Advertisment

ಹೊಸ ವರ್ಷಕ್ಕೆ ಮೊದಲ ಶಾಕ್ ಕೊಟ್ಟ ಸಿದ್ದು ಸರ್ಕಾರ; ಬಸ್ ಪ್ರಯಾಣ ಆಗುತ್ತೆ ಇನ್ನೂ ದುಬಾರಿ!

author-image
Gopal Kulkarni
Updated On
ಹೊಸ ವರ್ಷಕ್ಕೆ ಮೊದಲ ಶಾಕ್ ಕೊಟ್ಟ ಸಿದ್ದು ಸರ್ಕಾರ; ಬಸ್ ಪ್ರಯಾಣ ಆಗುತ್ತೆ ಇನ್ನೂ ದುಬಾರಿ!
Advertisment
  • ಪಂಚ ಗ್ಯಾರಂಟಿಗಳನ್ನು ನೀಗಿಸಲು ಪರದಾಡುತ್ತಿದೆಯೇ ರಾಜ್ಯ ಸರ್ಕಾರ?
  • ಹೊಸ ವರ್ಷದ ಮೊದಲ ವಾರದಲ್ಲೇ ಜನರಿಗೆ ಶಾಕ್ ನೀಡಿದ ಸರ್ಕಾರ!
  • ಬಸ್​ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಏರಿಕೆಗೆ ಗ್ರೀನ್ ಸಿಗ್ನಲ್!

ಹೊಸ ವರ್ಷ, ಹೊಸ ಹರ್ಷ ಅಂದ್ಕೊಂಡಿದ್ದ ಜನರಿಗೆ ಸರ್ಕಾರ ಮೊದಲ ಶಾಕ್ ಕೊಡಲು ಸಜ್ಜಾಗಿದೆ. ಗ್ಯಾರಂಟಿ ಗುಂಗಿನಲ್ಲಿರೋ ಜನರಿಗೆ ಬಲಗೈಲಿ ಕೊಟ್ಟಿದ್ನ ಎಡಗೈಲಿ ಕಿತ್ತುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಶಕ್ತಿ ಯೋಜನೆ ಎಫೆಕ್ಟೋ? ಏನೋ? ಬಸ್‌ ದರ ಏರಿಸಿ ಪ್ರಯಾಣಿಕರಿಗೆ ಬರೆ ಹಾಕಲು ಗ್ಯಾರಂಟಿ ಸರ್ಕಾರ ಮುಂದಡಿ ಇಟ್ಟಿದೆ.

Advertisment

ಉಚಿತ.. ಖಚಿತ.. ನಿಶ್ಚಿತ.. ಇದು ಸರ್ಕಾರದ ಗ್ಯಾರಂಟಿ ಸ್ಲೋಗನ್, ಎಲ್ಲಾ ಫ್ರೀ.. ಫ್ರೀ.. ಫ್ರೀ ಎಂದ ಸರ್ಕಾರಕ್ಕೆ ಇದೇ ಹೊರೆ ಆದಂತೆ ಕಾಣ್ತಿದೆ. ಶಕ್ತಿ ಯೋಜನೆಯನ್ನ ಸರಿದೂಗಿಸಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಸಜ್ಜಾಗಿದೆ. ಹೆಣ್ಮಕ್ಕಳಿಗೆ ಫ್ರೀ ಶಕ್ತಿ ಕೊಡ್ತಿರೋ ಸರ್ಕಾರ ಗಂಡು ಮಕ್ಕಳ ಬಜೆಟ್‌ಗೆ ಬರೆಹಾಕಲು ನಿರ್ಧರಿಸಿದೆ.

ಹೊಸ ವರ್ಷದಲ್ಲೇ ಬಸ್ ಪ್ರಯಾಣಿಕರಿಗೆ ಸರ್ಕಾರ ಶಾಕ್‌!
ಪಂಚ ಗ್ಯಾರಂಟಿಗಳ ಕೊಟ್ಟು ಕಾಂಗ್ರೆಸ್ ಸರ್ಕಾರ ಕೈ ಸುಟ್ಟುಕೊಂಡಂತೆ ಕಾಣ್ತಿದೆ. ಇದನ್ನ ಸರಿದೂಗಿಸಲು ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಜನರಿಗೆ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಾರಿಗೆ ಪ್ರಯಾಣ ದರ ಏರಿಕೆಗೆ ಸಮ್ಮತಿ ಸೂಚಿಸಿದ್ದಾರೆ. ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಜನರ ಜೇಬಿಗೆ ಕತ್ತರಿ ಹಾಕಲು ಗ್ಯಾರಂಟಿ ಸರ್ಕಾರ ಅಸ್ತು ಎಂದಿದೆ. ಜನವರಿ 5ನೇ ತಾರೀಖಿನಿಂದ ಬದಲಾದ ಬಸ್​ ದರ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ

publive-image

ಇದನ್ನೂ ಓದಿ:ವಂಚನೆ ಕೇಸ್‌.. ಐಶ್ವರ್ಯಾಗೆ ಬಿಗ್ ಶಾಕ್ ಕೊಟ್ಟ ಪೊಲೀಸರು; Audi, BMW ಕಾರುಗಳು ಸೀಜ್!

Advertisment

ನಾಲ್ಕು ಸಾರಿಗೆ ನಿಗಮಗಳ ಬಸ್ ದರ ಹೆಚ್ಚಳಕ್ಕೆ ಇವತ್ತು ನಡೆದ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ದರ ಏರಿಕೆ ಆಗಲಿದೆ. 2020ರಿಂದಲೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಆಗಿಲ್ಲ. ಹೀಗಾಗಿ ಈ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪರಿಣಾಮ ಶೇಕಡ 15ರಷ್ಟು ರಾಜ್ಯದ ಸಾರಿಗೆ ಬಸ್‌ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರದ ನಿರ್ಧರಿಸಿದೆ. ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸಂಪುಟ ಸಭೆ ಈ ಪ್ರಸ್ತಾವನೆಗೆ ಅಸ್ತು ಎಂದಿದೆ.

ಇದನ್ನೂ ಓದಿ:ಸೌತೆಕಾಯಿ ವಿಚಾರಕ್ಕೆ ಶುರುವಾದ ಅಣ್ಣ-ತಂಗಿ ಜಗಳ ದುರಂತದಲ್ಲಿ ಅಂತ್ಯ; ಆಗಿದ್ದೇನು?

ಪಂಚ ಗ್ಯಾರಂಟಿಗಳ ಕೊಟ್ಟಿದ್ದೇವೆ ಅಂತ ಬೀಗುತ್ತಿರೋ ಸರ್ಕಾರ ಬರುಬರುತ್ತಾ ಜನರ ಜೇಬಿಗೆ ಕೈ ಹಾಕುತ್ತಿದೆ. ಒಂದ್ಕಡೆ ಜನರಿಗೆ ಫ್ರೀ ಕೊಡ್ತಿದ್ದೇವೆ ಎನ್ನುತ್ತಾ ಮತ್ತೊಂದು ಕಡೆ ದರ ಏರಿಕೆ ಬರೆ ಹಾಕುತ್ತಿದೆ. ಆದ್ರೂ ಹೊಸ ವರ್ಷದಲ್ಲೇ ಸರ್ಕಾರಗಳು ಕೊಡ್ತಿರೋ ಶಾಕ್‌ಗೆ ಜನರು ಥಂಡಾ ಹೊಡೆದಿದ್ದಾರೆ. ದುಬಾರಿ ದುನಿಯಾದಲ್ಲಿ ಹೇಗಪ್ಪ ಜೀವನ ನಡೆಸೋದು ಅಂತ ಚಿಂತಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment