/newsfirstlive-kannada/media/post_attachments/wp-content/uploads/2025/03/karnataka-band7.jpg)
ಬೆಂಗಳೂರು: ಇಂದು ಅಖಂಡ ಕರ್ನಾಟಕ ಬಂದ್ ಆಗುತ್ತಾ, ಇಲ್ವಾ ಎಂಬ ಗೊಂದಲ ಎಲ್ಲರಲ್ಲೂ ಮನೆ ಮಾಡಿತ್ತು. ಆದ್ರೆ ಇಂದು ಬೆಳ್ಳಂಬೆಳಗ್ಗೆ ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಹೋರಾಟಗಾರರು ಪ್ರತಿಭಟನೆಗಿಳಿದಿದ್ದಾರೆ. ಅಲ್ಲದೇ ಟೈರ್ಗೆ ಬೆಂಕಿ ಹಚ್ಚಿ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್‌ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?
ನಗರದಲ್ಲಿ ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಶಿವರಾಮೇಗೌಡ ಬಣ, ಕರವೇ ಗಜಕೇಸರಿ ಸೇನೆ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ರೂಪೇಶ್ ರಾಜಣ್ಣ ಬಣ, ಆಟೋ ಚಾಲಕರ ಸಂಘ ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು, ಕರವೇ ಸ್ವಾಭಿಮಾನಿ ಬಣ ಕೂಡ ಸಾಥ್ ನೀಡುತ್ತಿವೆ.
ಇಂದು ಕರ್ನಾಟಕ ಬಂದ್ ಏಕೆ?
ಕನ್ನಡಿಗರ ಮೇಲಿನ ದಬ್ಬಾಳಿಕೆ, ಎಂಇಎಸ್, ಶಿವಸೇನೆ ಪುಂಡಾಟ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು.
ಏನಿರುತ್ತೆ?
- ನಮ್ಮ ಮೆಟ್ರೋ
- ಬಿಎಂಟಿಸಿ ಬಸ್ ಸೇವೆ
- ಕೆಎಸ್‌ಆರ್‌ಟಿಸಿ ಬಸ್ ಸೇವೆ
- ಶಾಲಾ ಕಾಲೇಜುಗಳು
- ಮಾರುಕಟ್ಟೆಗಳು
- ಆಸ್ಪತ್ರೆ,
- ವೈದ್ಯಕೀಯ ಸೇವೆಗಳು
- ಉಪಹಾರ ಮಂದಿರ
- ಹೋಟೆಲ್‌ಗಳು
- ಬಾರ್, ರೆಸ್ಟೋರೆಂಟ್, ಪಬ್‌ಗಳು
- ಆ್ಯಂಬುಲೆನ್ಸ್
- ಹೋಲ್ ಸೆಲ್ ಬಟ್ಟೆ ಅಂಗಡಿ
- ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್
- ಏರ್ ಪೋರ್ಟ್ ಟ್ಯಾಕ್ಸಿ ಸೇವೆ
- 65% ಆಟೋಗಳ ಸೇವೆ ಬಂದ್ ದಿನ ಇರಲಿದೆ
- ಎಪಿಎಂಸಿ
- ಪೀಣ್ಯ ಕೈಗಾರಿಕಾ ಪ್ರದೇಶ ಓಪನ್ (13 ಸಾವಿರ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ)
ಏನಿರಲ್ಲ?
- ಮಧ್ಯಾಹ್ನ ತನಕ ಥಿಯೇಟರ್ಗಳು ಬಂದ್
- ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
- 35% ಆಟೋ ಸೇವೆಯಲ್ಲಿ ತುಸು ವ್ಯತ್ಯಯ
- ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ
- ಬ್ಯಾಂಕ್ ಇರಲ್ಲ (4th Saturday)
- ಸರ್ಕಾರಿ ಕಚೇರಿಗಳು (4th Saturday)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ