ಕೆನಡಾದಲ್ಲಿ ಡಿಂಡಿಮಿಸಲಿದೆಯಾ ಕನ್ನಡದ ಸೊಗಡು; ಪ್ರಧಾನಿ ಸ್ಥಾನದ ರೇಸ್​ನಲ್ಲಿ ನಾಡಿನ ಕುವರ

author-image
Gopal Kulkarni
Updated On
ಕೆನಡಾದಲ್ಲಿ ಡಿಂಡಿಮಿಸಲಿದೆಯಾ ಕನ್ನಡದ ಸೊಗಡು; ಪ್ರಧಾನಿ ಸ್ಥಾನದ ರೇಸ್​ನಲ್ಲಿ ನಾಡಿನ ಕುವರ
Advertisment
  • ಕೆನಡಾದ ಪ್ರಧಾನ ಮಂತ್ರಿ ಸ್ಥಾನದ ರೇಸ್​ನಲ್ಲಿ ನಮ್ಮ ಕನ್ನಡಿಗ
  • ಜಸ್ಟಿನ್ ಟ್ರುಡೊ ರಾಜೀನಾಮೆಯಿಂದ ತೆರವಾಗಿರುವ ಪಿಎಂ ಸ್ಥಾನ
  • ಪಿಎಂ ಆಗುವ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ ಕನ್ನಡದ ಚಂದ್ರ ಆರ್ಯ

ಎಲ್ಲವೂ ಅಂದುಕೊಂಡಂತೆ ಆದಲ್ಲಿ ಕೆನಡಾ ದೇಶದ ಪ್ರಧಾನಿಯಾಗಿ ಕರ್ನಾಟಕದ ಕುವರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಸದ್ಯ ಕೆನಡಾದ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸಿದೆ. ಜಸ್ಟಿನ್ ಟ್ರುಡೊ ರಾಜೀನಾಮೆ ನೀಡುವ ಮೂಲಕ ಪ್ರಧಾನಿ ಹುದ್ದೆಗೆ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತಿದೆ. ಸದ್ಯ ಕೆನಡಾದ ಪ್ರಧಾನಿ ರೇಸ್​ನಲ್ಲಿ ಕನ್ನಡಿಗೆ ಚಂದ್ರ ಆರ್ಯ ಕೂಡ ಇದ್ದಾರೆ.

ಕೆನಡಾದ ನೆಪಿಯನ್ ಕ್ಷೇತ್ರದಿಂದ ಪಾರ್ಲಿಮೆಂಟ್​ಗೆ ಆಯ್ಕೆಯಾಗಿರುವ ಚಂದ್ರಆರ್ಯ, ಲಿಬರಲ್ ಪಕ್ಷದ ನಾಯಕ ಸ್ಥಾನವನ್ನು ಪಡೆದಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಚಂದ್ರ ಆರ್ಯ ಸ್ಪರ್ಧೆ ಮಾಡಿದ್ದಾರೆ. ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಂದ್ರ ಆರ್ಯ ಸದ್ಯ ಕೆನಡಾ ಪಾರ್ಲಿಮೆಂಟ್ ಸದಸ್ಯ. ಆಗಾಗ್ಗೆ ಬೆಂಗಳೂರು, ಶಿರಾಗೆ ಚಂದ್ರ ಆರ್ಯ ಭೇಟಿ ನೀಡುತ್ತಾರೆ.

ಇದನ್ನೂ ಓದಿ: ರಾಜೀನಾಮೆ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಭಾರತ ವಿರೋಧಿ.. ಜಸ್ಟಿನ್ ಟ್ರುಡೊ ತಲೆದಂಡಕ್ಕೆ ಕಾರಣ ಏನು?

ಕಳೆದ ವರ್ಷ ಶಿರಾ ತಾಲೂಕಿನ ಹುಟ್ಟೂರಿಗೆ ಭೇಟಿ ನೀಡಿದ್ದರು. ಕೆನಡಾದ್ಲಿ ಸಣ್ಣ, ದಕ್ಷ ಸರ್ಕಾರವನ್ನು ಮುನ್ನಡೆಸಿ ದೇಶವನ್ನು ಮರು ನಿರ್ಮಾಣದ ಮಾಡುವ ಕನಸನ್ನು ಕಂಡಿದ್ದಾರೆ ಈ ಕನ್ನಡಿಗೆ. ಭವಿಷ್ಯದ ತಲೆಮಾರಿಗೆ ಸಮೃದ್ಧಿಯ ನಿರ್ಮಾಣದ ಭರವಸೆ ನೀಡಿದ ಚಂದ್ರ ಆರ್ಯ, ಸದ್ಯ ಜಸ್ಟಿನ್ ಟ್ರುಡೊ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment