Advertisment

ರಾಜ್ಯದಲ್ಲಿ ಗುಡುಗು, ಸಿಡಿಲು, ಗಾಳಿ ಜೊತೆ ತಂಪನೆರೆದ ವರುಣ.. ಆದ್ರೆ ಎಲ್ಲೆಲ್ಲಿ ಏನೇನು ಅವಾಂತರವಾಗಿದೆ?

author-image
AS Harshith
Updated On
ರಾಜ್ಯದಲ್ಲಿ ಗುಡುಗು, ಸಿಡಿಲು, ಗಾಳಿ ಜೊತೆ ತಂಪನೆರೆದ ವರುಣ.. ಆದ್ರೆ ಎಲ್ಲೆಲ್ಲಿ ಏನೇನು ಅವಾಂತರವಾಗಿದೆ?
Advertisment
  • ರಾಜ್ಯದೆಲ್ಲೆಡೆ ಮುಂದಿನ ಒಂದು ವಾರ ಮಳೆಯಾಗುವ ಮುನ್ಸೂಚನೆ
  • ಸಿಲಿಕಾನ್​ ಸಿಟಿಯಲ್ಲಿ ಮಳೆಯಿಂದಾಗಿರೋ ಅವಾಂತರ ಒಂದಾ, ಎರಡಾ..
  • ಮಳೆ ಗಾಳಿಗೆ ನೆಲಕ್ಕಚ್ಚಿದ ಭತ್ತ, ಮಾವಿನ ಕಾಯಿ ಉದುರಿ ರೈತನಿಗೆ ಭಾರೀ ನಷ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಸಿಂಚನ ಮುಂದುವರೆದಿದೆ. ಈಸ್ಟ್​, ವೆಸ್ಟ್​, ನಾರ್ಥ್, ಸೌಥ್ ಹೀಗೆ ರಾಜ್ಯದ ಎಲ್ಲಾ ಧಿಕ್ಕಲ್ಲೂ ವರುಣ ತಂಪೆರೆಯುತ್ತಾ ಬರುತ್ತಿದ್ದಾನೆ.

Advertisment

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದುವರೆದ ವರುಣ ಸಿಂಚನ

ರಣ ಬಿಸಿಲು, ​ ಬಿಸಿ ಗಾಳಿಗೆ ಬೆಂದೋಫಗಿದ್ದ ಜನರೀಗ ರಿಲ್ಯಾಕ್ಸೇಷನ್ ಮೂಡ್​ನಲ್ಲಿದ್ದಾರೆ. ತಣ್ಣನೆ ಮಳೆ ಗಾಳಿಗೆ ಬಿಸಿ ಬಿಸಿ ಚಾಟ್ಸ್ ಸವಿಯುತ್ತಾ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಕೆಲವೆಡೆ ಭಾರೀ ಗಾಳಿಗೆ ಬೆಳೆದ ಬೆಳೆಗಳು ನಾಶವಾಗಿದ್ದು, ಅನ್ನದಾತ ಮಳೆ ಬಂದಿದ್ದಕ್ಕೆ ಖುಷಿ ಪಡಬೇಕೋ, ಇಲ್ಲ ಬೆಳದ ಬೆಳೆ ನಾಶವಾಗಿದಕ್ಕೆ ಕಣ್ಣೀರಿಡಬೇಕೋ ಅನ್ನೋ ಸಂಕಷ್ಟದಲ್ಲಿದ್ದಾನೆ.

ಮಳೆ, ಸವಾರರ ಪರದಾಟ, ಅಂಡರ್ ಪಾಸ್​ನಲ್ಲಿ ವಾಟರ್ ಲಾಗಿಂಗ್!

LOCATION : ಬೆಂಗಳೂರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಸಿಂಚನ ಮುಂದುವರೆದಿದೆ. ಚಾಮರಾಜಪೇಟೆ, ಶಾಂತಿನಗರ, ಬಸವನಗುಡಿ, ಪದ್ಮನಾಭನಗರ, ಹೆಬ್ಬಾಳ, ವಸಂತನಗರ, ಶಿವಾನಂದ ಸರ್ಕಲ್, ಜೆಸಿ ರೋಡ್​​​ ಸುತ್ತಾಮುತ್ತಾ ತುಂತುರು ಮಳೆಯಾಗಿದೆ. ಒಂದ್ಕಡೆ ಮಳೆಯ ಕಾರಣ ವಾಹನ‌ ಸವಾರರ ಪರದಾಟ ನಡೆಸಿದ್ರೆ, ಮತ್ತೊಂದು ಕಡೆ ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್​ನಲ್ಲಿ ವಾಟರ್ ಲಾಗಿಂಗ್ ಆಗಿದ್ದು, ಸವಾರರು ಸರ್ಕಸ್​ ನಡೆಸುವಂತಾಯ್ತು. ಮುಂದಿನ 48 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಇನ್ನೂ ನಗರ ಜನರ ರಕ್ಷಣೆಗೆ ಅಂತಾ ಬಿಬಿಎಂಪಿಯಿಂದ ಉಚಿತ ಸಹಾಯವಾಣಿ ತೆರೆಯಲಾಗಿದೆ. ಜೊತೆಗೆ ಪಾಲಿಕೆ ಸಿಬ್ಬಂದಿ 24/7 ಕಾರ್ಯನಿರ್ವಹಿಸಲಿದೆ.

Advertisment


">May 9, 2024

ಅಬ್ಬರದ ಮಳೆ ಗಾಳಿಗೆ ನೆಲಕ್ಕಚ್ಚಿದ ಭತ್ತ, ಉದುರಿದ ಮಾವಿನ ಕಾಯಿ

LOCATION : ಕೊಪ್ಪಳ

ಕಳೆದೆರಡು ದಿನಗಳಿಂದ ಕೊಪ್ಪಳದ ತುಂಗಾಭದ್ರ ನದಿ ತಟದಲ್ಲಿ ಬಿರುಗಾಳಿ ಸಮೇತ ಆಗುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತುಂಗಭದ್ರಾ ಎಡದಂಡೆ ವಿಜಯನಗರ ಕಾಲುವೆಗಳ‌ ಅಲ್ಪಸ್ವಲ್ಪ ‌ನೀರಿನಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನೆಲಕ್ಕೆ ಮಲಗಿದೆ. ವೆಂಕಟರಮಣ ಎಂಬುವವರಿಗೆ ಸೇರಿದ ಮಾವಿನ ತೋಟದಲ್ಲಿ ಮಾವು ಉದುರಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರಿಡುತ್ತಿದ್ದಾರೆ. ಸಂಬಂಧಪಟ್ಟ ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

publive-image

ಬಿಸಿಲ ಝಳಕ್ಕೆ ಬಳಲಿದ್ದ ಜನರಲ್ಲಿ ವರುಣದೇವನ ಮಂದಹಾಸ

LOCATION : ರಾಮನಗರ

ರಾಮನಗರ ಜಿಲ್ಲೆಯ ಮಾಗಡಿ ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲು ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಬಿಸಿಲ ಝಳಕ್ಕೆ ಬಳಲಿದ್ದ ಮಾಗಡಿ ಜನತೆ ಮಳೆರಾಯನ ಕಂಡು ಸಂತಸಪಟ್ಟಿದ್ದು ಮಾತ್ರವಲ್ಲದೆ, ವರುಣದೇವನಿಗೆ ಜನ ನಮಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಗುಡುಗು‌ ಸಿಡಿಲಿನ ಸಿಹಿತ ಭರ್ಜರಿ ಮಳೆ

LOCATION : ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಾನ್ವಿ,‌ ಸಿಂಧನೂರು ಭಾಗದಲ್ಲಿ ಗುಡುಗು‌ ಸಿಡಿಲಿನ ಸಿಹಿತ ಮಳೆಯಾಗಿದೆ. ಸದ್ಯ ಬಿಸಿಯುಂಡೆಯಂತಾಗಿದ್ದ ರಾಯಚೂರಲ್ಲಿ ಸ್ವಲ್ಪ ಕೂಲ್ ಕೂಲ್ ವಾತಾವರಣವಿದೆ.

Advertisment

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ

LOCATION : ಬಳ್ಳಾರಿ, ವಿಜಯನಗರ

ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯಾದ್ಯಂತ ಭಾರೀ ಗಾಳಿ ಸಮೇತ ಮಳೆರಾಯ ಎಂಟ್ರಿ ಕೊಟ್ಟಿದ್ದ.. ಸಂಡೂರ, ಸಿರಗುಪ್ಪ, ಹಗರಿಬೊಮ್ಮನಳ್ಳಿ, ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕುಡ್ಲಿಗಿ ಭಾಗದಲ್ಲಿ ಗುಡುಗು ಸಮೇತ ತುಂತುರು ಮಳೆಯಾಗಿದೆ. ಹೊಸಪೇಟೆ ಭಾಗದಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಭಾರೀ ಗಾಳಿಗೆ ನಾಶವಾಗಿದ್ದು, ಕೆಲಕಡೆ ಮರಗಳು ಧರೆಗುರುಳಿದೆ.

publive-image

ಒಟ್ಟಾರೆ, ರಾಜ್ಯದಲ್ಲಿ ಮಳೆ ಶುರುವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ನೆಮ್ಮದಿ ಸಿಕ್ಕಂತಾಗಿದೆ. ಇನ್ನೂ ಒಂದು ವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment