ಗಡಿ ಮೀರಿದ ಪ್ರೀತಿಗೆ ದೇಶ-ಭಾಷೆಯ ಹಂಗಿಲ್ಲ; ಕರ್ನಾಟಕ ಸೊಸೆಯಾದ ಅಮೆರಿಕಾ ಯುವತಿ

author-image
Ganesh Nachikethu
Updated On
ಗಡಿ ಮೀರಿದ ಪ್ರೀತಿಗೆ ದೇಶ-ಭಾಷೆಯ ಹಂಗಿಲ್ಲ; ಕರ್ನಾಟಕ ಸೊಸೆಯಾದ ಅಮೆರಿಕಾ ಯುವತಿ
Advertisment
  • ಅಮೆರಿಕಾ ಹುಡುಗನಿಗೂ ಇಂಡಿಯಾ ಹುಡುಗಿಗೂ ಲವ್..​!
  • ಕೊರೋನಾ ಟೈಮ್​ನಲ್ಲಿ ಅರಳಿದ ಪ್ರೀತಿಗೀಗ ವಿವಾಹ ಬಂಧ
  • ಭಾರತೀಯ ಸಂಪ್ರದಾಯದಂತೆ ನಡೆಯಿತು ಶಾಸ್ತ್ರೋಸ್ತ್ರ ಮದುವೆ

ಚಿತ್ರದುರ್ಗ: ಇದು ಸಾಗರದಾಚೆಗಿನ ಪ್ರೇಮ ಕಹಾನಿ. ಕೊರೋನಾ ಅಲೆ ನಡುವೆ ಅಮೆರಿಕಾ ಹುಡುಗಿಗೂ ಇಂಡಿಯಾ ಹುಡುಗನಿಗೂ ಅರಳಿದ್ದ ಪ್ರೇಮ ಕಥೆ. ಐದಾರು ವರ್ಷದಿಂದ ಪ್ರೇಮ ಲೋಕದಲ್ಲಿ ಹಾರಾಡ್ತಿದ್ದ ಜೋಡಿಹಕ್ಕಿ ಚಿತ್ರದುರ್ಗದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅದರಲ್ಲೂ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷ.

ಅಮೆರಿಕಾದಲ್ಲೇ ಲವ್​ ಆಯ್ತು

ಇನ್ನು, ಚಿತ್ರದುರ್ಗದ ಅಭಿಲಾಷ್ ಹಾಗೂ ಅಮೆರಿಕಾ ಮೂಲದ ಕೆಲ್ಲಿ ಭಾರತೀಯ ಸಂಪ್ರದಾಯದಂತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಲಾಷ್ ಅಮೆರಿಕಾದಲ್ಲಿ BNY ಬ್ಯಾಂಕ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಕೆಲ್ಲಿ ಅಮೆರಿಕಾ ಮೂಲದ ಹೆಲ್ತ್ ಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಮೆರಿಕಾದಲ್ಲೇ ಇದ್ದ ಇಬ್ಬರ ಮಧ್ಯೆ ಕೋವೀಡ್ ಸಂಧರ್ಭದಲ್ಲಿ ಪ್ರೇಮಾಂಕುರವಾಗಿತ್ತು. ಪರಸ್ಪರ ಪ್ರೀತಿ ಮಾಡಿದ್ದ ಅಭಿಲಾಷ್ - ಕೆಲ್ಲಿ ಈಗ ಕುಟುಂಬಸ್ಥರ ಸಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ವಿಶೇಷ ವಿವಾಹ ಮಹೋತ್ಸವದಲ್ಲಿ ಕೆಲ್ಲಿ ಫ್ಯಾಮಿಲಿ ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಯುವತಿ ಕೆಲ್ಲಿ ಭಾರತೀಯ ನಾರಿಯಂತೆ ಸೀರೆಯಲ್ಲಿ ಪುಲ್ ಮಿಂಚಿದರು. ಅವರ ಫ್ಯಾಮಿಲಿಯವರು ಸೀರೆ ಉಟ್ಟಿದ್ದು ಮತ್ತು ಪಂಚೆ ಹಾಗೂ ಮೈಸೂರು ಪೇಟ ಧರಿಸಿದ್ದು ವಿಶೇಷವಾಗಿತ್ತು. ಇನ್ನೂ ಈ ವೇಳೆ ನವ ವಿವಾಹಿತೆ ಕೆಲ್ಲಿ ಕನ್ನಡದಲ್ಲೇ ಮಾತ್ನಾಡುವ ಮೂಲಕ ಎಲ್ಲರ ಮನ ಗೆದ್ದಳು.

ಒಟ್ನಲ್ಲಿ ಈ ಮದುವೆ ಬರೀ ಎರಡು ಕುಟುಂಬ ಮಾತ್ರವಲ್ಲದೇ ಎರಡು ದೇಶಗಳ ವಿಭಿನ್ನ ಸಂಸ್ಕೃತಿಯನ್ನ ಬೆಸೆಯುವಲ್ಲಿ ಯಶಸ್ವಿಯಾಗಿದ್ದು, ಅಭಿಲಾಷ್ - ಕೆಲ್ಲಿ ಜೋಡಿ ನೂರ್ಕಾಲ ಖುಷಿಯಾಗಿ ಬಾಳಲಿ ಅನ್ನೋದೆ ನಮ್ಮ ಆಶಯ.

ಇದನ್ನೂ ಓದಿ:ಬರೋಬ್ಬರಿ 15.75 ಕೋಟಿಗೆ ಸೇಲಾದ ಬಟ್ಲರ್​​ಗೆ ಜಾಕ್​ಪಾಟ್​​; ಗುಜರಾತ್​ನಿಂದ ಬಿಗ್​ ಆಫರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment