/newsfirstlive-kannada/media/post_attachments/wp-content/uploads/2025/01/Devdutt_Padikkal.jpg)
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಗೆಲುವಿನ ನಾಗಲೋಟ ಮುಂದುವರೆದಿದ್ದು ಹಾಲಿ ಚಾಂಪಿಯನ್ ಹರಿಯಾಣ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಎಂಟ್ರಿಕೊಟ್ಟಿದೆ.
ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರಿಯಾಣ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಪ್ರಸ್ತುತ ಪ್ರಶಸ್ತಿ ಎತ್ತಿ ಹಿಡಿಯಲು ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಕರ್ನಾಟಕದ ನಾಕಯ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲ ಬ್ಯಾಟಿಂಗ್ ಮಾಡಿದ ಅಂಕಿತ್ ಕುಮಾರ್ ನೇತೃತ್ವದ ಹರಿಯಾಣ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ಗಳನ್ನು ಕಲೆ ಹಾಕಿತು. ಹರಿಯಾಣ ತಂಡದ ಪರ ಹಿಮಾನ್ಶು ರಾಣಾ 44, ಕ್ಯಾಪ್ಟನ್ ಅಂಕಿತ್ ಕುಮಾರ್ 48 ರನ್ ಬಿಟ್ಟರೇ ಉಳಿದವರು ಯಾರು 25 ರನ್ಗಳ ಗಡಿ ದಾಟಲಿಲ್ಲ. ಹೀಗಾಗಿ 238 ರನ್ಗಳ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ:ಐತಿಹಾಸಿಕ ದಾಖಲೆ; ಬೃಹತ್ ರನ್ಗಳ ಅಂತರದಿಂದ ಗೆಲುವು ಸಾಧಿಸಿದ ಟೀಮ್ ಇಂಡಿಯಾ
ಈ ಟಾರ್ಗೆಟ್ ಬೆನ್ನು ಬಿದ್ದ ಕರ್ನಾಟಕ ಆರಂಭದಲ್ಲೇ ನಾಕಯ ಮಯಾಂಕ್ ಅಗರ್ವಾಲ್ ಡಕೌಟ್ ಆಗಿ ನಿರಾಶೆ ಉಂಟು ಮಾಡಿದರು. ಆದರೆ ದೇವದತ್ ಪಡಿಕ್ಕಲ್ ಭರ್ಜರಿ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಪಡಿಕ್ಕಲ್ 113 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಮೇತ 86 ರನ್ಗಳನ್ನು ಗಳಿಸಿದರು. ಪಡಿಕ್ಕಲ್ಗೆ ಉತ್ತಮವಾಗಿ ಜೊತೆಯಾದ ರವಿಚಂದ್ರನ್ ಸ್ಮರಣೆ ಕೂಡ ಅರ್ಧ ಶತಕ ಸಿಡಿಸಿದರು. 94 ಎಸೆತಗಳಲ್ಲಿ 3 ಫೋರ್, 3 ಸಿಕ್ಸರ್ ಸಮೇತ 76 ರನ್ಗಳಿಸಿ ಔಟ್ ಆದರು.
ಕೊನೆಗೆ ಶ್ರೇಯಸ್ ಗೋಪಾಲ್ 23 ಹಾಗೂ ಅಭಿನವ್ ಮನೋಹರ್ 02 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕ ತಂಡ 47.2 ಓವರ್ಗಳಲ್ಲಿ 5 ವಿಕೆಟ್ಗೆ 238 ರನ್ಗಳನ್ನು ಗಳಿಸಿ ಗೆಲುವು ಪಡೆಯಿತು. ಈ ಮೂಲಕ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ ಅಧಿಕೃತವಾಗಿ ಫೈನಲ್‌ಗೆ ಎಂಟ್ರಿಕೊಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ