newsfirstkannada.com

ಅಯೋಧ್ಯೆಯಲ್ಲಿ 915ನೇ ಬ್ರ್ಯಾಂಚ್ ಓಪನ್.. ರಾಮ ಭಕ್ತರಿಗಾಗಿ ಕರ್ಣಾಟಕ ಬ್ಯಾಂಕ್ ಸೇವೆ​

Share :

Published January 12, 2024 at 8:18am

    ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಕಲ ಸಿದ್ಧತೆ

    ಭಕ್ತರಿಗೆ ಸೇವೆ ಒದಗಿಸಲಿರೋ ಕರ್ಣಾಟಕ ಬ್ಯಾಂಕ್​ನ ನೂತನ ಶಾಖೆ

    ರಾಮಮಂದಿರ ದೇವಸ್ಥಾನದ ಸಹ ಉಸ್ತುವಾರಿಯಿಂದ ಉದ್ಘಾಟನೆ

ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಸುಂದರವಾಗಿ ನಿರ್ಮಾಣವಾಗುತ್ತಿದ್ದು, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಿದ್ಧತೆ ಭರದಿಂದ ಸಾಗಿವೆ. ದೇಶದಾದ್ಯಂತ ಸುಮಾರು ಏಳು ಸಾವಿರಕ್ಕೂ ಹೆಚ್ಚಿನ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಜನರು ಕೂಡ ಸಾಕಷ್ಟುಮಟ್ಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ನಡುವೆ ಭಕ್ತರಿಗೆ ಸೇವೆ ಒದಗಿಸಲು ಕರ್ಣಾಟಕ ಬ್ಯಾಂಕ್’​​​ನ ನೂತನ ಶಾಖೆಯನ್ನು ಅಯೋಧ್ಯೆಯಲ್ಲಿ ಆರಂಭಿಸಲಾಗಿದೆ.

ಅಯೋಧ್ಯೆಯಲ್ಲಿ ಕರ್ಣಾಟಕ ಬ್ಯಾಂಕ್’​​​ನ ನೂತನ ಶಾಖೆ ಆರಂಭ ಮಾಡಲಾಗಿದ್ದು ಇದು ದೇಶದ 915ನೇ ಶಾಖೆಯಾಗಿದೆ. ಅಯೋಧ್ಯೆಗೆ ಬರುವ ಭಕ್ತರಿಗೆ ಸೇವೆ ಒದಗಿಸೋ ಕೆಲಸ ಇದು ಮಾಡಲಿದೆ. ಅಯೋಧ್ಯೆಯ ರಾಮಪಥದ ಮುಖ್ಯ ರಸ್ತೆಯಲ್ಲಿ ಬ್ಯಾಂಕ್ ಶಾಖೆ ಆರಂಭವಾಗಿದೆ.

ರಿಬ್ಬನ್ ಕಟ್ ಮಾಡೊ ಮೂಲಕ ಶಾಖೆಯನ್ನ ರಾಮಮಂದಿರ ದೇವಸ್ಥಾನದ ಸಹ ಉಸ್ತುವಾರಿ ಮತ್ತು ಕನ್ನಡಿಗರಾದ ಗೋಪಾಲ್ ನಾಗರಕಟ್ಟೆ ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ ಡೈರೆಕ್ಟರ್ ಶೇಕರ್ ರಾವ್, ಎಂಡಿ ಶ್ರೀಕೃಷ್ಣನ್ ಹರಿಹರ ಶರ್ಮಾ, ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ 915ನೇ ಬ್ರ್ಯಾಂಚ್ ಓಪನ್.. ರಾಮ ಭಕ್ತರಿಗಾಗಿ ಕರ್ಣಾಟಕ ಬ್ಯಾಂಕ್ ಸೇವೆ​

https://newsfirstlive.com/wp-content/uploads/2024/01/KARNATAKA_BANK.jpg

Load More