newsfirstkannada.com

ಲೋಕಸಭಾ ಚುನಾವಣೆ; ಈ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದಿಂದ ಕರ್ನಾಟಕ ಕಾಂಗ್ರೆಸ್ಸಿಗೆ ಲಾಭ!

Share :

Published March 17, 2024 at 6:22am

Update March 17, 2024 at 6:25am

    ಬಿಜೆಪಿ ಹೈಕಮಾಂಡ್​ಗೆ ಸವಾಲಾದ ಜಿದ್ದಾಜಿದ್ದಿಯ ಕ್ಷೇತ್ರಗಳು

    ಬೆಣ್ಣೆನಗರಿ ದಾವಣಗೆರೆಯಲ್ಲಿ ಬಿಜೆಪಿ ಭಿನ್ನಮತ ಸ್ಫೋಟ

    ರಾಯಚೂರಿನಲ್ಲಿ ರಾಜಾ ಅಮರೇಶ್ ನಾಯಕ್​ಗೆ ಟೆನ್ಷನ್, ಟೆನ್ಷನ್!

ಮೊದಲ ಹಂತದಲ್ಲಿ 20 ಕದನ ಕಲಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಈಗ ಕಗ್ಗಂಟಾಗಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಕಸರತ್ತು ನಡೆಸ್ತಿದೆ. ಅದ್ರಲ್ಲೂ ಎರಡ್ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಫೈನಲ್ ಮಾಡುವುದೇ ಸವಾಲಿನ ಕೆಲಸವಾಗಿದೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಹೈಕಮಾಂಡ್​ಗೆ ‘ಅನಂತ‘ ಟೆನ್ಷನ್!

ಬಿಜೆಪಿ ಹೈಕಮಾಂಡ್ 2ನೇ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸ್ತಿದ್ದು ಉತ್ತರ ಕನ್ನಡ ಕ್ಷೇತ್ರ ಸವಾಲಾಗಿದೆ. ಅನಂತಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಕೊಡಬೇಕೋ, ಬೇಡ್ವೋ ಎಂಬ ವಿಚಾರಕ್ಕೆ ಹೈಕಮಾಂಡ್​ಗೆ ಟೆನ್ಷನ್ ತರಿಸಿದೆ. ಇನ್ನು ಹೈಕಮಾಂಡ್ ನಡೆಸಿರುವ ಸರ್ವೇಯಲ್ಲಿ ಹೆಗಡೆ ಪ್ರಾಬಲ್ಯ ಮೆರೆದಿದ್ದಾರೆ. ಹೈ ಕಮಾಂಡ್​ನ 5 ಸರ್ವೇಗಳಲ್ಲೂ ಹೆಗಡೆ ಮುಂಚೂಣಿಯಲ್ಲಿದ್ದಾರೆ. ಟಿಕೆಟ್ ಬಗ್ಗೆ ಚರ್ಚಿಸಲು ಮಾತುಕತೆಗೆ ಕರೆದಿದ್ರೂ ಮಾತುಕತೆಗೆ ತೆರಳಲು ಅನಂತ್​ ಕುಮಾರ್ ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ.

ರೇಣುಕಾಚಾರ್ಯ ಅಂಡ್ ಟೀಂ ಗುಪ್ತ್ ಗುಪ್ತ್ ಸಭೆ!

ಅತ್ತ ಬೆಣ್ಣೆನಗರಿ ದಾವಣಗೆರೆಯಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ. ಗಾಯತ್ರಿ ಸಿದ್ದೇಶ್ವರ್​ಗೆ ಟಿಕೆಟ್​ ನೀಡಿರೋದಕ್ಕೆ ಅಸಮಾಧಾನ ಭುಗಿಲೆದ್ದಿದ್ದು ಬಂಡಾಯದ ಕಹಳೆ ಮೊಳಗಿದೆ. ಇವತ್ತು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮನೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಅಂಡ್ ಟೀಂ ಗುಪ್ತ ಸಭೆ ನಡೆಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಕಣಕ್ಕಿಳಿಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಡಾ. ರವಿಕುಮಾರ್ ಸ್ಪರ್ಧೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ ಸಭೆಯಲ್ಲಿ ಮಾಜಿ ಶಾಸಕರು, ಸಚಿವರು ಸೇರಿ ಹಲವರು ಭಾಗಿಯಾಗಿದ್ದಾರೆ.

ಬಿಜೆಪಿ ಟಿಕೆಟ್ ತಪ್ಪಿದ್ರೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡ್ತಾರಾ?

ಮತ್ತೊಂದೆಡೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲೂ ಟಿಕೆಟ್​ ಗೊಂದಲ ಜೋರಾಗಿದೆ. ಇದುವರೆಗೆ ಅಭ್ಯರ್ಥಿ ಘೋಷಣೆ ಆಗದ ಕಾರಣಕ್ಕೆ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ಗೆ ಟಿಕೆಟ್ ಟೆನ್ಷನ್ ಶುರುವಾಗಿದೆ. ಒಂದು ವೇಳೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ರೆ ಕಾಂಗ್ರೆಸ್​ನಿಂದ ಸ್ಪರ್ಧಿಸಬಹುದು ಎಂಬ ಮಾತು ಕೇಳಿ ಬಂದಿದೆ. ಅಮರೇಶ್ ನಾಯಕ್​ ಕಾಂಗ್ರೆಸ್ ಸೇರಿದ್ರೆ ರಾಯಚೂರು ಕದನ ಕಣ ರಣರೋಚಕವಾಗಲಿದೆ ಪಕ್ಕಾ ಆಗಿದೆ.

ಟಿಕೆಟ್​ ಮಿಸ್​ ಆಗಿದ್ದಕ್ಕೆ ಸಂಸದ ಕರಡಿ ಸಂಗಣ್ಣ ಕಣ್ಣೀರು!

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ಸಂಸದ ಸಂಗಣ್ಣ ಕರಡಿ ಕಣ್ಣೀರಾಕಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ನೂತನ ರೈಲು ಆರಂಭ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಅಭ್ಯರ್ಥಿಗಳ ಘೋಷಣೆ ಹಾಗೂ ಟಿಕೆಟ್​​ಗಾಗಿ ಭಿನ್ನಮತ ಹೆಚ್ಚಾಗಿದೆ. ಬಿಜೆಪಿ ಭಿನ್ನಮತದ ಲಾಭ ಪಡೆಯಲು ಕಾಂಗ್ರೆಸ್​​ ಹವಣಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ; ಈ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದಿಂದ ಕರ್ನಾಟಕ ಕಾಂಗ್ರೆಸ್ಸಿಗೆ ಲಾಭ!

https://newsfirstlive.com/wp-content/uploads/2023/11/R-Ashok-Bjp-2.jpg

Load More