newsfirstkannada.com

Karnataka Budget Highlights: ‘ಕೃಷಿ ಭಾಗ್ಯ’ ಮರು ಜಾರಿ, ಗ್ರಾಮೀಣ ಪ್ರದೇಶದಲ್ಲಿ ‘ಕೆಫೆ ಸಂಜೀವಿನಿ’ ಘೋಷಣೆ

Share :

Published February 16, 2024 at 10:19am

Update February 16, 2024 at 11:49am

    ‘ಕೃಷಿ ಭಾಗ್ಯ’ ಮರು ಜಾರಿ ಬಗ್ಗೆ ಘೋಷಣೆ ಮಾಡಿದ ಸಿದ್ದರಾಮಯ್ಯ

    ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ

    ‘ಗ್ಯಾರಂಟಿ’ ಸರ್ಕಾರದಿಂದ ಯಾರಿಗೆಲ್ಲಾ ಸಿಹಿ, ಯಾರಿಗೆ ಕಹಿ?

ಕೇಂದ್ರ ಮಧ್ಯಂತರ ಬಜೆಟ್​ ಮಂಡನೆ ಬೆನ್ನಲ್ಲೇ ಇಂದು ರಾಜ್ಯದ ಆಯವ್ಯಯ ಲೆಕ್ಕವನ್ನ ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ. ಒಂದ್ಕಡೆ ಗ್ಯಾರಂಟಿ ಯೋಜನೆ, ಮತ್ತೊಂದೆಡೆ ಸಾಲದ ಹೊರೆ. ಈ ನಡುವೆ ಲೋಕ ಸಮರ ಹಿನ್ನೆಲೆ ಜನಪರ ಯೋಜನೆ ನೀಡಬೇಕಾದ ಸ್ಥಿತಿ ಇದ್ದು ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಸದ್ಯ ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್​ನ ಹೈಲೈಟ್ಸ್ ಇಲ್ಲಿದೆ.

ಕರ್ನಾಟಕ ಬಜೆಟ್ ಹೈಲೈಟ್ಸ್

  • 15 ಬಾರಿ ಬಜೆಟ್ ಮಂಡಿಸಿ ವಿಶೇಷ ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ
  • ಈ ಬಾರಿಯ ಬಜೆಟ್ ಗಾತ್ರ 3, 71, 383 ಕೋಟಿ ರೂಪಾಯಿ

ಕೌಶಲ್ಯಾಭಿವೃದ್ಧಿ ಇಲಾಖೆ

  • ಕೌಶಲ್ಯ ತರಬೇತಿ ಪಡೆದವರಿಗೆ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳ
  • ಉದ್ಯಮಗಳ ಬೇಡಿಕೆಗೆ ಪೂರಕವಾದ Skill Connect Summit ಆಯೋಜನೆ
  • IIM-B ಸಹಯೋಗದೊಂದಿಗೆ 10 ಜಿಲ್ಲೆಗಳಲ್ಲಿ Incubation ಕೇಂದ್ರಗಳು
  • ಕೋಳಿ, ಕುರಿ, ಮೇಕೆ ಸಾಕಾಣೆ & ಮಾರುಕಟ್ಟೆಗೆ 100 ಕೋಟಿ ರೂಪಾಯಿ
  • ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಹಾರ ನೀಡಲು ಕೆಫೆ ಸಂಜೀವಿನಿ
  • ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ ಹೋಟೆಲ್​ಗಳ ಸ್ಥಾಪನೆ
  • ವಿದ್ಯಾರ್ಥಿನಿ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ 5 ನಗರಗಳಲ್ಲಿ ಹಾಸ್ಟೆಲ್

ಆಹಾರ ಮತ್ತು ನಾಗರಿಕ ಸರಬರಾಜು

  • ಹಿರಿಯ ನಾಗರಿಕರಿಗೆ ಆಹಾರ ಧಾನ್ಯ ಒದಗಿಸುವ ಅನ್ನ ಸುವಿಧಾ ಌಪ್
  • 80 ವರ್ಷ ದಾಟಿದ ನಾಗರಿಕರಿಗೆ ಆಹಾರ ಧಾನ್ಯ ಒದಗಿಸುವುದಕ್ಕೆ ಌಪ್

ಅಲ್ಪಸಂಖ್ಯಾತ ಕಲ್ಯಾಣ

  • ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿಗೆ 100 ಕೋಟಿ ರೂಪಾಯಿ ಘೋಷಣೆ
  • ಕ್ರೈಸ್ತ ಸಮುದಾಯ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ಘೋಷಣೆ
  • ಜೈನರ ಧಾರ್ಮಿಕ ಸ್ಥಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಘೋಷಣೆ

ಸಮಾಜ ಕಲ್ಯಾಣ

  • ಡಾ. ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು ವಿವಿಯಲ್ಲಿ ಅಧ್ಯಯನ ಪೀಠ
  • AI & ಮೆಷಿನ್ ಲರ್ನಿಂಗ್ ಕಲಿಕೆ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ
  • 200 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹15 ಸಾವಿರ ಶಿಷ್ಯ ವೇತನ
  • ಪಟ್ಟಣ ಪಂಚಾಯತ್​ ವ್ಯಾಪ್ತಿಯಲ್ಲಿ 5 ಸಾವಿರ ಯುವಕರಿಗೆ ಡ್ರೋಣ್ ತರಬೇತಿ

ಧಾರ್ಮಿಕ ದತ್ತಿಗೆ ಕೊಡುಗೆ ಏನು?

  • ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
  • ತಿರುಮಲದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
  • ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ಬ್ರಿಡ್ಜ್​ ಕಂ ಬ್ಯಾರೇಜ್
  • ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಕಾಮಗಾರಿ
  • 158. ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್​ ಕಂ ಬ್ಯಾರೇಜ್ ಕಾಮಗಾರಿ
  • ಘಾಟಿ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ಪ್ರತ್ಯೇಕ ಪ್ರಾಧಿಕಾರ
  • ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆ
  • ಆದಾಯವಿಲ್ಲದ 34,165 ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿ
  • ಸಂಬಂಧಪಟ್ಟ ಇಲಾಖೆಗಳನ್ನೊಳಗೊಂಡ Vision Grou ರಚನೆ
  • 29,523 ‘ಸಿ’ ವರ್ಗದ ಅರ್ಚಕರುಗಳ ಬ್ಯಾಂಕ್​​ ಖಾತೆಗೆ ಹಣ ಜಮೆ
  • ತಸ್ತಿಕ್​ ಮೊತ್ತವನ್ನ ಅರ್ಚಕರ ಖಾತೆಗೆ ಜಮ ಮಾಡುವ ನಿರ್ಧಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

  • ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಪಡಿಸಲು ಪ್ರಗತಿಪಥ ಯೋಜನೆ
  • ಈ ಯೋಜನೆಯಡಿ 189 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಸಂಪರ್ಕ
  • ತಲಾ 50 ಕಿ.ಮೀ. ಉದ್ದದ ರಸ್ತೆಗಳಂತೆ 9,450 ಕಿ.ಮೀ ವಿಸ್ತರಣೆ
  • 5,2000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ
  • ಕಲ್ಯಾಣ ಪಥ ಯೋಜನೆಯಡಿ 1,150 ಕಿ.ಮೀ. ರಸ್ತೆ ಅಭಿವೃದ್ಧಿ
  • 38 ವಿಧಾನಸಭಾ ಕ್ಷೇತ್ರಗಳಲ್ಲಿ 1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
  • ಗ್ರಾಮ ಪಂಚಾಯ್ತಿಗಳನ್ನು ಸಮರ್ಥ ಗ್ರಾಮ ಸರ್ಕಾರಗಳಾಗಿ ರೂಪಿಸಲು ಕ್ರಮ
  • ನರೇಗಾ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಉದ್ಯೋಗದ ಗುರಿ
  • ಪ್ರತಿ ತಾಲೂಕಿಗೆ ಎರಡು ಬೂದು ನೀರು ಸಂಸ್ಕರಣಾ ಘಟಕ ನಿರ್ಮಾಣ
  • ಅರಿವು ಕೇಂದ್ರ ಬಲಪಡಿಸಲು ₹132 ಕೋಟಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ
  • ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಇ-ಆಫೀಸ್ ಪ್ರಾರಂಭ
  • ಗ್ರಾಮ ಪಂಚಾಯ್ತಿಗಳಲ್ಲಿ ಸ್ವತ್ತುಗಳ ಆಸೆಟ್ ಮಾನಿಟೈಸೇಷನ್ ನೀತಿ ಜಾರಿ
  • ವ್ಯವಹಾರ ಪರವಾನಗಿ ಸ್ವಯಂಚಾಲಿತ ನವೀಕಣರಣ ಕಾಯ್ದೆಗೆ ತಿದ್ದುಪಡಿ
  • ಪಂಚಾಯ್ತಿಗಳ ಸಭೆಗಳು, ಗ್ರಾಮ ಸಭೆಗಳ ಕಾರ್ಯಕಲಾಪ ನೇರಪ್ರಸಾರ
  • ಗ್ರಾ.ಪಂಚಾಯ್ತಿಗಳಲ್ಲಿ ವಿದ್ಯುತ್ ಬಳಕೆ ವೆಚ್ಚ ತಗ್ಗಿಸಲು ಕ್ರಮ
  • 50 ಗ್ರಾ.ಪಂ.ಗಳಲ್ಲಿ ಹೊಂಬೆಳಕು ಕಾರ್ಯಕ್ರಮದಡಿ ಸೋಲಾರ್ ದೀಪ ಅಳವಡಿಕೆ
  • ಸೋಲಾರ್ ದೀಪ ಅಳವಡಿಕೆಗೆ 25 ಕೋಟಿ ರೂ. ಮೀಸಲು
  • 200 ಗ್ರಾ.ಪಂಚಾಯ್ತಿಗಳಲ್ಲಿ ಬೀದಿ ದೀಪಗಳ ವ್ಯವಸ್ಥಿತ ಮೀಟರಿಂಗ್
  • ಆಯ್ದ 100 ಗ್ರಾ.ಪಂ.ಗಳಲ್ಲಿ ಹಿರಿಯ ನಾಗರಿಕರ ಆರೈಕೆ ಚಿಕಿತ್ಸಾ ಕೇಂದ್ರ
  • ಪ್ರೇರಣಾ ಕಾರ್ಯಕ್ರಮದಡಿ ಮಹಿಳೆಯರಿಗೆ ಮೆನ್ಸುಟ್ರುಯಲ್ ಕಪ್ ಬಳಕೆಗೆ ಪ್ರೋತ್ಸಾಹ
  • ಎಲ್ಲಾ ಗ್ರಾ.ಪಂ.ಗಳಲ್ಲಿ ಎಣ್ಣೆ ಗಾಣ ಸ್ಥಾಪನೆಗೆ ನೆರವು
  • ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಘನ ತ್ಯಾಜ್ಯ ನಿರ್ವಹಣೆ
  • ಪಂಚಾಯ್ತಿ ಮಟ್ಟದಲ್ಲಿ ಒಕ್ಕೂಟಗಳ ಸದಸ್ಯರಿಗೆ ತರಬೇತಿ

ಬೆಂಗಳೂರು ನಗರಾಭಿವೃದ್ಧಿ

  • ಹೆಬ್ಬಾಳ ಜಂಕ್ಷನ್​ನಲ್ಲಿ ಪ್ರಾಯೋಗಿಕ ಸುರಂಗ ಮಾರ್ಗ ನಿರ್ಮಾಣ
  • ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಅಂತಾರಾಷ್ಟ್ರೀಯ ತಜ್ಞರ ಸಮಿತಿ
  • 70 ಕಿ.ಮೀ. ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ
  • ಕಾರಿಡಾರ್ ನಿರ್ಮಾಣಕ್ಕೆ ಅಂದಾಜು ವೆಚ್ಚ 27,000 ಕೋಟಿ
  • 250 ಮೀ. ಉದ್ದದ ಸ್ಕೈ ಡೆಕ್ ನಿರ್ಮಾಣಕ್ಕೆ ಆರ್ಕಿಟೆಕ್ಟ್ಸ್​ಗೆ ಆಹ್ವಾನ
  • ಸರ್ಕಾರಿ ಇಲಾಖೆಗಳ ವಿದ್ಯುತ್ ಶುಲ್ಕ ಕಡಿತಕ್ಕೆ ಸೋಲಾರ್ ಪಾರ್ಕ್
  • 2025ರ ಮಾರ್ಚ್​ ವೇಳೆಗೆ ಮೆಟ್ರೋ ರೈಲು 44 ಕಿ.ಮೀ. ವಿಸ್ತರಣೆ
  • 2026ರ ಜೂನ್ ವೇಳೆಗೆ ವಿಮಾನ ನಿಲ್ದಾಣಕ್ಕೂ ಮೆಟ್ರೋ ಮಾರ್ಗ
  • ಬಿಎಂಟಿಸಿಗೆ 1,334 ಹೊಸ ಎಲೆಕ್ಟ್ರಿಕ್ ಬಸ್​ಗಳ ಸೇರ್ಪಡೆ
  • ಬಿಎಂಟಿಸಿ ಪ್ರಯಾಣಿಕರಿಗೆ ವೆಹಿಕಲ್ ಟ್ರ್ಯಾಕಿಂಗ್ ಌಪ್ ಸೌಲಭ್ಯ
  • ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ
  • ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಬಳಕೆ
  • ಬೆಂಗಳೂರಿನಲ್ಲಿ ವ್ಯಾಪಾರ, ವಹಿವಾಟು ತಡರಾತ್ರಿ 1ರವರೆಗೆ ವಿಸ್ತರಣೆ

ಇಲಾಖೆವಾರು ಅನುದಾನ

  • ಶಿಕ್ಷಣ ಇಲಾಖೆಗೆ 44,422 ಕೋಟಿ ರೂಪಾಯಿ ಅನುದಾನ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 34,406 ಕೋಟಿ ಅನುದಾನ
  • ಇಂಧನ ಇಲಾಖೆ 23,159 ಕೋಟಿ ರೂಪಾಯಿ ಅನುದಾನ ಘೋಷಣೆ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  21,160 ಕೋಟಿ ಅನುದಾನ
  • ನೀರಾವರಿ ಇಲಾಖೆಗೆ 19,179 ಕೋಟಿ ರೂಪಾಯಿ ಅನುದಾನ
  • ನಗರಾಭಿವೃದ್ಧಿ ಮತ್ತಯ ವಸತಿ 18,155 ಕೋಟಿ ರೂಪಾಯಿ ಅನುದಾನ
  • ಕಂದಾಯ ಇಲಾಖೆಗೆ 16,170 ಕೋಟಿ ರೂಪಾಯಿ ಅನುದಾನ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15,145 ಕೋಟಿ ರೂಪಾಯಿ ಅನುದಾನ
  • ಸಮಾಜ ಕಲ್ಯಾಣ ಇಲಾಖೆಗೆ 13,334 ಕೋಟಿ ರೂಪಾಯಿ ಅನುದಾನ
  • ಲೋಕೋಪಯೋಗಿ ಇಲಾಖೆಗೆ 10,424 ಕೋಟಿ ರೂಪಾಯಿ ಅನುದಾನ
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 9,963 ಕೋಟಿ ಅನುದಾನ
  • ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 6,688 ಕೋಟಿ ರೂಪಾಯಿ ಅನುದಾನ
  • ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 3,307 ಕೋಟಿ ರೂಪಾಯಿ ಅನುದಾನ
  • ಇತರೆ ಅಭಿವೃದ್ಧಿ ಕಾರ್ಯಗಳಿಗೆ 1,24,593 ಕೋಟಿ ರೂಪಾಯಿ ಅನುದಾನ ಘೋಷಣೆ

ಸರ್ಕಾರದ ಆದಾಯದ ಗುರಿ ಏನು..? 

  • ಮೋಟಾರು ವಾಹನ ತೆರಿಗೆ: 13,000 ಕೋಟಿ ರೂಪಾಯಿ ನಿರೀಕ್ಷೆ
  • ನೋಂದಣಿ ಮತ್ತು ಮುದ್ರಾಂಕ: 26,000 ಕೋಟಿ ರೂಪಾಯಿ ನಿರೀಕ್ಷೆ
  • ರಾಜ್ಯ ಅಬಕಾರಿ: 38,525 ಕೋಟಿ ರೂಪಾಯಿ ನಿರೀಕ್ಷೆ
  • ವಾಣಿಜ್ಯ ತೆರಿಗೆ : 1,10,000 ಕೋಟಿ ರೂಪಾಯಿ ನಿರೀಕ್ಷೆ
  • ಇತರೆ – 2,368 ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ

  • 2,188 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ
  • ಬೆಂಗಳೂರು ನಗರದಲ್ಲಿ ವಿಶ್ವದರ್ಜೆ ಮೂಲ ಸೌಕರ್ಯ ನೀಡಲಾಗುತ್ತದೆ
  • ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತುನೀಡಲಾಗುತ್ತದೆ
  • ರಾಜಕೀಯ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೆಚ್ಚು ಒತ್ತು ನೀಡಲಾಗುವುದು
  • ರಾಜ್ಯದ ಆರ್ಥಿಕ ವ್ಯವಸ್ಥೆಯು ಶೇ.66 ರಷ್ಟು ಬೆಳವಣಿಗೆಯಾಗಲಿದೆ
  • ಪ್ರಸಕ್ತ ವರ್ಷದಲ್ಲಿ ಮುಂಗಾರು ವೈಫಲ್ಯದಿಂದ ರಾಜ್ಯ ಬರಗಾಲಕ್ಕೆ ತುತ್ತಾಗಿದೆ
  • ಜೆಎಸ್​ಟಿಯ ಅವೈಜ್ಞಾನಿಕ ತೆರಿಗೆಯಿಂದಾಗಿ ರಾಜ್ಯಕ್ಕೆ ನಷ್ಟವಾಗಿದೆ
  • ಕೇಂದ್ರ ಮಾಡದ ಕೆಲಸವನ್ನ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ
  • ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ
  • 2024-25ರಲ್ಲಿ 57 ಸಾವಿರ ಕೋಟಿ 5 ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾಗ್ತಿದೆ
  • ಭಾರತ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ
  • 15ನೇ ಬಜೆಟ್ ಮಂಡನೆ ಮಾಡುತ್ತಿರೋದಕ್ಕೆ ತುಂಬಾ ಖುಷಿ ಇದೆ
  • ‘ಕರ್ನಾಟಕ ಮಾದರಿ’ಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ
  • ಕರ್ನಾಟಕ ಮಾದರಿ ಅಭಿವೃದ್ಧಿ ಹೊಸ ದೃಷ್ಟಾಂತರ ರೂಪಿಸಲು ಮುನ್ನುಡಿ
  • ಬಸವಾದಿ ಶರಣ ಕಾಯಕ, ದಾಸೋಹ ತತ್ವ ನಮಗೆ ಪ್ರೇರಣೆ
  • ದುಡಿಮೆಯ ಪಾಲು ಹಂಚಬೇಕೆಂಬುದು ನಮಗೆ ಮಾರ್ಗದರ್ಶನ
  • ವರನಟ ರಾಜ್​ಕುಮಾರ್​ರ ಆಗದು ಎಂದು ಕೈ ಕಟ್ಟಿ ಕುಳಿತರೆ ಪ್ರಸ್ತಾಪ
  • ಗ್ಯಾರಂಟಿ ಯೋಜನೆಗಳನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನ
  • ಗ್ಯಾರಂಟಿಗಳು ಜನರ ಆಶೋತ್ತರಗಳನ್ನ ಆಧರಿಸಿವೆ
  • ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಾಸದ ಭದ್ರತೆ ಯೋಜನೆ
  • ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಯೋಜನೆಗಳನ್ನ ಕೈಗೊಂಡಿತ್ತು
  • 10 ವರ್ಷದಲ್ಲಿ ಕೇಂದ್ರದ ಜನ ವಿರೋಧಿ ನೀತಿಗಳಿಂದ ಅಸಮಾನತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Budget Highlights: ‘ಕೃಷಿ ಭಾಗ್ಯ’ ಮರು ಜಾರಿ, ಗ್ರಾಮೀಣ ಪ್ರದೇಶದಲ್ಲಿ ‘ಕೆಫೆ ಸಂಜೀವಿನಿ’ ಘೋಷಣೆ

https://newsfirstlive.com/wp-content/uploads/2024/02/SIDDU-LEKKA.jpg

Load More