿ ಗ್ರಾಮದಲ್ಲಿ 103 ಮಿಲಿ ಮೀಟರ್‌ನಷ್ಟು ವರುಣ ಅಬ್ಬರಿಸಿದ್ದಾನೆ.

ಇದನ್ನೂ ಓದಿ: ಮನೆಗೆ ನುಗ್ಗಿದ್ದು ಕಳ್ಳತನಕ್ಕೆ.. ಆದ್ರೆ ಎಸಿ ಆನ್ ಮಾಡಿ ಗಡದ್ ನಿದ್ದೆ ಹೊಡೆದ.. ಖದೀಮನನ್ನ ಬೆಳಗ್ಗೆ ಎಬ್ಬಿಸಿದ್ಯಾರು?

ಅಂತೂ ಇಂತೂ ರಾಜ್ಯಕ್ಕೆ ಮುಂಗಾರು ಮಳೆಯ ಎಂಟ್ರಿಯೆನೋ ಆಗಿದೆ. ಆದ್ರೆ ಆಗಮನದ ಮೊದಲೇ ದಿನವೇ ಇಷ್ಟೆಲ್ಲ ಅವಾಂತರ ಸೃಷ್ಟಿಯಾದ್ರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಬರಬಹುದು. ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಕ್ಕೆ ಮುಂಗಾರು ಆಗಮನ.. ಈ ಸಲ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆದ ಜಿಲ್ಲೆ ಯಾವುದು?

https://newsfirstlive.com/wp-content/uploads/2024/06/BGK_RAINS_1.jpg

Load More