/newsfirstlive-kannada/media/post_attachments/wp-content/uploads/2025/02/BJP-REBELS.jpg)
ಈ ವರೆಗೆ ಡೆಲ್ಲಿ ಎಲೆಕ್ಷನ್ ಅಂತಿದ್ರು. ಅದು ಮುಗಿತು, ಬಿಜೆಪಿ ಗೆದ್ದಾಯ್ತು. ಇತ್ತ ಕರ್ನಾಟಕ ಬಂಡಾಯಕ್ಕೆ ಮದ್ದೇನು? ಶಿವರಾತ್ರಿಯ ಹೊತ್ತಿಗೆ ಬಿಜೆಪಿ ಒಳಗಿನ ಬಂಡಾಯ ಉಲ್ಬಣ ಆಗುತ್ತಾ? ಮದ್ದು ಸಿಗುತ್ತಾ? ಅದಕ್ಕೆ ಕಾಲವೇ ಉತ್ತರ ನೀಡಲಿದೆ. ಆದ್ರೆ, ಬಿಜೆಪಿಗೆ ಹಿಡಿದಿರುವ ಭಿನ್ನಮತದ ಗ್ರಹಣ, ಸೋಮವಾರ ಮತ್ತೊಂದು ಸಭೆ ಆಯೋಜನೆ ಮಾಡಿದೆ.. ಅದು ಸಹ ಸೋಮಣ್ಣ ಮನೆಯಲ್ಲಿ ಪೂಜೆಯ ನೆಪ.
ಯಮುನಾ ತಟದ ಜನ ಈ ಬಾರಿಗೆ ಆಪ್ಗೆ ಹೊಸ ನಮುನೆ ಪಾಠ ಕಲಿಸಿದೆ. ಡೆಲ್ಲಿ ನೆಲದಲ್ಲಿ ಕಮಲ ಕಿಲಕಿಲ ನಗ್ತಿದೆ. ಆದ್ರೆ, ರಾಜ್ಯ ಕಮಲದಲ್ಲಿ ಕಲಹ ಲಕಲಕ ಅಂತಿದೆ, ಫಳಫಳ ಹೊಳೀತಿದೆ. ಇತ್ತ ಒನ್ಲೈನ್ ಅಜೆಂಡಾ ಹೊತ್ತ ಬಂಡಾಯ ಪಡೆಯ ಆಟಕ್ಕೆ ವಿರಾಮವೇ ಬಿದ್ದಿಲ್ಲ. ಬದಲಾವಣೆಯೇ ಮೂಲ ಮಂತ್ರ ಅಂತ ಪಠಿಸ್ತಿರುವ ಈ ಪಡೆ, ಮತ್ತೆ ಡೆಲ್ಲಿಯಲ್ಲಿ ಆಟ ಕಟ್ಟಲು ಸಜ್ಜಾಗ್ತಿದೆ..
ಡೆಲ್ಲಿ ಎಲೆಕ್ಷನ್ ಬಳಿಕ ರಾಜ್ಯ ಬಿಜೆಪಿಯಲ್ಲಿ ಫುಲ್ ಆ್ಯಕ್ಟಿವ್!
ಡೆಲ್ಲಿ ಗೇಮ್ ಮುಗಿದಿದ್ದು, ಗದ್ದುಗೆ ಯಾರಿಗೆ ಅನ್ನೋದಷ್ಟೇ ತೀರ್ಮಾನ ಆಗಬೇಕಿದೆ.. ಹೀಗಾಗಿ ಹೈಕಮಾಂಡ್ಗೆ ಪುರುಸೊತ್ತು ಸಿಕ್ಕಿದ್ದು, ಕರ್ನಾಟಕದಲ್ಲಿ ವಾರದ ಘಂಟೆ ಬಾರಿಸ್ತಿದೆ. ಈ ಬೆಳವಣಿಗೆ ಮಧ್ಯೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕಂಟಿನ್ಯೂ ಆಗುವ ಆತ್ಮವಿಶ್ವಾಸದಲ್ಲಿದ್ರೆ, ರಾಜ್ಯ ಬಿಜೆಪಿ ಭೀಷ್ಮ ಬಿಎಸ್ವೈ ಈ ಬಗ್ಗೆ ಮೌನ ಹೊದ್ದು ಪುತ್ರನ ಪಟ್ಟ ಕಾಯಲು ತಂತ್ರ ರಣತಂತ್ರಗಳನ್ನ ರೂಪಿಸ್ತಿದ್ದಾರೆ.
ಸೋಮವಾರ ಸೋಮಣ್ಣ ನಿವಾಸದಲ್ಲಿ ಪೂಜೆ ನೆಪದಲ್ಲಿ ಸಭೆ!
ರೆಬೆಲ್ಸ್ ನಡೆ ಮಾತ್ರ ಮೀನಿನ ಹೆಜ್ಜೆ ಗುರುತಿನಂತೆ ಕಾಣಿಸ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಸಭೆ ನಡೆಸ್ತಿದ್ದ ಈ ತಂಡ, ಈಗ ತನ್ನ ರಹಸ್ಯ ಸಭೆ ದಾವಣಗೆರೆಗೆ ಶಿಫ್ಟ್ ಮಾಡಿದೆ. ದಾವಣಗೆರೆಯಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ಮನೆಯಲ್ಲಿ ಸಭೆ ಸೇರಲಿರುವ ಬಂಡಾಯ ತಂಡ, ಬೆಳಗ್ಗೆ ಸಭೆ ನಡೆಸಿ ಮುಂದಿನ ನಿರ್ಧಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಸಂಜೆ ದಾವಣಗೆರೆಯಿಂದ ನೇರವಾಗಿ ದೆಹಲಿಗೆ ತೆರಳಲು ಪ್ಲಾನ್ ರೆಡಿ ಮಾಡ್ಕೊಂಡಿದೆ. ದೆಹಲಿಯಲ್ಲಿ ಸೋಮವಾರ ಪೂಜೆ ನೆಪ ಮಾಡ್ಕೊಂಡು ಕೇಂದ್ರ ಸಚಿವ ವಿ. ಸೋಮಣ್ಣ ನಿವಾಸದಲ್ಲಿ ಸೇರ್ತಿದೆ.
ಆರ್.ಟಿ.ನಗರ ಮನೆಗೆ ಆಗಮಿಸಿ ಇಬ್ಬರು ನಾಯಕರಿಂದ ಸಭೆ
ಇತ್ತ, ಮಾಜಿ ಸಿಎಂ ಬೊಮ್ಮಾಯಿ ನಿವಾಸ ಚಟುವಟಿಕೆ ಕೇಂದ್ರವಾಗಿ ಕಾಣಿಸ್ತು. ಬಿಜೆಪಿಯ ತಟಸ್ಥ ಬಣ ಈಗ ಫುಲ್ ಆ್ಯಕ್ಟೀವ್ ಆಗಿದೆ. ಯತ್ನಾಳ್ ತಂಡ ಫ್ರಂಟ್ಲೈನ್ ಲೀಡರ್ ರಮೇಶ್ ಜಾರಕಿಹೊಳಿ ಆಗಮಿಸಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಅಚ್ಚರಿ ಮೂಡಿಸಿದ್ರು. ಮಧ್ಯಾಹ್ನ ಮಾಜಿ ಸಿಎಂ ಸದಾನಂದಗೌಡ ಸಹ ಬೊಮ್ಮಾಯಿ ಭೇಟಿ ಮಾಡಿ ಚರ್ಚಿಸಿರೋದು ಕುತೂಹಲಕ್ಕೆ ಕಾರಣವಾಗಿದೆ.
ಡೆಲ್ಲಿ ರಿಸಲ್ಟ್ ಹೊರಬಿದ್ದಿರುವ ಬೆನ್ನಲ್ಲೆ ಬಿಜೆಪಿ ಹೈಕಮಾಂಡ್, ಫುಲ್ ಜೋಶ್‌ನಲ್ಲಿದೆ. ರಾಷ್ಟ್ರ ರಾಜಧಾನಿ ಕಮಲ ತೆಕ್ಕೆಗೆ ಬಂದಿದ್ದು, ಬಿಜೆಪಿಯಲ್ಲಿ ಎಲ್ಲಾ ಚಟುವಟಿಕೆಗಳಿಗೂ ವೇಗ ಸಿಗಲಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲೂ ಕ್ಷಿಪ್ರ ಬೆಳವಣಿಗೆ ಆಗುವ ನಿರೀಕ್ಷೆಗಳಿವೆ. ಆದ್ರೆ, ಕರ್ನಾಟಕ ವಿಚಾರದಲ್ಲಿ ಎರಡು ಬಾರಿ ಪೆಟ್ಟು ತಿಂದ ಬಿಜೆಪಿ, ಈ ಬಾರಿ ನಾಜೂಕಿನ ಹೆಜ್ಜೆ ಇರಿಸಲು ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ