newsfirstkannada.com

ರಾಜ್ಯದಲ್ಲಿ ಶಾಂತಿ ನೆಲೆಸಲಿದೆ, ಕನ್ನಡಿಗರು ಸುರಕ್ಷಿತರಾಗಿರ್ತಾರೆ ಎಂದು ಭಾವಿಸಿದ್ದೇವೆ: ಸಿದ್ದು-DKSಗೆ ಬಿಜೆಪಿ ಶುಭಾಶಯ

Share :

20-05-2023

    'ರಾಜ್ಯದಲ್ಲಿ ಶಾಂತಿ ನೆಲೆಸಲಿದೆ, ಕನ್ನಡಿಗರು ಸುರಕ್ಷಿತರಾಗಿರ್ತಾರೆ'- ಬಿಜೆಪಿ

    ನೂತನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಬಿಜೆಪಿ ಶುಭಾಶಯ

    ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೀರಿ ಎಂದು ನಂಬಿದ್ದೇವೆ- ಬಿಜೆಪಿ

ಬೆಂಗಳೂರು: ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವಧಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಲಿದೆ ಹಾಗೂ ಕನ್ನಡಿಗರು ಸುರಕ್ಷಿತರಾಗಿರುತ್ತಾರೆ ಎಂದು ನಾವು ಭಾವಿಸಿದ್ದೇವೆ ಎಂದು ಕರ್ನಾಟಕ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಿದರು. ಪದಗ್ರಹಣ ಕಾರ್ಯಕ್ರಮಕ್ಕೂ ಮೊದಲು ಟ್ವೀಟ್ ಮಾಡಿದ್ದ ಬಿಜೆಪಿ, ಕರ್ನಾಟಕದ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನವನ್ನು ಸ್ವೀಕರಿಸಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರಿಗೆ ಅಭಿನಂದನೆಗಳು.

ತಮ್ಮ ಅವಧಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಲಿದೆ ಹಾಗೂ ಕನ್ನಡಿಗರು ಸುರಕ್ಷಿತರಾಗಿರುತ್ತಾರೆ ಎಂದು ನಾವು ಭಾವಿಸಿದ್ದೇವೆ. ಅದೇ ರೀತಿ, ಚುನಾವಣಾ ಪೂರ್ವದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ್ದ ಐದು ‘ಗ್ಯಾರಂಟಿಗಳ’ ಆಶ್ವಾಸನೆಯನ್ನು, ರಾಜಸ್ಥಾನ, ಛತ್ತಿಸ್‌ಗಡ, ಹಿಮಾಚಲದಲ್ಲಿ ಕೈಕೊಟ್ಟ ಹಾಗೆ ಕೊಡದೆ, ತಕ್ಷಣವೇ ಅನುಷ್ಠಾನಗೊಳಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ಟ್ವೀಟ್ ಮಾಡಿದೆ.

ರಾಜ್ಯದಲ್ಲಿ ಶಾಂತಿ ನೆಲೆಸಲಿದೆ, ಕನ್ನಡಿಗರು ಸುರಕ್ಷಿತರಾಗಿರ್ತಾರೆ ಎಂದು ಭಾವಿಸಿದ್ದೇವೆ: ಸಿದ್ದು-DKSಗೆ ಬಿಜೆಪಿ ಶುಭಾಶಯ

https://newsfirstlive.com/wp-content/uploads/2023/05/SIDDU-22.jpg

Load More