newsfirstkannada.com

ಬಿಜೆಪಿ ಹಾಲಿ ಸಂಸದರಿಗೆ ಬಿಗ್​ ಶಾಕ್; ಬರೋಬ್ಬರಿ 67 ಮಂದಿಗೆ ಲೋಕಸಭಾ ಟಿಕೆಟ್​ ಮಿಸ್​​..!

Share :

Published March 15, 2024 at 6:02am

Update March 15, 2024 at 6:03am

  ಹಾಲಿ ಸಂಸದರ ಪೈಕಿ ಶೇ.21ರಷ್ಟು ಸಂಸದರಿಗಿಲ್ಲ ಟಿಕೆಟ್

  ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ನೋ ಟಿಕೆಟ್

  267 ಕ್ಷೇತ್ರಗಳ ಪೈಕಿ 67 ಮಂದಿ ಹಾಲಿ ಸಂಸದರು ಡ್ರಾಪ್

ಬಿಜೆಪಿ ಟಿಕೆಟ್‌ ಘೋಷಣೆ ಹಲವು ಅಚ್ಚರಿಗಳಿಗೆ ಕಾರಣವಾಗಿರೋದನ್ನ ಗಮನಿಸಿದ್ದೇವೆ. ಹಾಗಂತ ಕೇವಲ ನಮ್ಮ ರಾಜ್ಯದಲ್ಲಷ್ಟೇ ಈ ಅಚ್ಚರಿಗಳು ಎದುರಾಗಿರೋದಲ್ಲ. ದೇಶವ್ಯಾಪಿಯಾಗಿ 267 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ. ಎಲ್ಲ ರಾಜ್ಯಗಳಲ್ಲೂ ಇದೇ ರೀತಿಯ ಅಚ್ಚರಿ ಕಾಣಸಿಕ್ಕಿವೆ. ಅದಕ್ಕೆ ಕಾರಣವೂ ಇದೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಈಗಾಗಲೇ ಘೋಷಿಸಲಾಗಿದೆ.

20 ಕ್ಷೇತ್ರಗಳ ಹುರಿಯಾಳುಗಳು ಯಾರು ಅನ್ನೋದು ಈಗಾಗಲೇ ಅಂತಿಮಗೊಂಡಿವೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯವನ್ನೂ ಶುರುವಿಟ್ಟುಕೊಂಡಿದ್ದಾರೆ. ಆದ್ರೆ ಬಿಜೆಪಿ ಟಿಕೆಟ್‌ ಘೋಷಣೆಯಲ್ಲಿ ಹಲವು ಅಚ್ಚರಿಗಳು ಕಾಣಸಿಕ್ಕಿವೆ. ಮೈಸೂರಿನ ಪ್ರತಾಪ್‌ ಸಿಂಹ ಅವರಂತೆ ಕೆಲ ಅಭ್ಯರ್ಥಿಗಳನ್ನ ಏಕಾಏಕಿ ಬದಲಾಯಿಸಿದ್ದೂ ಗೊತ್ತಾಗಿದೆ. ಅಷ್ಟಕ್ಕೂ ಬಿಜೆಪಿ ಹೈಕಮಾಂಡ್‌ ಹೀಗೊಂದು ಪ್ರಯೋಗ ಮಾಡ್ತಿರೋದೇಕೆ ಅನ್ನೋ ಪ್ರಶ್ನೆಯೂ ಕಾಡದೇ ಇರಲ್ಲ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವೊಂದೇ ಗುರಿ

ಟಿಕೆಟ್‌ ಘೋಷಣೆ ವೇಳೆ ಬಿಜೆಪಿ ಹೈಕಮಾಂಡ್‌ ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಆದ್ರೆ ಎಲ್ಲದಕ್ಕೂ ಮುಖ್ಯವಾಗಿ ಗೆಲವೊಂದನ್ನೇ ಗುರಿಯಾಗಿರಿಸಿಕೊಂಡು ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ. ಅಭ್ಯರ್ಥಿ ಆಯ್ಕೆಯಲ್ಲೂ ಗೆಲುವೊಂದೇ ಮಾನದಂಡ.

267 ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್‌

ಇದುವರೆಗೂ 267 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. 267 ಕ್ಷೇತ್ರಗಳ ಪೈಕಿ 67 ಮಂದಿ ಹಾಲಿ ಲೋಕಸಭಾ ಸದಸ್ಯರೇ ಡ್ರಾಪ್‌ ಆಗಿದ್ದಾರೆ. 67 ಮಂದಿ ಹಾಲಿ ಲೋಕಸಭಾ ಸದಸ್ಯರಿಗೆ ಬಿಜೆಪಿ ಹೈ ಕಮ್ಯಾಂಡ್ ಮತ್ತೆ ಟಿಕೆಟ್ ನೀಡಿಲ್ಲ. ಹಾಲಿ ಲೋಕಸಭಾ ಸದಸ್ಯರ ಪೈಕಿ ಶೇ.21 ರಷ್ಟು ಮಂದಿಗೆ ಮತ್ತೆ ಟಿಕೆಟ್ ಹಂಚಿಕೆ ಇಲ್ಲ. ಮೊದಲ ಪಟ್ಟಿಯಲ್ಲಿ 195 ಕ್ಷೇತ್ರಗಳ ಪೈಕಿ 33 ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ನೀಡಿರಲಿಲ್ಲ. 2ನೇ ಪಟ್ಟಿಯಲ್ಲಿ 72 ಕ್ಷೇತ್ರಗಳ ಪೈಕಿ 30 ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ನೀಡಿಲ್ಲ. ಲೋಕಸಭಾ ಸದಸ್ಯರ ಬಗ್ಗೆ ಕ್ಷೇತ್ರದಲ್ಲಿನ ವಿರೋಧಿ ಅಲೆ, ತಳ ಮಟ್ಟದ ಫೀಡ್ ಬ್ಯಾಕ್ ಆಧಾರದಲ್ಲಿ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಇದಕ್ಕಾಗಿ ಕಳೆದ 8 ತಿಂಗಳಿಂದಲೂ ಬಿಜೆಪಿ ಹೈಕಮಾಂಡ್‌ ಗ್ರೌಂಡ್‌ ವರ್ಕ್‌ ಕಾರ್ಯವನ್ನ ಮಾಡಿಸಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ 11 ಮಂದಿ ಹಾಲಿ ಸಂಸದರಿಗೆ ಕೊಕ್‌. ಮಹಾರಾಷ್ಟ್ರದಲ್ಲಿ 5 ಮಂದಿ ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದೆ. ಗುಜರಾತ್ ನಲ್ಲಿ ನಾಲ್ವರು ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ. ದೆಹಲಿಯಲ್ಲಿ ಮನೋಜ್ ತಿವಾರಿ ಹೊರತುಪಡಿಸಿ ಉಳಿದೆಲ್ಲಾ ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಬಿಜೆಪಿಯ ಗುರಿ 370 ಲೋಕಸಭಾ ಕ್ಷೇತ್ರ ಗೆಲ್ಲುವುದು. ಹೀಗಾಗಿ ಮುಲಾಜಿಲ್ಲದೇ ವಿರೋಧಿ ಅಲೆ ಎದುರಿಸುತ್ತಿರುವ ಎಂಪಿಗಳಿಗೆ ಕೊಕ್ ನೀಡಿರೋದು ಸ್ಪಷ್ಟವಾಗ್ತಿದೆ. ಇದರೊಂದಿಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಜನರಿಂದ ಪಾಸಿಟಿವ್ ಫೀಡ್ ಬ್ಯಾಕ್ ಇರುವವರಿಗೆ ಟಿಕೆಟ್ ನೀಡಿ ಪ್ರಯೋಗ ಮಾಡಲು ಹೈಕಮ್ಯಾಂಡ್‌ ತೀರ್ಮಾನಿಸಿದೆ. ಆದ್ರೆ ಈ ಪ್ರಯೋಗಗಳ ಸಕ್ಸಸ್‌ ಮತ್ತು ಫೇಲೂರ್‌ಗಳು ಚುನಾವಣೆಯಲ್ಲಷ್ಟೇ ಗೊತ್ತಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಹಾಲಿ ಸಂಸದರಿಗೆ ಬಿಗ್​ ಶಾಕ್; ಬರೋಬ್ಬರಿ 67 ಮಂದಿಗೆ ಲೋಕಸಭಾ ಟಿಕೆಟ್​ ಮಿಸ್​​..!

https://newsfirstlive.com/wp-content/uploads/2024/03/bjp-8.jpg

Load More