/newsfirstlive-kannada/media/post_attachments/wp-content/uploads/2024/10/Congress-By-Election-Ticket.jpg)
ಕದನ ಕಣಕ್ಕಿಳಿದು ಸಮರ ಗೆಲ್ಲೋಕೆ ಮೂರೂ ಪಕ್ಷಗಳು ತಂತ್ರಗಾರಿಕೆ ಶುರು ಮಾಡಿವೆ. ಪ್ರತಿಷ್ಟೆಯ ಮಿನಿ ಸಮರದಲ್ಲಿ ನಾಮಪತ್ರ ಭರಾಟೆ ಮುಗಿದಿದ್ದು ಅಬ್ಬರದ ಪ್ರಚಾರಕ್ಕೆ ವೇದಿಕೆ ಅಣಿಯಾಗಿದೆ. ಬಿಜೆಪಿ-ಜೆಡಿಎಸ್ ದೋಸ್ತಿ ಹಾಗೂ ಕಾಂಗ್ರೆಸ್ ನಾಯಕರ ಮತಬೇಟೆ ಆರಂಭವಾಗಿದೆ. ಪ್ರಚಾರಕ್ಕಿಳಿಯುವ ಮುನ್ನ ಇಂದು ಕಾಂಗ್ರೆಸ್ ಮಹತ್ವದ ಸಭೆ ನಡೆಸಲಿದೆ. ಇತ್ತ ಚನ್ನಪಟ್ಟಣದಲ್ಲಿ ನಿಖಿಲ್ ಅಬ್ಬರದ ಪ್ರಚಾರ ಇವತ್ತಿನಿಂದ ಆರಂಭವಾಗಲಿದೆ.
ಉಪ ಕದನದ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಕಣಕ್ಕಿಳಿದಾಗಿದೆ.. ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ.. ಕಾಂಗ್ರೆಸ್​​ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆ, ದಳಕ್ಕೆ ಅಸ್ತಿತ್ವದ ಹೋರಾಟ. ಈ ಮಧ್ಯೆ ಮೂರು ಕ್ಷೇತ್ರಗಳ ಅಖಾಡಕ್ಕೆ ಅಭ್ಯರ್ಥಿಗಳ ರಂಗಪ್ರವೇಶ ಆಗಿದ್ದು, ಚುನಾವಣೆಯನ್ನ ರಂಗೇರಿಸಿದೆ.
/newsfirstlive-kannada/media/post_attachments/wp-content/uploads/2024/10/BY-ELECTION-1.jpg)
ಮೂರು ಕ್ಷೇತ್ರಗಳನ್ನ ಗೆಲ್ಲಲು ‘ಹಸ್ತ’ ಪಡೆಯಿಂದ ರಣನೀತಿ!
ಕರ್ನಾಟಕ ಉಪ ಕದನದ ಕುರುಕ್ಷೇತ್ರ ರಂಗೇರುತ್ತಿದೆ. ನಾಡಿನ ನಾಡಿಮಿಡಿತ ಏನು ಅನ್ನೋ ಚಿತ್ರಣ ಕಟ್ಟಿಕೊಡುವ ಈ 3 ವಿಧಾನಸಭಾ ಉಪ ಚುನಾವಣೆ ಪ್ರತಿಷ್ಠೆ, ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿ ಆಗಲಿದೆ. 136 ಕ್ಷೇತ್ರಗಳನ್ನ ಗೆದ್ದು ಬೀಗುತ್ತಿರುವ ಕಾಂಗ್ರೆಸ್. ಉಪಕದನದಲ್ಲಿ ಮೂರೂ ಕ್ಷೇತ್ರಗಳನ್ನ ಗೆದ್ದು ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳುವ ಹಠಕ್ಕೆ ಬಿದ್ದಿದೆ. ಈ ನಿಟ್ಟಿನಲ್ಲಿ ಇವತ್ತು ಮಹತ್ವದ ಸಭೆ ನಡೆಸಲು ಮುಂದಾಗಿದೆ.
ಇದನ್ನೂ ಓದಿ:ಮಾಜಿ ಸಚಿವರ ಜೊತೆ ಹಸಿಬಿಸಿ ಆಪರೇಷನ್.. ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯ ಬಂಧನ; ಸಿಕ್ಕಿಬಿದ್ದಿದ್ದೇ ರೋಚಕ!
ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಈ ಮೂರೂ ಕ್ಷೇತ್ರಗನ್ನ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಈ ಸಂಬಂಧ ಶಾಸಕರು, ಪರಿಷತ್ ಸದಸ್ಯರು, ಸಂಸದರಿಗೆ ಸಭೆ ಆಯೋಜನೆ ಮಾಡಿದೆ. ಇವತ್ತು ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎ ಡಿಕೆ ಶಿವಕುಮಾರ್ ಮಹತ್ವದ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಮೀಟಿಂಗ್‌ನಲ್ಲಿ ಶಾಸಕರಿಗೆ, ಸಂಸದರಿಗೆ ಚುನಾವಣಾ ಜವಾಬ್ದಾರಿಯನ್ನ ಸಿಎಂ ನೀಡಲಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲ್ಲಿಸುವಂತೆ ಸಿಎಂ, ಡಿಸಿಎಂ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೆಲಸ ಮಾಡುವಂತೆ ಖಡಕ್ ಸೂಚನೆ ನೀಡಲಿದ್ದಾರೆ.
/newsfirstlive-kannada/media/post_attachments/wp-content/uploads/2024/10/BY-ELECTION-1-1.jpg)
ಇವತ್ತಿನಿಂದ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ!
ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ಅಭಿಮನ್ಯುವಿನಂತೆ ಎಂಟ್ರಿ ಕೊಟ್ಟಿರೋ ನಿಖಿಲ್ ಕುಮಾರಸ್ವಾಮಿ ಇವತ್ತಿನಿಂದ ಕ್ಷೇತ್ರದಲ್ಲಿ ಅಬ್ಬರಿಸಲಿದ್ದಾರೆ. ಇವತ್ತು ಮಾಕಳಿ, ದಶವಾರ, ನಾಗವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ 15 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ನಿಖಿಲ್‌ಗೆ ಸ್ಥಳೀಯ ಶಾಸಕರು, ದೋಸ್ತಿ ಮುಖಂಡರು ಸಾಥ್ ನೀಡಲಿದ್ದಾರೆ. ಇದೇ ಹೊತ್ತಲ್ಲಿ ನಿಖಿಲ್ ಚಕ್ರವ್ಯೂಹ ಬೇಧಿಸೋದು ಪಕ್ಕಾ ಅಂತ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಇತ್ತ ಶಿಗ್ಗಾಂವಿ ಅಭ್ಯರ್ಥಿ ಭರತ್ ಬೊಮ್ಮಾಯಿ ಗೆಲುವಿನ ಮಾತನ್ನ ಆಡಿದ್ದಾರೆ. ಒಟ್ಟಾರೆ ಮಿನಿ ಚುನಾವಣಾ ಯುದ್ಧದಲ್ಲಿ ಜಿದ್ದಾಜಿದ್ದಿ ಶುರುವಾಗಿದ್ದು ಯಾರ ಕೈ ಮೇಲಾಗುತ್ತೆ ಅನ್ನೋದು ನವೆಂಬರ್ 23ಕ್ಕೆ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us