newsfirstkannada.com

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ 8 ಅಸ್ತ್ರ; ಅಶೋಕ್ ನೇತೃತ್ವದ ಬತ್ತಳಿಕೆಯಲ್ಲಿ ಬಾಣಗಳು ಭರ್ತಿ..!

Share :

Published February 13, 2024 at 7:34am

    ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಅಧಿವೇಶನಕ್ಕೆ ತಯಾರಿ

    ಆರ್.ಅಶೋಕ್ ನೇತೃತ್ವದಲ್ಲಿ ಸಮರ ಸಾರಲು ಪ್ಲಾನ್ ರೆಡಿ

    ಬಿಜೆಪಿ ಶಾಸಕರಿಗೆ ಅಶೋಕ್ ಖಡಕ್ ಏಳು ಸೂಚನೆ

ಬಜೆಟ್ ಅಧಿವೇಶನ ಶುರುವಾಗಿಯಾಗಿದೆ. ರಾಜಕೀಯ ನಾಯಕರಿಗೆ ಇದೊಂಥರ ರಣರಂಗ ಇದ್ದಂತೆ. ಜನಪರ ಹೋರಾಟಕ್ಕೂ, ಪೊಲಿಟಿಕಲ್ ವಾಕ್ಸಮರಕ್ಕೂ ಇದು ವೇದಿಕೆ. ಇಂಥಾ ವೇದಿಕೆಯಲ್ಲಿ ಸರ್ಕಾರವನ್ನು ಕಟ್ಟಿ ಹಾಕೋಕೆ ಕಮಲಪಡೆ ಸಜ್ಜಾಗಿದೆ. ರಾಜ್ಯಾಧ್ಯಕ್ಷ ಅಶೋಕ್ ನೇತೃತ್ವದಲ್ಲಿ ಬತ್ತಳಿಕೆಯಲ್ಲಿ ಬಾಣಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ.

ವಿಧಾನಮಂಡಲ ಅಧಿವೇಶನ ಹಿನ್ನೆಲೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಯ್ತು. ಆರ್​.ಅಶೋಕ್, ವಿಜಯೇಂದ್ರ ನೇತೃತ್ವದಲ್ಲಿ ನಡೆದ ಮೀಟಿಂಗ್​ನಲ್ಲಿ ಸರ್ಕಾರವನ್ನು ಸದನದಲ್ಲಿ ಹೇಗೆಲ್ಲಾ ಕಟ್ಟಿ ಹಾಕಬೇಕು ಅನ್ನೋ ಬಗ್ಗೆ ತಂತ್ರ ರೂಪಿಸಲಾಗಿದೆ.

ಸದನ ಸಮರಕ್ಕೆ ಅಸ್ತ್ರ!

  • ಅಸ್ತ್ರ 01: ಗುತ್ತಿಗೆದಾರರ ಸಂಘದ ಕಮೀಷನ್ ಆರೋಪ ಪ್ರಸ್ತಾಪ
  • ಅಸ್ತ್ರ 02: ಚುನಾವಣೆಯ ಹೊಸ್ತಿಲಲ್ಲಿ ಶಾಸಕರ ಅನುದಾನದ ವಿಳಂಬ
  • ಅಸ್ತ್ರ 03: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋದಾಗಿ ಕಿಡಿ
  • ಅಸ್ತ್ರ 04: ದೇಶ ವಿಭಜನೆಗೆ ಸ್ವಾಗತ ಎಂದವರ ವಿರುದ್ಧ ಕ್ರಮಕ್ಕೆ ಪಟ್ಟು
  • ಅಸ್ತ್ರ 05: ಬೇಸಿಗೆ ಕಾಲ ಎದುರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು?
  • ಅಸ್ತ್ರ 06: ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೋರಾಟ
  • ಅಸ್ತ್ರ 07: ಗ್ಯಾರಂಟಿ ಅನುಷ್ಠಾನಗೊಳಿಸೋದ್ರಲ್ಲಿ ಸರ್ಕಾರದ ಯಡವಟ್ಟು
  • ಅಸ್ತ್ರ 08: ಏರಿಕೆ ಆಗ್ತಿರೋ ವಿದ್ಯುತ್ ದರ, ಗ್ರಾಮಗಳಲ್ಲಿ ವಿದ್ಯುತ್ ಅಭಾವ

ಸಭೆಯಲ್ಲಿ ಶಾಸಕರಿಗೆ ಒಂದಷ್ಟು ಸೂಚನೆಗಳನ್ನೂ ಆರ್​.ಅಶೋಕ್ ನೀಡಿದ್ದಾರೆ. ಸದನದಲ್ಲಿ ಹೇಗಿರಬೇಕು ಎಂಬ ಪಾಠ ಮಾಡಿದ್ದಾರೆ.

ಶಾಸಕರಿಗೆ ‘ಅಶೋಕ್’ ಸೂಚನೆ

  • ಸೂಚನೆ 01: ‘ಲೋಕ’ಕದನ ಸಮೀಪವಿರುವ ಕಾರಣ ಗಂಭೀರವಾಗಿ ಪರಿಗಣನೆ
  • ಸೂಚನೆ 02: ಸಣ್ಣ ಪುಟ್ಟ ವಿಷಯಗಳಿಗೆ ಸದನದ ಬಾವಿಗೆ ಇಳಿಯೋದು ಬೇಡ
  • ಸೂಚನೆ 03: ಫಲಿತಾಂಶ ಸಿಗುವ ನಿರ್ದಿಷ್ಟ ವಿಷಯವಷ್ಟೇ ಪ್ರಸ್ತಾಪಿಸಿ ಹೋರಾಟ
  • ಸೂಚನೆ 04: ಶಾಸಕರು ಸುಮ್ಮನೆ ಮೊಗಸಾಲೆಯಲ್ಲೇ ಕುಳಿತುಕೊಳ್ಳಬಾರದು
  • ಸೂಚನೆ 05: ಪಕ್ಷದಲ್ಲಿನ ಅಸಮಾಧಾನದ ಬಹಿರಂಗ ಚರ್ಚೆ ಮಾಡಬಾರದು
  • ಸೂಚನೆ 06: ಮಧ್ಯಾಹ್ನ ಭೋಜನಕ್ಕೆ ಹೊರಗೆ ತೆರಳಿ ಸಮಯ ವ್ಯರ್ಥ ಮಾಡಬೇಡಿ
  • ಸೂಚನೆ 07: ಸಮಯಕ್ಕೆ ಸರಿಯಾಗಿ ಎಲ್ಲರೂ ಸದನಕ್ಕೆ ಹಾಜರಾಗಿ, ಭಾಗಿಯಾಗಿ

ಒಟ್ಟಾರೆ ಸಾಲು ಸಾಲು ಅಸ್ತ್ರಗಳನ್ನ ಹಿಡಿದು ಸರ್ಕಾರದ ಮೇಲೆ ಮುಗಿ ಬೀಳೋದಕ್ಕೆ ಕಮಲಪಡೆ ಸಜ್ಜಾಗಿದೆ. ಇದನ್ನ ಸರ್ಕಾರಕ್ಕೆ ಎದುರಿಸೋದಕ್ಕೆ ಏನೆಲ್ಲಾ ಪ್ಲಾನ್ ಮಾಡ್ಕೊಂಡಿದೆ ಅನ್ನೋದು ಸದನದಲ್ಲಿ ಗೊತ್ತಾಗಲಿದೆ. ಹೀಗಾಗಿ ಅಧಿವೇಶನದಲ್ಲಿ ಮಹಾಯುದ್ಧ ಫಿಕ್ಸ್..

ವಿಶೇಷ ವರದಿ: ಗಣಪತಿ, ನ್ಯೂಸ್​ಫಸ್ಟ್ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ 8 ಅಸ್ತ್ರ; ಅಶೋಕ್ ನೇತೃತ್ವದ ಬತ್ತಳಿಕೆಯಲ್ಲಿ ಬಾಣಗಳು ಭರ್ತಿ..!

https://newsfirstlive.com/wp-content/uploads/2024/02/R-ASHOK.jpg

Load More