ಶಾಸಕ ಮುನಿರತ್ನಗೆ ಬಿಗ್ ಶಾಕ್; BJP ಪಕ್ಷದಿಂದ 5 ದಿನಗಳ ಡೆಡ್​ಲೈನ್!

author-image
Bheemappa
Updated On
ಕೋಟಿ ಕೋಟಿ ದುಡ್ಡಿನ ಒಡೆಯ MLA ಮುನಿರತ್ನ.. ಕೇವಲ 20 ಲಕ್ಷ ರೂಪಾಯಿ ಲಂಚಕ್ಕೆ ಕೈ ಚಾಚಿದ್ರಾ?
Advertisment
  • ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಬಂಧನ
  • ಶಾಸಕ ಮುನಿರತ್ನ ನಾಯ್ಡುಗೆ ಕರ್ನಾಟಕ BJP ಹೇಳಿದ್ದೇನು?
  • ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಶಾಸಕ ಅರೆಸ್ಟ್​

ಬೆಂಗಳೂರು: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಶಾಸಕ ಮುನಿರತ್ನ ನಾಯ್ಡುರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಮುನಿರತ್ನ ನಾಯ್ಡುಗೆ ಕರ್ನಾಟಕ ಬಿಜೆಪಿ ನೋಟಿಸ್ ನೀಡಿದೆ.

publive-image

ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿರುವಂತೆ ಮುನಿರತ್ನ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಪ್ರಸಾರಗುತ್ತಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ದಕ್ಕೆಯುನ್ನುಂಟು ಮಾಡುತ್ತದೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ 5 ದಿನ ಒಳಗಾಗಿ ಬಿಜೆಪಿಯ ಶಿಸ್ತು ಸಮಿತಿಯ ಮುಂದೆ ಶಾಸಕ ಮುನಿರತ್ನ ಸ್ಪಷ್ಠೀಕರಣ ನೀಡಬೇಕೆಂದು ಸೂಚನೆ ನೀಡಲಾಗಿದೆ. ಬಿಜೆಪಿಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್‌ರಿಂದ ನೋಟಿಸ್ ಜಾರಿ ಮಾಡಲಾಗಿದ್ದು 5 ದಿನ ಒಳಗಾಗಿ ಮುನಿರತ್ನ ಅವರು ಉತ್ತರ ನೀಡಬೇಕಿದೆ. ಶಾಸಕ ಮುನಿರತ್ನ ಅವರು ನೀಡುವ ಉತ್ತರದ ಮೇಲೆ ಶಿಸ್ತು ಸಮಿತಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment