newsfirstkannada.com

ಹೆಬ್ಬಾರ, ಸೋಮಶೇಖರ್ ಮೇಲೆ ಅನರ್ಹತೆಯ ತೂಗುಗತ್ತಿ; ಅಡ್ಡ ಮತದಾನದ ವಿರುದ್ಧದ ಏನೆಲ್ಲ ಕ್ರಮ ಆಗಬಹುದು?

Share :

Published February 28, 2024 at 7:01am

Update February 28, 2024 at 7:02am

    ರಾಜ್ಯಸಭೆಯಲ್ಲಿ ಅಡ್ಡಮತದಾನ..‘ಕೇಸರಿ’ ಪಡೆ ಅಸಮಾಧಾನ

    ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದ ಕಮಲ ನಾಯಕರು

    ಹೆಬ್ಬಾರ, ಸೋಮಶೇಖರ್ ನಡುವೆ ಇರುವ ಮುಂದಿನ ಆಯ್ಕೆಗಳೇನು?

ಸಂಸತ್‌ ಮೇಲ್ಮನೆ ಮೇಲಾಟ ಅಂತ್ಯವಾಗಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಘಟಿಸಿವೆ. ಬಿಜೆಪಿಗೆ ಇಬ್ಬರು ಶಾಸಕರು ಶಾಕ್ ಕೊಟ್ಟಿದ್ದಾರೆ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕೊಟ್ಟಿರುವ ಚಮಕ್‌ಗೆ ಕೇಸರಿ ಪಡೆ ಕೆಂಡವಾಗಿದೆ. ವಿಪ್ ಉಲ್ಲಂಘನೆ ಕಾರಣಕ್ಕೆ ಮಾಡಿದ ನಾಯಕ ವಿರುದ್ಧ​​​ ಅನರ್ಹತೆಗೆ ಅಸ್ತ್ರ ಜರುಗಿಸಲು ಬಿಜೆಪಿ ಪ್ಲಾನ್ ಮಾಡಿದೆ.

ವಿಧಾನಸಭೆ ಚುನಾವಣೆ ಬಳಿಕ ಸದಾ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ತಿದ್ದ ಬಿಜೆಪಿ ಮಾಜಿ ಸಚಿವ ಎಸ್​.ಟಿ.ಸೋಮಶೇಖರ್​​​​​​ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜೈ ಎಂದಿದ್ದಾರೆ. ಮಾಜಿ ಸಚಿವ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿ ಶಾಕ್ ಕೊಟ್ಟಿದ್ದಾರೆ. ಇದು ಕಮಲಪಡೆಯ ಆಕ್ರೋಶಕ್ಕೆ ಕಾರಣ ಆಗಿದೆ.

ನಿನ್ನೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅಖಾಡಕ್ಕೆ ಇಳಿದಿದ್ದ ಮೂವರು ಅಭ್ಯರ್ಥಿಗಳು ಗೆಲುವಿನ ನಗೆಬೀರಿದ್ದಾರೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿ ಕೈ ಪರ ಜೈ ಎಂದಿದ್ದಾರೆ.. ಇತ್ತ ಮತ್ತೊಬ್ಬ ಕೇಸರಿ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಇದೀಗ ಇಬ್ಬರು ನಾಯಕರ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ

  • ಎಸ್‌ಟಿಎಸ್‌, ಹೆಬ್ಬಾರ್ ವಿರುದ್ಧ ಕ್ರಮಕ್ಕೆ ಮುಂದಾದ ಬಿಜೆಪಿ
  • ಇವತ್ತು ಸ್ಪೀಕರ್ ಖಾದರ್‌ಗೆ ದೂರು ನೀಡಲು ನಿರ್ಧಾರ
  • ಇಬ್ಬರು ಶಾಸಕರ ಅನರ್ಹತೆಗೆ ಬಿಜೆಪಿ ನಾಯಕ ಒತ್ತಾಯ
  • ಜೊತೆಗೆ ಕಾನೂನು ಹೋರಾಟಕ್ಕೂ ಸಜ್ಜಾಗಿರುವ ಬಿಜೆಪಿ

ಶಾಸಕರ ಮುಂದಿನ ನಡೆಯೇನು?

  • ಶಾಸಕ ಸ್ಥಾನಕ್ಕೆ ಸ್ವತಃ ರಾಜೀನಾಮೆ.. ಮುಜುಗರ ತಪ್ಪಿಸಬಹುದು
  • ರಾಜೀನಾಮೆ ನೀಡದೇ ಅನರ್ಹತೆ ವಿರುದ್ಧ ಕಾನೂನು ಹೋರಾಟ
  • ಚುನಾವಣಾ ರಾಜಕಾರಣಕ್ಕೆ ಎಂಟ್ರಿ ಬಹುತೇಕ‌ ಅನುಮಾನ
  • ಇಬ್ಬರು ನಾಯಕರು ಪುತ್ರರನ್ನ ರಾಜಕಾರಣಕ್ಕೆ ಇಳಿಸಬಹುದು
  • ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು, ಕೈ ಪರ ಪ್ರಚಾರ
  • ಇನ್ಮುಂದೆ ಸಕ್ರಿಯವಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡುವುದು
  • ಎಷ್ಟು ಸಾಧ್ಯವೋ, ಅಷ್ಟು ಪ್ರಮಾಣದಲ್ಲಿ ಡ್ಯಾಮೇಜ್ ಮಾಡುವುದು

ಒಟ್ಟಾರೆ ಬಿಜೆಪಿ ವಿರುದ್ಧ ಹೋಗಿರೋ ಇಬ್ಬರೂ ನಾಯಕರ ವಿರುದ್ಧ ಸ್ಪೀಕರ್ ದೂರು ನೀಡಲು ಬಿಜೆಪಿ ಮುಂದಾಗಿದೆ. ಇದೀಗ ಸ್ಪೀಕರ್ ಏನು ನಿರ್ಧಾರ ಕೈಗೊಳ್ತಾರೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಬ್ಬಾರ, ಸೋಮಶೇಖರ್ ಮೇಲೆ ಅನರ್ಹತೆಯ ತೂಗುಗತ್ತಿ; ಅಡ್ಡ ಮತದಾನದ ವಿರುದ್ಧದ ಏನೆಲ್ಲ ಕ್ರಮ ಆಗಬಹುದು?

https://newsfirstlive.com/wp-content/uploads/2024/02/Hebbar-sts.jpg

Load More