/newsfirstlive-kannada/media/post_attachments/wp-content/uploads/2024/12/JOBS_BANK-3.jpg)
ಕರ್ಣಾಟಕ ಬ್ಯಾಂಕ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಕಾಮರ್ಸ್ ಕೋರ್ಸ್​ ಓದಿದವರೇ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಏನು ಇಲ್ಲ. ಈ ಕೆಳಗೆ ಕೊಟ್ಟ ಪದವೀಧರರು ಅರ್ಜಿ ಸಲ್ಲಿಸಬಹುದು. ದೇಶದ್ಯಾಂತ ಇರುವ ಬ್ರ್ಯಾಂಚ್​ಗಳಲ್ಲಿ​ ಈ ಕೆಲಸಗಳನ್ನು ತುಂಬಲಾಗುತ್ತಿದೆ.
ನಿಮಗೆ ಇಷ್ಟ ಇದ್ದಲ್ಲಿ ಈ ಕೆಳಗೆ ನೀಡಲಾಗಿರುವ ಸಂಪೂರ್ಣ ಮಾಹಿತಿ ತಿಳಿದು ಆನ್​ಲೈನ್ ಮೂಲಕ ಅಪ್ಲೇ ಮಾಡಬಹುದು. ಇನ್ನು ಅರ್ಜಿ ಸಲ್ಲಿಕೆಗೆ ನಾಳೆ ಕೊನೆ ದಿನವಾಗಿದೆ. ಬ್ಯಾಂಕ್ ಮೊದಲೇ ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬೈ, ಮೈಸೂರು, ಪುಣೆ, ಶಿವಮೊಗ್ಗ, ಮಂಗಳೂರು, ಕಲಬುರಗಿ, ಧಾರವಾಡ/ಹುಬ್ಬಳ್ಳಿ, ನವದೆಹಲಿ ಇಲ್ಲಿಯ ಕಚೇರಿಗಳಲ್ಲಿ ಆನ್​ಲೈನ್ ಟೆಸ್ಟ್​ಗಳನ್ನ ನಡೆಸಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಆನ್​ಲೈನ್​ ಟೆಸ್ಟ್​​ನಲ್ಲಿ ಪಾಸ್ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಮಂಗಳೂರು ಅಥವಾ ಬೇರೆ ಕಚೇರಿಗೆ ಆಹ್ವಾನಿಸಲಾಗುತ್ತದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್​ನಲ್ಲಿ 100ಕ್ಕೂ ಹೆಚ್ಚು ಉದ್ಯೋಗಗಳು.. ಯಾವ್ಯಾವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ?
ಸಾಮಾನ್ಯ ಪರೀಕ್ಷೆಯಲ್ಲಿ ಕಂಪ್ಯೂಟರ್​ಗೆ ಸಂಬಂಧಿಸಿದ ಪ್ರಶ್ನೆಗಳು, ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್, ಕರೆಂಟ್ ಅಫೈರ್ಸ್, ತಾರ್ಕಿಕ (Reasoning), ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್​​ನಲ್ಲಿ ಪ್ರಬಂಧ ಸೇರಿ ಒಟ್ಟು 150 ನಿಮಿಷದಲ್ಲಿ 202 ಪ್ರಶ್ನೆಗಳಿಗೆ 225 ಅಂಕಗಳಿಗೆ ಆನ್​ಲೈನ್ ಟೆಸ್ಟ್ ಇರುತ್ತದೆ.
ವೇತನ ಶ್ರೇಣಿ
48,480 ದಿಂದ 85,920 ರೂಪಾಯಿಗಳು
ಉದ್ಯೋಗದ ಹೆಸರು- ಪ್ರೊಬೇಷನರಿ ಅಧಿಕಾರಿಗಳು (Probationary Officers (Scale-I)
ವಯೋಮಿತಿ
28 ವರ್ಷದ ಒಳಗಿನ ಅಭ್ಯರ್ಥಿಗಳು
ಎಸ್​​ಸಿ, ಎಸ್​ಟಿ- 5 ವರ್ಷಗಳ ಸಡಿಲಿಕೆ ಇದೆ
ಶೈಕ್ಷಣಿಕ ಅರ್ಹತೆ
ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
ಕೃಷಿ ವಿಜ್ಞಾನದಲ್ಲಿ ಪದವಿ
ಕಾನೂನು ಪದವಿ (5 ವರ್ಷ)
ಸಿಎ, ಸಿಎಸ್, ಸಿಎಂಎಸ್, ಐಸಿಡಬ್ಲುಎ
ಅರ್ಜಿ ಶುಲ್ಕ ಎಷ್ಟು?
ಎಸ್​​ಸಿ, ಎಸ್​ಟಿ- 700 ರೂಪಾಯಿ
ಜನರಲ್, ಒಬಿಸಿ- 800 ರೂಪಾಯಿ
ಕೊನೆ ದಿನಾಂಕ
ಅರ್ಜಿ ಸಲ್ಲಿಕೆಯ ಕೊನೆ ದಿನ- 10 ಡಿಸೆಂಬರ್ 2024
Bank Website- https://karnatakabankpo.azurewebsites.net/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ