/newsfirstlive-kannada/media/post_attachments/wp-content/uploads/2024/10/basavaraj-Bommai.jpg)
ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಜೋರಾಗಿದೆ. ಆಡಳಿತ ಕಾಂಗ್ರೆಸ್ ಹಾಗೂ ದೋಸ್ತಿಗಳ ನಡುವೆ ಮಹಾಯುದ್ಧಕ್ಕೆ ವೇದಿಕೆ ಸಜ್ಜಾಗ್ತಿದೆ. ಈ ಉಪಸಮರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರೋ ಕಮಲಪಾಳಯ 2 ಕ್ಷೇತ್ರಕ್ಕೆ ಕದನಕಲಿಗಳ ಹೆಸರನ್ನ ಘೋಷಿಸಿದೆ. ಈ ಮೂಲಕ ಅಸಲಿ ಆಟ ಆರಂಭಿಸಿದೆ.
ಚುನಾವಣೆ ಒಂದು ಆಟ ಇದ್ದಂತೆ. ಅಖಾಡದಲ್ಲಿರೋ ಆಟಗಾರರು ಯಾರು ಅನ್ನೋದ್ರ ಮೇಲೆ ಗೇಮ್​ನ ಗಮ್ಮತ್ತು ಹೆಚ್ಚಾಗೋದು. ಹೀಗಾಗಿ ಲೆಕ್ಕಾಚಾರ ಹಾಕಿ ಬಲಿಷ್ಠ ಹುರಿಯಾಳುಗಳನ್ನೇ ಹುಡುಕಿರೋ ಬಿಜೆಪಿ ಬೈ ಎಲೆಕ್ಷನ್​ಗೆ ಅಭ್ಯರ್ಥಿಗಳನ್ನ ಘೋಷಿಸಿದೆ
ಸಂಡೂರಲ್ಲಿ ಬಂಗಾರು ಹನುಮಂತುಗೆ ಬಿಜೆಪಿಯಿಂದ ಮಣೆ
ಬೈ ಎಲೆಕ್ಷನ್​ನಲ್ಲಿ 2+1 ಲೆಕ್ಕಾಚಾರ ಹಾಕಿದ್ದ ದೋಸ್ತಿಗಳು ತಮ್ಮ ಪಾಲಿನ ಸಂಡೂರು, ಶಿಗ್ಗಾಂವಿ ಚುನಾವಣಾ ಕಣಕ್ಕೆ ಬಿಜೆಪಿ ಆಟಗಾರರ ಹೆಸರನ್ನ ಘೋಷಿಸಿದೆ. ಶಿಗ್ಗಾಂವಿಯಿಂದ ಪುತ್ರ ಭರತ್​ಗೆ ಟಿಕೆಟ್ ಕೊಡಿಸುವಲ್ಲಿ ಬಸವರಾಜ್ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಇನ್ನು, ಸಂಡೂರು ಮೀಸಲು ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಎಸ್​ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತುಗೆ ಮಣೆ ಹಾಕಲಾಗಿದೆ.
ಶಿಗ್ಗಾಂವಿಯನ್ನ ತಮ್ಮದೇ ಹಿಡಿತದಲ್ಲಿ ಇರಿಸಿಕೊಳ್ಳೋ ಲೆಕ್ಕಾಚಾರ ಹಾಕಿರೋ ಕೇಸರಿ ಸೇನೆ, ಅಪ್ಪನ ಕ್ಷೇತ್ರಕ್ಕೆ ಮಗನಿಗೆ ಟಿಕೆಟ್ ನೀಡಿದೆ.
[caption id="attachment_92854" align="alignnone" width="800"]
ಭರತ್​ ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ[/caption]
ತಾತ-ತಂದೆ ಮಾಜಿ ಸಿಎಂಗಳು.. ಮೂರನೇ ತಲೆಮಾರಿನ ಎಂಟ್ರಿ
ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿದ್ದ ಭದ್ರಕೋಟೆ ಶಿಗ್ಗಾಂವಿ ಕ್ಷೇತ್ರನ್ನ ಉಳಿಸಿಕೊಳ್ಳಲು ಅವರು ಸೂಚಿಸಿದ ಅಭ್ಯರ್ಥಿಗೇ ಮಣೆ ಹಾಕಲಾಗಿದೆ. ಅದರಂತೆ ಮೊದಲ ಬಾರಿಗೆ ಭರತ್ ಬೊಮ್ಮಾಯಿ ಆದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಂದೆಯ ಚುನಾವಣೆಯನ್ನು ಭರತ್ ಅಚ್ಚುಕಟ್ಟಾಗಿ ನಿಭಾಯಿಸಿದ್ದನ್ನ ಗಮನಿಸಿದ್ದ ಹೈಕಮಾಂಡ್ ಬೊಮ್ಮಾಯಿಗೆ ಮಣೆ ಹಾಕಿದೆ.
ಇನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತ ಲೆಕ್ಕಾಚಾರ ಗಮನಿಸೋದಾದ್ರೆ, ಒಟ್ಟು 2,32,000 ಮತದಾರರಿದ್ದಾರೆ. ಅದರಲ್ಲೂ 80 ಸಾವಿರ ವೀರಶೈವ-ಲಿಂಗಾಯತ ಮತಗಳಿರೋದು ಪ್ಲಸ್ ಪಾಯಿಂಟ್. ಇನ್ನು, 65 ಸಾವಿರ ಅಲ್ಪಸಂಖ್ಯಾತ ಮತಗಳು, 50 ಸಾವಿರ ಎಸ್​​ಸಿ ಮತ , 30 ಸಾವಿರ ಕುರುಬ ಹಾಗೂ 12 ಸಾವಿರ ಇತರೆ ಸಮುದಾಯದ ಮತದಾರರಿದ್ದಾರೆ. ಕಳೆದ 4 ಚುನಾವಣೆಯಿಂದ ಕ್ಷೇತ್ರದ ಮೇಲೆ ಬೊಮ್ಮಾಯಿ ಪ್ರಬಲ ಹಿಡಿತ ಸಾಧಿಸಿರೋದ್ರಿಂದ ಪುತ್ರನ ಗೆಲುವು ಸುಲಭ ಅನ್ನೋ ಲೆಕ್ಕಾಚಾರ ಇದೆ. ತಾತ-ತಂದೆ ಇಬ್ಬರು ಮಾಜಿ ಸಿಎಂಗಳಾಗಿದ್ದು, ಇದೀಗ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರಿನ ಕುಡಿಯೂ ರಾಜಕಾರಣಕ್ಕೆ ಎಂಟ್ರಿ ಕೊಟ್ಟಂತಾಗಿದೆ.
ಸಂಡೂರಿನಲ್ಲಿ ಬಂಗಾರು ಹನುಮಂತುಗೆ ಟಿಕೆಟ್ ನೀಡಿರೋದ್ರ ಹಿಂದೆ ಜನಾರ್ದನ ರೆಡ್ಡಿ ಲಾಬಿ ಕೆಲಸ ಮಾಡಿದೆ.
/newsfirstlive-kannada/media/post_attachments/wp-content/uploads/2024/10/bangaru-Hanumantulu.jpg)
ರೆಡ್ಡಿ ಲಾಬಿ.. ಬಂಗಾರುಗೆ ಟಿಕೆಟ್​​!
ಎಸ್‌ಟಿ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜನಾರ್ದನ ರೆಡ್ಡಿ ಮೂಲಕ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹನುಮಂತು ಗೆಲ್ಲಿಸಿಕೊಳ್ಳುವ ಹೊಣೆ ನನ್ನದು ಎಂದು ಗಾಲಿ ಜನಾರ್ದನ ರೆಡ್ಡಿ ಹೈಕಮಾಂಡ್ ನಾಯಕರ ಬಳಿ ತಿಳಿಸಿದ್ದರಂತೆ. ರೆಡ್ಡಿ ಮಾತಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್ ಬಂಗಾರು ಹನುಮಂತುಗೆ ಟಿಕೆಟ್ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ಈ ಭಾಗದಲ್ಲಿ ಶತಾಯಗತಾಯ ಪಕ್ಷ ಕಟ್ಟಲೇಬೇಕು. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರೆಡ್ಡಿ ಸೂಚಿಸಿದ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ. ಅಲ್ಲದೇ ರೆಡ್ಡಿ ಜೊತೆಗೆ ಕೆಲಸ ಮಾಡುವಂತೆ ರಾಮುಲುಗೂ ಹೈಕಮಾಂಡ್ ಮೌಖಿಕ ಸೂಚನೆ ನೀಡಿದೆಯಂತೆ. ಒಂದ್ವೇಳೆ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಗೆಲುವಿನ ಶ್ರೇಯಸ್ಸು ರೆಡ್ಡಿ ಪಾಲಾಗಲಿದೆ. ಅದರ ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ಮೈ ಕೊಡವಿ ನಿಲ್ಲಲು ಕಮಲಪಡೆಗೆ ಹಾಗೂ ರೆಡ್ಡಿಗೆ ಬಲ ಬಂದಂತಾಗಲಿದೆ.
ದೋಸ್ತಿ ಲೆಕ್ಕಾಚಾರದಂತೆ 2 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಆದ್ರೆ, ಚನ್ನಪಟ್ಟಣಕ್ಕೆ ಮೈತ್ರಿ ಕ್ಯಾಂಡಿಡೇಟ್ ಫೈನಲ್ ಆಗಿಲ್ಲ. ಕುಮಾರಸ್ವಾಮಿ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ ಮೀಟಿಂಗ್ ನಡೆದರೂ ಅಂತಿಮ ಅಭ್ಯರ್ಥಿ ಹೆಸರು ಫೈನಲ್ ಆದಂತಿಲ್ಲ. ಇನ್ನು, ಜೆಡಿಎಸ್ ಪಕ್ಷದವರೇ ಎನ್‌ಡಿಎ ಅಭ್ಯರ್ಥಿ ಆಗ್ತಾರೆ ಅಂತಾ ಜೆಡಿಎಲ್​ಪಿ ನಾಯಕ ಸುರೇಶ್ ಬಾಬು ಸ್ಪಷ್ಟವಾಗಿ ಹೇಳಿದ್ದಾರೆ.
ಇಂದು ಚನ್ನಪಟ್ಟಣಕ್ಕೆ ಜೆಡಿಎಸ್ ಕ್ಯಾಂಡಿಡೇಟ್ ಹೆಸರು ಅನೌನ್ಸ್ ಆಗಲಿದ್ದು, ಯಾರಿಗೆ ಅದೃಷ್ಟ ಅನ್ನೋದು ಕಾದುನೋಡಬೇಕಿದೆ. ಒಗ್ಗಟ್ಟಿನ ಜಪ ಸದ್ಯಕ್ಕೆ ನಡೀತಿದೆ. ಒಂದ್ವೇಳೆ ಸಿ.ಪಿ ಯೋಗೇಶ್ವರ್​ಗೆ ಟಿಕೆಟ್ ಕೈ ತಪ್ಪಿದ್ರೆ ಮುಂದೇನು ಅನ್ನೋ ಪ್ರಶ್ನೆಗೆ ಉತ್ತರ ಸದ್ಯಕ್ಕೆ ಊಹಿಸೋದು ಕಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us