ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್​.. ಬಿಯರ್​ ಬೆಲೆ ಮತ್ತೆ ಏರಿಕೆ ಮಾಡಲು ನಿರ್ಧಾರ

author-image
AS Harshith
Updated On
ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್​.. ಬಿಯರ್​ ಬೆಲೆ ಮತ್ತೆ ಏರಿಕೆ ಮಾಡಲು ನಿರ್ಧಾರ
Advertisment
  • ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಲಿದೆ
  • ಬಿಯರ್ ದರ ಏರಿಕೆ ಮಾಡಲು ಕಂಪನಿಗಳ ನಿರ್ಧಾರ ಮಾಡಿಕೊಂಡಿವೆ
  • ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಎಷ್ಟು ಹೆಚ್ಚಾಗಿವೆ?

ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್​ ಎದುರಾಗಿದೆ. ಬಿಯರ್ ಬೆಲೆ ಮತ್ತೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.

ಬಿಯರ್ ದರ ಏರಿಕೆ ಮಾಡಲು ಕಂಪನಿಗಳ ನಿರ್ಧಾರ ಮಾಡಿಕೊಂಡಿವೆ. ಹೀಗಾಗಿ ₹10ರಿಂದ ₹20 ರೂಪಾಯಿ ಬಿಯರ್ ಬೆಲೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.

ಕಂಪನಿಗಳು ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಕೆ ಮಾಡಿದ್ದವು. ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ದರ ಏರಿಕೆ ಮಾಡಲು ಮುಂದಾಗಿವೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಸುಮಾರು ₹60 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: BBMP ಕಸದ ಲಾರಿಗೆ ಸಿಲುಕಿ ಟೆಕ್ಕಿಗಳ ಸಾವು ಪ್ರಕರಣ.. ಚಾಲಕನನ್ನು ಬಂಧಿಸಿದ ಪೊಲೀಸರು

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ಬಿಯರ್‌ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಇದರಿಂದ ಬಿಯರ್ ದರ ಅಂದು ಏರಿಕೆಯಾಗಿತ್ತು. ಆ ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂಪಾಯಿವರೆಗೆ ಏರಿಕೆ ಮಾಡಿದ್ದವು. ನಂತರ ಮತ್ತೆ ಸರ್ಕಾರದಿಂದ ಬಿಯರ್ ಮೇಲಿನ ಸುಂಕ‌ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆಯ ಅಬ್ಬರ, ನೂರಾರು ಎಕರೆ ಬೆಳೆ ಜಲಮಯ.. ಭೂಕುಸಿತದ ಆತಂಕ

ಫೆಬ್ರವರಿ ಬಿಯರ್ ದರ ಮತ್ತೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿಕೊಂಡಿವೆ. 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು ₹60 ರೂಪಾಯಿವರೆಗೆ ಹೆಚ್ಚಳವಾದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment