Advertisment

ವಿಪಕ್ಷ ನಾಯಕನಾಗಲು ಬೊಮ್ಮಾಯಿಗೆ ಶಾಸಕರ ವಿರೋಧ; ದೆಹಲಿಗೆ ಹೊರಟ ಯಡಿಯೂರಪ್ಪ; ಇವತ್ತೇ ಕ್ಲೈಮ್ಯಾಕ್ಸ್‌!

author-image
admin
Updated On
ಮೋದಿ ಕಾಲದಲ್ಲಿ CM ಕುರ್ಚಿ ಕಳ್ಕೊಂಡ 7ನೇ ನಾಯಕ ಖಟ್ಟರ್; ಮೂರೇ ದಿನಕ್ಕೆ ಪಟ್ಟ ತ್ಯಜಿಸಿದ್ದ ಯಡಿಯೂರಪ್ಪ..!
Advertisment
  • ಇದ್ದಕ್ಕಿದ್ದಂತೆ ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಸಭೆ ಕ್ಯಾನ್ಸಲ್​
  • ಬಿ.ಎಸ್‌ ಯಡಿಯೂರಪ್ಪರಿಗೆ ದಿಲ್ಲಿಗೆ ಬರಲು ಹೈಕಮಾಂಡ್​ ಬುಲಾವ್​
  • ಬೊಮ್ಮಾಯಿ ಹೆಸರು ಸೂಚಿಸಲು ಕೆಲ ಶಾಸಕರ ವಿರೋಧ ಯಾಕೆ?

ನಾಳೆಯಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗ್ತಿದೆ. ಆದ್ರೆ ಇನ್ನೂ ಕೂಡ ವಿಪಕ್ಷ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ವಿಪಕ್ಷ ನಾಯಕನ ಆಯ್ಕೆಗಾಗಿಯೇ ಇವತ್ತು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕೂಡ ಕ್ಯಾನ್ಸಲ್​ ಆಗಿದೆ. ಬದಲಾಗಿ ಮಾಜಿ ಸಿಎಂ ಯಡಿಯೂರಪ್ಪರನ್ನ ಹೈಕಮಾಂಡ್​ ದೆಹಲಿಗೆ ಬರುವಂತೆ ಬುಲಾವ್​ ನೀಡಿದೆ.

Advertisment

publive-image

ಮತಯುದ್ಧದಲ್ಲಿ ಹೀನಾಯ ಸೋಲು ಕಂಡ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಸೋಲಿನ ಹೊಡೆತಕ್ಕೆ ಕಂಗೆಟ್ಟ ಬಿಜೆಪಿಯಲ್ಲಿ ಅಂತರ್ಯುದ್ಧ ಶುರುವಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಈ ಮಧ್ಯೆ ವಿಪಕ್ಷನಾಯಕನ ಆಯ್ಕೆ ಇನ್ನೂ ಕೂಡ ಕಗ್ಗಂಟಾಗಿಯೇ ಉಳಿದಿದೆ.

ನಾಳೆ 16ನೇ ವಿಧಾನಸಭೆಯ ಮೊದಲ ಬಜೆಟ್​​​ ಅಧಿವೇಶನ ನಡೆಯಲಿದೆ. ಜುಲೈ 7ಕ್ಕೆ 14ನೇ ಬಜೆಟ್​ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ದಾಖಲೆ ಬರೆಯಲಿದ್ದಾರೆ. ವಿಪರ್ಯಾಸ ಅಂದ್ರೆ ಸದನದಲ್ಲಿ ಸಿದ್ದು ಪಡೆ ಎದುರಿಸಲು ಬಿಜೆಪಿಗೆ ಸಾರಥಿಯೇ ಸಿಕ್ಕಿಲ್ಲ. 50 ದಿನಗಳು ಕಳೆದ್ರೂ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.

ಇದನ್ನೂ ಓದಿ: ‘ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ, ಯಡಿಯೂರಪ್ಪನವರು..’ ಏನ್ ಹೇಳಿದ್ರು ಗೊತ್ತಾ ರೇಣುಕಾಚಾರ್ಯ..?

Advertisment

ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಸಭೆ ಕ್ಯಾನ್ಸಲ್​
ಯಡಿಯೂರಪ್ಪರಿಗೆ ದೆಹಲಿಗೆ ಬರಲು ಹೈಕಮಾಂಡ್​ ಬುಲಾವ್​

ವಿಪಕ್ಷ ನಾಯಕನ ಆಯ್ಕೆಗಾಗಿಯೇ ಇವತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕರ ಹೆಸರು ಫೈನಲ್​ ಆಗಬೇಕಿತ್ತು. ಆದ್ರೆ ಇದ್ದಕ್ಕಿದ್ದಂತೆ ಇವತ್ತು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕ್ಯಾನ್ಸಲ್​​ ಆಗಿದೆ. ಬದಲಾಗಿ ಮಾಜಿ ಸಿಎಂ ಯಡಿಯೂರಪ್ಪರನ್ನ ಹೈಕಮಾಂಡ್​ ದೆಹಲಿಗೆ ಬರುವಂತೆ ಸೂಚಿಸಿದೆ.

publive-image

ಇಂದು ಬೆಳಗ್ಗೆ 11.30ಕ್ಕೆ ದೆಹಲಿಗೆ ತೆರಳಲಿರುವ ಬಿ.ಎಸ್ ಯಡಿಯೂರಪ್ಪ, ಮಧ್ಯಾಹ್ನ 2:10ಕ್ಕೆ ದೆಹಲಿ ತಲುಪಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಂದು ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ನಾಯಕರ ಮಹತ್ವದ ಸಭೆಯಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಇದೇ ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಸಂಬಂಧಿಸಿದಂತೆ ಚರ್ಚೆಯಾಗಲಿದೆ.

Advertisment

ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಪಾಳಯದಲ್ಲಿ ಕಸರತ್ತು!
ಬೊಮ್ಮಾಯಿ ಹೆಸರು ಸೂಚಿಸಲು ಕೆಲ ಶಾಸಕರ ವಿರೋಧ

ವಿಪಕ್ಷ ನಾಯಕನ ಆಯ್ಕೆ ಹೈಕಮಾಂಡ್​ಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಅಳೆದು ತೂಗಿ ಬೊಮ್ಮಾಯಿ‌ಯವರನ್ನೇ ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲು ಮುಂದಾದ್ರೂ ಕೆಲ ಶಾಸಕರಿಂದ ವಿರೋಧ ವ್ಯಕ್ತವಾಗಿದೆಯಂತೆ. ಅಷ್ಟಕ್ಕೂ ಮೂಲ ಬಿಜೆಪಿಗರು ಹೀಗೆ ಬೊಮ್ಮಾಯಿ ಹೆಸರನ್ನ ಸೂಚಿಸಲು ವಿರೋಧಿಸ್ತಿರೋದೇಕೆ ಅನ್ನೋದಕ್ಕೆ ಕಾರಣ ಇಲ್ಲಿದೆ.

ವಿಪಕ್ಷ ನಾಯಕ.. ಬೊಮ್ಮಾಯಿ ಹೆಸರಿಗೆ ವಿರೋಧ!

  • ಬಸವರಾಜ ಬೊಮ್ಮಾಯಿ ಮೂಲ ಬಿಜೆಪಿಯವರಲ್ಲ
  • ಸಿಎಂ ಆಗಿದ್ದರು.. ಮತ್ತೆ ಯಾಕೆ ವಿಪಕ್ಷ ನಾಯಕನ ಸ್ಥಾನ?
  • ಯತ್ನಾಳ್, ಬೆಲ್ಲದ್ ಹೆಸರಿಗೆ ಬಿಎಸ್​ವೈ ಆಪ್ತರ ವಿರೋಧ
  • ಶಾಸಕಾಂಗ ಸಭೆಗೂ ಮುನ್ನ ಅಭಿಪ್ರಾಯ ಸಂಗ್ರಹದಲ್ಲಿ ವಿರೋಧ
  • ಒಮ್ಮತ ಮೂಡದ ಕಾರಣ ದೆಹಲಿಗೆ ಬರಲು ಬಿಎಸ್​ವೈಗೆ ಬುಲಾವ್​
  • ಬಿಎಸ್​ವೈರನ್ನ ವಿಶ್ವಾಸಕ್ಕೆ ತೆಗೆದುಕೊಂಡೇ ವಿಪಕ್ಷ ನಾಯಕನ ಆಯ್ಕೆ
Advertisment

ಒಟ್ಟಾರೆ ಅಧಿವೇಶನ ಹತ್ತಿರವಾದ್ರೂ ಇನ್ನೂ ವಿಪಕ್ಷ ನಾಯಕನ ಆಯ್ಕೆ ಆಗದಿರೋದು ಬಿಜೆಪಿಗೆ ಕೊಂಚ ಮುಜುಗರ ತಂದೊಡ್ಡಿದೆ. ಇಂದಿನ ಶಾಸಕಾಂಗ ಪಕ್ಷ ಸಭೆಯೂ ಕ್ಯಾನ್ಸಲ್​ ಆಗಿದೆ. ಈ ಮಧ್ಯೆ ಬಿಎಸ್​ವೈ ದೆಹಲಿ ಭೇಟಿ ಭಾರೀ ಕುತೂಹಲವನ್ನ ಕೆರಳಿಸಿದೆ. ವಿಪಕ್ಷ ನಾಯಕ ಯಾರಾಗ್ತಾರೆ ಅನ್ನೋ ಪ್ರಶ್ನೆ ಬಹುತೇಕ ಇಂದೇ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment