/newsfirstlive-kannada/media/post_attachments/wp-content/uploads/2025/04/bsy.jpg)
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದಿರೋ ಬಿಜೆಪಿ ನಾಯಕರು ಫ್ರೀಡಂ ಫಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ರಾತ್ರಿ ಇಡೀ ಫ್ರೀಡಂ ಪಾರ್ಕ್ನಲ್ಲೇ ಬೀಡುಬಿಟ್ಟಿದ್ದ ಕೇಸರಿಪಡೆ, ರಾಜ್ಯ ಸರ್ಕಾರಕ್ಕೆ ಹೋರಾಟ ಮೂಲಕ ಬಿಸಿ ಮುಟ್ಟಿಸಿದೆ.
ಅಗತ್ಯವಸ್ತುಗಳ ಬೆಲೆ ಏರಿಕೆ, ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಸೇರಿ ಸರ್ಕಾರದ ವೈಫಲ್ಯಗಳನ್ನು ಹಿಡಿದು ರಾಜ್ಯ ಬಿಜೆಪಿ ಹೋರಾಟಕ್ಕೆ ಧುಮುಕಿದೆ. ಫ್ರೀಡಂಪಾರ್ಕ್‌ನಲ್ಲಿ ರಣಕಹಳೆ ಮೊಳಗಿಸಿದ್ದು ಬೆಲೆ ಏರಿಕೆ ಹಿಂಪಡೀಬೇಕು ಅಂತ ಆಗ್ರಹಿಸಿದೆ.. ಎಲ್ಲಿವರೆಗೂ ಹೋರಾಟ ಬೆಲೆ ಏರಿಕೆಗೆ ಸರ್ಕಾರ ಬ್ರೇಕ್ ಹಾಕೋವರೆಗೂ ಹೋರಾಟ ಅಂತ ಕೇಸರಿ ಕಲಿಗಳು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿರಾಜ್ಗೆ ಅತ್ಯಂತ ಬಿಗ್ ಸಿಕ್ಸರ್ ಸಿಡಿಸಿದ RCB ಸ್ಫೋಟಕ ಬ್ಯಾಟರ್ ಸಾಲ್ಟ್.. ಎಷ್ಟು ಮೀಟರ್?
ರಾತ್ರಿಯಿಡಿ ಬಿಜೆಪಿ ನಾಯಕರ ಪ್ರೊಟೆಸ್ಟ್
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿಗೆ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ನಿನ್ನೆ ಹೋರಾಟದ ಕಹಳೆ ಮೊಳಗಿಸಿದ್ರು.. ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಯಿತು.. ತಡರಾತ್ರಿವರೆಗೂ ಮಾಜಿ ಸಿಎಂ ಯಡಿಯೂರಪ್ಪ ಹೋರಾಟಕ್ಕೆ ಬಲ ತುಂಬಿದ್ರು.. ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಗೆ ಮಣಿಯದಿದ್ರೆ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡುವ ಎಚ್ಚರಿಕೆ ಸಹ ನೀಡಿದ್ರು.
ಇದನ್ನೂ ಓದಿ: 15 ದೇಶಗಳಿಗೆ ಡಬಲ್ ಶಾಕ್ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?
ಪ್ರೀಡಂಪಾರ್ಕ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಸ್ತವ್ಯ
ನಿನ್ನೆ ಬೆಳಗ್ಗೆಯಿಂದಲೂ ಬೆಲೆ ಏರಿಕೆ ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟಿಸಿದ ಬಿಜೆಪಿ ನಾಯಕರು ರಾತ್ರಿಯಾಗುತ್ತಿದ್ದಂತೆ ಹಾಸಿಗೆಗೆ ಒರಗಿ ರೆಸ್ಟ್ ಮೂಡ್ಗೆ ಜಾರಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಂಎಲ್ಸಿ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಶ್ರೀರಾಮುಲು ಸೇರಿ ಹಲವು ಬಿಜೆಪಿ ನಾಯಕರು ಫ್ರೀಡಂ ಪಾರ್ಕ್ನಲ್ಲೇ ನಿದ್ದೆಗೆ ಜಾರಿದ್ರು. ಬಿಜೆಪಿ ನಾಯಕರಿಗೆ ಮಲಗಲು ವ್ಯವಸ್ಥೆ, ಬೆಡ್ ಶೀಟ್ ಹಾಗೂ ಹಾಸಿಗೆ ದಿಂಬಿನ ವ್ಯವಸ್ಥೆ ಮಾಡಲಾಗಿತ್ತು.
ಒಟ್ನಲ್ಲಿ ಅತ್ತ ಬೆಲೆ ಏರಿಕೆ ಬಿಸಿ ರಾಜ್ಯದ ಜನರ ನಿದ್ದೆಗೆಡಿಸಿದ್ರೆ ಇತ್ತ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹೋರಾಟ ಕಹಳೆ ಮೊಳಗಿಸಿದ್ದಾರೆ.. ಬಿಜೆಪಿಗರ ಹೋರಾಟದ ಬಿಸಿ ಕಾಂಗ್ರೆಸ್ ನಾಯಕರಿಗೆ ತಟ್ಟುತ್ತಾ, ಬಿಜೆಪಿ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಬ್ರೇಕ್ ಹಾಕುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.
ಇದನ್ನೂ ಓದಿ: ಮಧ್ಯರಾತ್ರಿ 1 ಗಂಟೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಪಾಸ್; ಹೆಸರು ಕೂಡ ಬದಲಾವಣೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ