/newsfirstlive-kannada/media/post_attachments/wp-content/uploads/2023/09/VAtal-Nagarj-1.jpg)
ಬೆಂಗಳೂರು: ಇದೇ ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಮುಂದಾಗಿವೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ವಾಟಾಳ್ ನೇತೃತ್ವದಲ್ಲಿ ಹೋರಾಟಗಾರರು ಈಗಾಗಲೇ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಆದರೆ ಅಂದು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ನಡೆಯುತ್ತಾ? ದಿನಾಂಕ ಬದಲಾಗುತ್ತಾ ಅನ್ನೋ ಚರ್ಚೆ ಶುರುವಾಗಿತ್ತು. ಆದರೆ ಈ ಬಗ್ಗೆ ಖುದ್ದು ವಾಟಾಳ್ ನಾಗರಾಜ್ ಅವರೇ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ಹಾಗೂ ವಿವಿಧ ಸಂಘಟನೆಯ ಹೋರಾಟಗಾರರು ಇಂದು ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಅರ್ಧ ದಾರಿಯಲ್ಲಿಯೇ ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಇದಾದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಅವರು ಮಾರ್ಚ್ 22ಕ್ಕೆ ಬಂದ್ ಮಾಡೇ ಮಾಡ್ತೀವಿ. ಯಾವುದೇ ಕಾರಣಕ್ಕೂ ಬಂದ್ ಡೇಟ್ ಚೇಂಜ್ ಮಾಡಲ್ಲ. ನೂರಕ್ಕೆ ನೂರು ಅಖಂಡ ಕರ್ನಾಟಕ ಬಂದ್ ಫಿಕ್ಸ್. ಸರ್ಕಾರ SSLC ಪರೀಕ್ಷೆ ಬೇಕಾದ್ರೆ ಮುಂದೂಡಲಿ. ನಾವಂತೂ ಬಂದ್ ಮುಂದೂಡಲ್ಲ. ಮಾರ್ಚ್ 22ಕ್ಕೆ ಬಂದ್ ಫಿಕ್ಸ್. ನಾವು ನಮ್ಮ ನಾಡಿಗೋಸ್ಕರ ಬಂದ್ ಮಾಡುತ್ತಾ ಇರೋದು. ಪರೀಕ್ಷೆ ಮುಂದೂಡಬೇಕಿರೋದು ಸರ್ಕಾರದ ಕರ್ತವ್ಯ. ಮಾರ್ಚ್ 22ಕ್ಕೆ ಬಂದ್ ಮಾಡೇ ಮಾಡ್ತೀವಿ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಾರ್ಚ್ 22ಕ್ಕೆ ಅಖಂಡ ಕರ್ನಾಟಕ ಬಂದ್‌ಗೆ ಕರೆ; ಬಂದ್, ಗೊಂದಲದ ಗೂಡು..!
ವಾಟಾಳ್ ನಾಗರಾಜ್ ಎಚ್ಚರಿಕೆ!
ಉತ್ತರ ಕರ್ನಾಟಕ ಅಭಿವೃದ್ಧಿ, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ, ಮಹಾದಾಯಿ, ಕಳಸಾ ಭಂಡಾರಿ ಜಾರಿಯಾಗಲು ಒತ್ತಾಯಿಸುತ್ತೇವೆ. ಬೆಳಗಾವಿಯಲ್ಲಿ ನಡೆದ ಕಂಡಕ್ಟರ್ ಮೇಲಿನ ಹಲ್ಲೆಯನ್ನ ಯಾರೂ ಸಹಿಸೋಕೆ ಸಾಧ್ಯವಿಲ್ಲ. ಎಂಇಎಸ್ ನಿಷೇಧ ಆಗಬೇಕು. ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ.
ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್. ಬಂದ್ ದಿನ ಮೆಟ್ರೋ ಓಡಿಸಬಾರದು. ಯಾರೂ ಮೆಟ್ರೋದಲ್ಲಿ ಪ್ರಯಾಣಿಸಬಾರದು. ಬೆಂಗಳೂರನ್ನ ತಮಿಳರಿಗೆ, ತೆಲುಗರಿಗೆ, ಗುಜರಾತ್, ಮಲಯಾಳಿಗಳಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಯಾರೇ ಏನೇ ಅಂದ್ರೂ ಬಂದ್ ಆಗುತ್ತೆ. ಇತ್ತೀಚಿಗೆ ಕೆಲವರಿಗೆ ಕೊಬ್ಬು ಬಂದಿದೆ ಅವರಿಗೆ ಹುಷಾರ್ ಎಂದು ವಾಟಾಳ್ ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ