ಸಿದ್ದರಾಮಯ್ಯ ಬಜೆಟ್​​ನಲ್ಲಿ ‘ಸ್ಕಿಲ್ ಟು ಸ್ಕೂಲ್’ ಯೋಜನೆ ನಿರೀಕ್ಷೆ.. ಏನಿದು..?

author-image
Ganesh
Updated On
ಸಿದ್ದರಾಮಯ್ಯ ಬಜೆಟ್​​ನಲ್ಲಿ ‘ಸ್ಕಿಲ್ ಟು ಸ್ಕೂಲ್’ ಯೋಜನೆ ನಿರೀಕ್ಷೆ.. ಏನಿದು..?
Advertisment
  • 16ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
  • ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯೋಜನೆ ಪರಿಚಯ ಸಾಧ್ಯತೆ
  • 30 ಲಕ್ಷ ವಿದ್ಯಾರ್ಥಿಗಳಿಗೆ ‘ಸ್ಕಿಲ್ ಟು ಸ್ಕೂಲ್’ ಲಾಭ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್​ ಮಂಡನೆ ಮಾಡ್ತಿದ್ದಾರೆ. ರಾಜ್ಯದ ಜನರು ಸಿಎಂ ಮೇಲೆ ದೊಡ್ಡ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು, ಈ ಸಲದ ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರದ ಮೇಲೂ ಒಂದಷ್ಟು ಬದಲಾವಣೆ ಸಾಧ್ಯತೆ ಇದೆ.

‘ಸ್ಕಿಲ್ ಟು ಸ್ಕೂಲ್’

8 ರಿಂದ 12ನೇ ತರಗತಿ ವರೆಗೆ ‘ಸ್ಕಿಲ್​ ಟು ಸ್ಕೂಲ್’ ಎಂಬ ಹೊಸ ಯೋಜನೆ ಜಾರಿಗೆ ತರುವ ಸಾಧ್ಯತೆ ಇದೆ. ಮುಂಬರುವ ಶೈಕ್ಷಣಿಕ ಸಾಲಿನಿಂದ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಅಲ್ಪಾವಧಿ ಕೌಶಲ್ಯ ತರಬೇತಿ ಕೋರ್ಸ್​​ ಆರಂಭವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ದಾಖಲೆಯ ಬಜೆಟ್​ ಮಂಡನೆಗೆ ಸಿಎಂ ಸಿದ್ದರಾಮಯ್ಯ ರೆಡಿ; ಸವಾಲುಗಳ ಮೆಟ್ಟಿನಿಂತು ಜನಪರ ಬಜೆಟ್​ ಮಂಡಿಸ್ತಾರಾ?

publive-image

ಶಿಕ್ಷಣ ಇಲಾಖೆಯು ‘ಸ್ಕಿಲ್ ಟು ಸ್ಕೂಲ್’ ಎಂಬ ಮಹತ್ವದ ಯೋಜನೆ ರೂಪಿಸಿದೆ. ಅದು ಇಂದಿನ ಬಜೆಟ್​ನಲ್ಲಿ ಅಧಿಕೃತ ಘೋಷಣೆ ಆಗಲಿದೆ. ರಾಜ್ಯದ ಕೆಲವು ಐಟಿ ಕಂಪನಿಗಳು ಮತ್ತು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಸಹಕಾರದೊಂದಿಗೆ ಈ ಯೋಜನೆ ತರುವ ಪ್ರಕ್ರಿಯೆ ನಡೆದಿದೆ. ಅಲ್ಪಾವಧಿ ಕೌಶಲ್ಯ ಕೋರ್ಸುಗಳನ್ನು ಪರಿಚಯಿಸಿ ತರಬೇತಿ ನೀಡಲಾಗುತ್ತದೆ. ಸುಮಾರು 30 ಲಕ್ಷ ವಿದ್ಯಾರ್ಥಿಗಳಿಗೆ ಈ ಕೋರ್ಸು ಪರಿಚಯಿಸಲಾಗುತ್ತದೆ.

ಇದನ್ನೂ ಓದಿ: ರಾಹುಕಾಲಕ್ಕೂ ಮೊದಲೇ ಸಿದ್ದರಾಮಯ್ಯ ಬಜೆಟ್.. ಎಷ್ಟು ಲಕ್ಷ ಕೋಟಿ ಆಯವ್ಯಯ ಮಂಡಿಸ್ತಾರೆ ಸಿಎಂ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment