ಕಿಚ್ಚ ಸುದೀಪ್ ಕ್ಯಾಪ್ಟನ್ಸಿಯಲ್ಲಿ ಕರುನಾಡು ಜಯಭೇರಿ.. ವೇಗದ ಅರ್ಧ ಶತಕ ಸಿಡಿಸಿದ ಡಾರ್ಲಿಂಗ್​ ಕೃಷ್ಣ

author-image
Bheemappa
Updated On
ಕಿಚ್ಚ ಸುದೀಪ್ ಕ್ಯಾಪ್ಟನ್ಸಿಯಲ್ಲಿ ಕರುನಾಡು ಜಯಭೇರಿ.. ವೇಗದ ಅರ್ಧ ಶತಕ ಸಿಡಿಸಿದ ಡಾರ್ಲಿಂಗ್​ ಕೃಷ್ಣ
Advertisment
  • ನಟ ಡಾರ್ಲಿಂಗ್ ಕೃಷ್ಣರ ಅದ್ಭುತ ಬ್ಯಾಟಿಂಗ್​ಗೆ ತೆಲುಗು ಕಂಗಾಲು
  • ಬ್ಯಾಟಿಂಗ್ ಮಾಡುವಾಗ ಕಿಚ್ಚ ಸುದೀಪ್​ ಅವರಿಗೆ ಏನಾಯಿತು?
  • ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಶುಭಾರಂಭ ಮಾಡಿದ ಕರ್ನಾಟಕ

2025ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗಿ ಅದ್ಧೂರಿಯಾಗಿ ಚಾಲನೆ ನೀಡಿದ್ದರು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್​ ತಂಡ ಭರ್ಜರಿ ಕಾದಾಟ ನಡೆಸಿದವು. ಆದರೆ ಅಂತಿಮವಾಗಿ ಸುದೀಪ್ ಟೀಮ್ ಅದ್ಭುತವಾದ ಗೆಲುವು ಪಡೆಯಿತು.

publive-image

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಸಿಎಲ್​​ ಟೂರ್ನಿಯ 2ನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡದ ಕ್ಯಾಪ್ಟನ್​ ನಟ ಅಖಿಲ್ ಅವರು ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಓಪನರ್ಸ್​ ಆರಂಭಿಕ ಆಘಾತ ಅನುಭವಿಸಿದರು. ಕೇವಲ 1 ರನ್​ಗೆ ರಾಜೀವ್ ಹನು ಔಟ್ ಆದರು.

ಆದರೆ ಇನ್ನೊಂದು ಬದಿಯಲ್ಲಿ ಇದ್ದ ಡಾರ್ಲಿಂಗ್ ಕೃಷ್ಣ ಮಾತ್ರ ಅಮೋಘವಾದ ಬ್ಯಾಟಿಂಗ್ ಮಾಡುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲವಿಗೆ ಕಾರಣರಾದರು. ಬಂದವರೆಲ್ಲಾ ಬೇಗ ಬೇಗ ಔಟ್ ಆಗುತ್ತಿದ್ದರೇ, ಡಾರ್ಲಿಂಗ್ ಕೃಷ್ಣ ಮಾತ್ರ ಕ್ರೀಸ್​ಗೆ ಕಚ್ಚಿ ನಿಂತಿದ್ದರು. ಹೀಗಾಗಿಯೇ ಕೇವಲ 39 ಎಸೆತಗಳಲ್ಲಿ 5 ಫೋರ್, 5 ಭರ್ಜರಿ ಸಿಕ್ಸ್​ ಸಮೇತ 80 ರನ್​ಗಳ ಅಮೋಘವಾದ ಕಾಣಿಕೆ ನೀಡಿದರು.

publive-image

2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಪ್ಲೇಯರ್ಸ್​ ಆರಂಭದಲ್ಲಿ ಮತ್ತೆ ಕುಸಿತ ಕಂಡರು. ಕಿಚ್ಚ ಸುದೀಪ್ ಕೂಡ 14 ರನ್​ನಿಂದ ಬ್ಯಾಟಿಂಗ್ ಮಾಡುವಾಗ ಇಂಜುರಿಗೆ ತುತ್ತಾಗಿ ಹೊರ ನಡೆದರು. ಆದರೆ ಕರನ್ ಆರ್ಯನ್ 34 ಹಾಗೂ ರಾಜೀವ್ ಹನು 26 ಇವರ ತಾಳ್ಮೆಯ ಆಟದಿಂದ ಬುಲ್ಡೋಜರ್ಸ್ ಸುಧಾರಣೆ ಕಂಡಿತು. ಈ ಗೆಲುವಿನಲ್ಲಿ ಡಾರ್ಲಿಂಗ್ ಕೃಷ್ಣ ಅವರ ಶ್ರಮ ಹೆಚ್ಚು ಕಾಣಿಸಿದೆ. ಮೊದಲ 10 ಓವರ್​ಗಳ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಬುಲ್ಡೋಜರ್ಸ್ 113 ರನ್​ ಗಳಿಸಿತು. 2ನೇ ಇನ್ನಿಂಗ್ಸ್​ನ 10 ಓವರ್​ಗಳಲ್ಲಿ 123 ರನ್​ಗಳಿಸಿತ್ತು.

publive-image

ಇದನ್ನೂ ಓದಿ:ಬಿಗ್​ಬಾಸ್ ಶೋ ವಿನ್ನರ್ ಹನುಮಂತು ಮೊದಲ ಕಾರ್ಯಕ್ರಮ.. ಜನರಿಗೆ ಫುಲ್ ಮನರಂಜನೆ

ಈ ಟಾರ್ಗೆಟ್​ ಬೆನ್ನು ಹತ್ತಿದ್ದ ತೆಲುಗು ವಾರಿಯರ್ಸ್ ಗೆಲುವಿನ ಸಮೀಪಕ್ಕೆ ಬಂದು ಸೋತು ಹೋಗಿದೆ. ತೆಲುಗು ವಾರಿಯರ್ಸ್​ ಮೊದಲ ಇನ್ನಿಂಗ್ಸ್​ನಲ್ಲಿ 99 ರನ್​ ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 91 ರನ್​ ಗಳಿಸಿ, ಗುರಿ ಮುಟ್ಟಲಾಗದೇ ಸೋಲೋಪ್ಪಿಕೊಂಡಿದೆ. ಕ್ಯಾಪ್ಟನ್ ಅಖಿಲ್ ಮೊದಲ ಇನ್ನಿಂಗ್ಸ್​ನಲ್ಲಿ ಅದ್ಭುತವಾದ ಬ್ಯಾಟಿಂಗ್ ಮಾಡಿ 31 ಎಸೆತದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದರು. ಆದರೆ ಇವರ ಬಳಿಕ ಬಂದ ಪ್ಲೇಯರ್ಸ್​ ಯಾರೂ ಚೆನ್ನಾಗಿ ಆಡದ ಕಾರಣ ಟೀಮ್ ನೆಲಕಚ್ಚಿತು. ಇನ್ನು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರೈನೋಸ್ ಮತ್ತು ಬೆಂಗಾಲ್ ಟೈಗರ್ಸ್ ಮಧ್ಯೆ ಹಣಾಹಣಿ‌ ನಡೆದಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment