Advertisment

ಕರ್ಣಾಟಕ ಬ್ಯಾಂಕ್​ನಿಂದ ಗುಡ್​ನ್ಯೂಸ್; ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

author-image
Bheemappa
Updated On
ಯುಜಿಸಿ ಇಂದ ಗುಡ್​ನ್ಯೂಸ್;​ ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಇನ್ಮುಂದೆ NET ಅಗತ್ಯ ಇಲ್ಲ
Advertisment
  • ಆರಂಭದಲ್ಲೇ ಉತ್ತಮವಾದ ಸಂಬಳ ನೀಡುತ್ತಿರುವ ಬ್ಯಾಂಕ್
  • ಯಾವ ಕೋರ್ಸ್ ಮಾಡಿದವ್ರು ಇವುಗಳಿಗೆ ಅರ್ಜಿ ಸಲ್ಲಿಸಬಹುದು?
  • ಹುದ್ದೆಗೆ ಅರ್ಜಿ ಶುಲ್ಕ ಎಷ್ಟಿದೆ, ಅಭ್ಯರ್ಥಿಗೆ ವಯಸ್ಸು ಎಷ್ಟಿರಬೇಕು?

ದೇಶದ್ಯಾಂತ ಇರುವ ಬ್ರ್ಯಾಂಚ್​ಗಳಲ್ಲಿ​ ಹಲವು ಉನ್ನತ ಹುದ್ದೆಗಳನ್ನು ಕರ್ಣಾಟಕ ಬ್ಯಾಂಕ್ ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಈಗಾಗಲೇ ಅರ್ಜಿ ಆರಂಭವಾಗಿವೆ. ಹೀಗಾಗಿ ಅರ್ಹ ಎನಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ಸಂಪೂರ್ಣ ಮಾಹಿತಿ ಅರಿತುಕೊಂಡು ಆನ್​ಲೈನ್ ಮೂಲಕ ಅಪ್ಲೇ ಮಾಡಬಹುದು.

Advertisment

ಬ್ಯಾಂಕ್ ಆಡಿಟಿಂಗ್, ಬ್ಯಾಂಕ್ ಲೀಗಲ್ ಅಡ್ವೈಸರ್ ಸೇರಿದಂತೆ ಹಲವು ಉನ್ನತ ಅಧಿಕಾರಿ ಹುದ್ದೆಗಳನ್ನು ಕರ್ಣಾಟಕ ಬ್ಯಾಂಕ್ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬೈ, ಮೈಸೂರು, ಪುಣೆ, ಶಿವಮೊಗ್ಗ, ಮಂಗಳೂರು, ಕಲಬುರಗಿ, ಧಾರವಾಡ/ಹುಬ್ಬಳ್ಳಿ, ನವದೆಹಲಿ ಇಲ್ಲಿಯ ಕಚೇರಿಗಳಲ್ಲಿ ಆನ್​ಲೈನ್ ಟೆಸ್ಟ್​ಗಳನ್ನ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಆನ್​ಲೈನ್​ ಟೆಸ್ಟ್​​ನಲ್ಲಿ ಪಾಸ್ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಮಂಗಳೂರು ಅಥವಾ ಬೇರೆ ಕಚೇರಿಗೆ ಆಹ್ವಾನಿಸಲಾಗುತ್ತದೆ. ಆದರೆ ಈ ವೇಳೆ ಯಾವುದೇ ವಸತಿ, ಪಾವತಿ ಬ್ಯಾಂಕ್ ಮಾಡುವುದಿಲ್ಲ. ಎಲ್ಲ ಖರ್ಚು ನಿಮ್ಮದೆ. ಇನ್ನುಳಿದಂತೆ ಈ ಉದ್ಯೋಗಗಳಿಗೆ ಸಂಬಂಧಿಸಿದ ಇತರೆ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅರ್ಜಿ ಶುಲ್ಕ, ಯಾರು ಇವುಗಳಿಗೆ ಅಪ್ಲೇ ಮಾಡಬಹುದು, ಕೊನೆ ದಿನಾಂಕ, ಯಾವ ಪದವಿ ಪಡೆದಿರಬೇಕು ಇತ್ಯಾದಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆಗ್ನೇಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1791 ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ನೀವು ಟ್ರೈ ಮಾಡಿ!

Advertisment

publive-image

ವಿದ್ಯಾರ್ಹತೆ (ಇವುಗಳಲ್ಲಿ ಯಾವುದಾದರೂ ಒಂದು)

  • ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
  • ಕೃಷಿ ವಿಜ್ಞಾನದಲ್ಲಿ ಪದವಿ
  • ಕಾನೂನು ಪದವಿ (5 ವರ್ಷ ಇಂಟಿಗ್ರೇಟೆಡ್ ಕೋರ್ಸ್)
  • ಸಿಎ, ಸಿಎಸ್, ಸಿಎಂಎಸ್, ಐಸಿಡಬ್ಲುಎ

ಉದ್ಯೋಗದ ಹೆಸರು- ಪ್ರೊಬೇಷನರಿ ಅಧಿಕಾರಿಗಳು (Probationary Officers (Scale-I)

ವಯೋಮಿತಿ
28 ವರ್ಷದ ಒಳಗಿನ ಅಭ್ಯರ್ಥಿಗಳು
ಎಸ್​​ಸಿ, ಎಸ್​ಟಿ- 5 ವರ್ಷಗಳ ಸಡಿಲಿಕೆ ಇದೆ

ಅರ್ಜಿ ಶುಲ್ಕ ಎಷ್ಟು?
ಜನರಲ್, ಒಬಿಸಿ- 800 ರೂಪಾಯಿ
ಎಸ್​​ಸಿ, ಎಸ್​ಟಿ- 700 ರೂಪಾಯಿ

ವೇತನ ಶ್ರೇಣಿ
48,480 ದಿಂದ 85,920 ರೂಪಾಯಿಗಳು

ದಿನಾಂಕಗಳನ್ನು ನೆನಪಿಡಿ

  • ನೋಟಿಫಿಕೇಶನ್ ರಿಲೀಸ್ ದಿನ- 30 ನವೆಂಬರ್ 2024
  • ಅರ್ಜಿ ಸಲ್ಲಿಕೆಯ ಕೊನೆ ದಿನ- 10 ಡಿಸೆಂಬರ್ 2024
  • ಪರೀಕ್ಷೆ ನಡೆಸುವ ದಿನ (ಸಾಧ್ಯತೆ ಇದೆ)- 22 ಡಿಸೆಂಬರ್ 2024

ಸಾಮಾನ್ಯ ಪರೀಕ್ಷೆಯಲ್ಲಿ ಕಂಪ್ಯೂಟರ್​ಗೆ ಸಂಬಂಧಿಸಿದ ಪ್ರಶ್ನೆಗಳು, ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್, ಕರೆಂಟ್ ಅಫೈರ್ಸ್, ತಾರ್ಕಿಕ (Reasoning), ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್​​ನಲ್ಲಿ ಪ್ರಬಂಧ ಸೇರಿ ಒಟ್ಟು 150 ನಿಮಿಷದಲ್ಲಿ 202 ಪ್ರಶ್ನೆಗಳಿಗೆ 225 ಅಂಕಗಳಿಗೆ ಆನ್​ಲೈನ್ ಟೆಸ್ಟ್ ಇರುತ್ತದೆ.

Advertisment

Bank Website- https://karnatakabankpo.azurewebsites.net/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment