ಕರ್ನಾಟಕ ಬಂದ್ ದಿನಾಂಕ ಚೇಂಜ್ ಆಗುತ್ತಾ.. ಆಕ್ಷೇಪ ಯಾಕೆ ಗೊತ್ತಾ?

author-image
Bheemappa
Updated On
ಕರ್ನಾಟಕ ಬಂದ್ ದಿನಾಂಕ ಚೇಂಜ್ ಆಗುತ್ತಾ.. ಆಕ್ಷೇಪ ಯಾಕೆ ಗೊತ್ತಾ?
Advertisment
  • ಬಂದ್​ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಕೆಲ ಕನ್ನಡ ಸಂಘಟನೆಗಳು
  • ಮಾರ್ಚ್​ 22 ಕ್ಕೆ ಕರ್ನಾಟಕ ಬಂದ್​ಗೆ ಘೋಷಣೆ ಮಾಡಲಾಗಿತ್ತು
  • ಬಂದ್ ದಿನಾಂಕ ಬದಲು ಮಾಡಲು ಒತ್ತಾಯ, ಕಾರಣ ಏನು..?

ಬೆಂಗಳೂರು: ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್​ಗೆ ವಾಟಳ್​ ನಾಗರಾಜ್ ಅವರು ಕರೆ ಕೊಟ್ಟಿದ್ದಾರೆ. ಆದರೆ ಮಾರ್ಚ್ 21ರಿಂದ 10ನೇ ತರಗತಿ ಪರೀಕ್ಷೆ ನಡೆಯುವುದರಿಂದ ಕರ್ನಾಟಕ ಬಂದ್​ ದಿನಾಂಕವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಪಿಯುಸಿ ಪರೀಕ್ಷೆಗಳು ಇಂದು ಆರಂಭವಾಗಿ ಮಾರ್ಚ್​ 20ಕ್ಕೆ ಕೊನೆಗೊಳ್ಳಲಿವೆ. ಇದರ ಬೆನ್ನಲ್ಲೇ ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ 10ನೇ ತರಗತಿ ಪರೀಕ್ಷೆ ನಡೆಯುತ್ತವೆ. ಮಾರ್ಚ್​ 22ಕ್ಕೆ ಕರ್ನಾಟಕ ಬಂದ್ ಘೋಷಣೆ ಮಾಡಿದ್ದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂದು ಸಮಸ್ಯೆ ಆಗುತ್ತದೆ. ಇಷ್ಟು ವರ್ಷ ಓದಿದ್ದನ್ನ ಒಂದೇ ದಿನದಲ್ಲೇ ವಿದ್ಯಾರ್ಥಿಗಳು ನಷ್ಟ ಮಾಡಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆದರೆ ಬಂದ್​ಗೆ ಬೆಂಬಲ ನೀಡಲ್ಲ ಎಂದು ಕೆಲ ಕನ್ನಡ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಇದನ್ನೂ ಓದಿ:ಮಾರ್ಚ್​ 22 ರಂದು ಕರ್ನಾಟಕ ಬಂದ್; ಅಂದು ಏನಿರುತ್ತೆ?, ಏನಿರಲ್ಲ?.. ವಾಟಾಳ್ ನಾಗರಾಜ್ ಕೊಟ್ಟ ಎಚ್ಚರಿಕೆ ಏನು?

publive-image

ಪರೀಕ್ಷೆ ಇರುವ ಕಾರಣ ಮಾರ್ಚ್ 21ರ ಒಳಗೆ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳ ಬೇಡಿಕೆ ಇಟ್ಟಿವೆ. ಮಾರ್ಚ್ 22ರ ಬಂದ್​ನಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಒಂದು ವೇಳೆ ತೊಂದರೆ ಆಗೋದಾದರೆ ಬೆಂಬಲ ನೀಡಲ್ಲ ಎಂದು ಕೆಲವೊಂದು ಕೆಲ ಕನ್ನಡ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಬಂದ್ ದಿನಾಂಕ ಬದಲು ಮಾಡಲು ಒತ್ತಾಯ ಮಾಡಲಾಗಿದ್ದು ದಿನಾಂಕ ಚೇಂಜ್ ಆಗುವ ಸಾಧ್ಯತೆ ಇದೆ. ಇದರಿಂದ ವಾಟಾಳ್ ನಾಗರಾಜ್ ಅವರು ಮತ್ತೊಮ್ಮೆ ಸಭೆ ಮಾಡಲು ಮುಂದಾಗಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment