ಉದ್ಯೋಗ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದ ಕರ್ನಾಟಕ ಬ್ಯಾಂಕ್.. ಯಾರಿಗೆ ಅವಕಾಶ?

author-image
Bheemappa
Updated On
ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ
Advertisment
  • ಬ್ಯಾಂಕ್ ಒಟ್ಟು ಎಷ್ಟು ಉದ್ಯೋಗಗಳನ್ನು ಈಗ ಆಹ್ವಾನ ಮಾಡಿದೆ?
  • ಖಾಸಗಿಯ ಮುಖ್ಯ ಬ್ಯಾಂಕ್‌ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್
  • ಹುದ್ದೆಗಳಿಗೆ ನೀವು ಅಪ್ಲೇ ಮಾಡಬಹುದು, ಪೂರ್ಣ ಮಾಹಿತಿ ಇಲ್ಲಿದೆ

ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್ ಉದ್ಯೋಗ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ ಮಾಡಿದೆ. ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ತಜ್ಞ ಅಧಿಕಾರಿ ಮತ್ತು ಐಟಿ ತಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಆನ್‌ಲೈನ್‌ ಮೂಲಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.

ವಿವಿಧ ವಿಶೇಷ ಹುದ್ದೆಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕ್ ಅತ್ಯಾಕರ್ಷಕವಾದ ವೃತ್ತಿಯಲ್ಲಿ ಅವಕಾಶ ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಆಗಿದೆ. ಕರ್ನಾಟಕ ಬ್ಯಾಂಕ್ ಈ ಹುದ್ದೆಗಳಿಗೆ ತಕ್ಕಂತೆ ಒಳ್ಳೆಯ ಸಂಬಳ ನೀಡುತ್ತದೆ. ಇನ್ನು ಈ ಉದ್ಯೋಗಕ್ಕೆ ಸಂಬಂಧಿಸಿದ ಇತರೆ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ.

ಉದ್ಯೋಗದ ಹೆಸರು- ತಜ್ಞ ಅಧಿಕಾರಿ {Specialist Officer(SO)}

ಒಟ್ಟು ಉದ್ಯೋಗಗಳು- 75

ಇದನ್ನೂ ಓದಿ:ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ.. ಈ ಯೋಜನೆ ಇರುವುದು ಸತ್ಯನಾ..?

publive-image

ಯಾವ್ಯಾವ ಉದ್ಯೋಗಗಳು- ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ತಜ್ಞ ಅಧಿಕಾರಿ ಮತ್ತು ಐಟಿ ತಜ್ಞ ಹುದ್ದೆ

ಮಾಸಿಕ ವೇತನ- 48,480 ದಿಂದ 85,920 ರೂಪಾಯಿಗಳು

ವಿದ್ಯಾರ್ಹತೆ-
ಸಿಎ- (ಮೊದಲ 3 ಪ್ರಯತ್ನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು)
ಎಲ್​ಎಲ್​ಎಂ
ಎಂಬಿಎ
ಇಂಜಿನಿಯರಿಂಗ್, ಎಂಸಿಎ, ಎಂಟೆಕ್​

ಆಯ್ಕೆ ಪ್ರಕ್ರಿಯೆ
ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಹೆಸರು ಶಾರ್ಟ್‌ಲಿಸ್ಟ್
ಆನ್‌ಲೈನ್ ಮೂಲಕ ಸಂದರ್ಶನ

ಈ ಹುದ್ದೆಗೆ ಸಂಬಂಧಿಸಿದ ದಿನಾಂಕ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 22 ಮಾರ್ಚ್​​ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 25 ಮಾರ್ಚ್​​ 2025

ಈ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು 1 ವರ್ಷದ ಕಾಲ ಪ್ರೊಬೇಷನರಿ ಅಡಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಅವರ ಕಾರ್ಯಕ್ಷಮತೆ ಪರಿಶೀಲಿಸಲಾಗುತ್ತದೆ. ಅವರ ಅವಧಿ ಪೂರ್ಣಗೊಳಿಸಿದ ನಂತರ, ಅವರನ್ನು ಬ್ಯಾಂಕಿನ ಖಾಯಂ ಉದ್ಯೋಗಿಗಳಾಗಿ ನೇಮಕ ಮಾಡಲಾಗುತ್ತದೆ. ಆಯ್ಕೆ ಆದವರು 3 ವರ್ಷದ ಸೇವಾ ಬಾಂಡ್‌ಗೆ ಸಹಿ ಹಾಕಲೇಬೇಕು. ಸಹಿ ಹಾಕಿದ ಮೇಲೆ ಮೂರು ವರ್ಷ ಪೂರ್ಣ ಕೆಲಸ ಮಾಡದಿದ್ದರೇ, ಅವರಿಗೆ ದಂಡ ವಿಧಿಸಲಾಗುತ್ತದೆ.

ಮಾಹಿತಿಗಾಗಿhttps://karnatakabank.com/careers

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment