Advertisment

ಕೊನೆಗೂ ಶಿಗ್ಗಾವಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್; ಮೂರು ಕ್ಷೇತ್ರಕ್ಕೂ ಅಭ್ಯರ್ಥಿಗಳು ಫೈನಲ್

author-image
Gopal Kulkarni
Updated On
ಕೊನೆಗೂ ಶಿಗ್ಗಾವಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್; ಮೂರು ಕ್ಷೇತ್ರಕ್ಕೂ ಅಭ್ಯರ್ಥಿಗಳು ಫೈನಲ್
Advertisment
  • ಕೊನೆಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್
  • ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಸೋತ ಯಾಸಿರ್ ಕಣಕ್ಕೆ
  • ಲಿಂಗಾಯತರಿಗೆ ಮಣೆ ಹಾಕುವ ಗಾಳಿ ಸುದ್ದಿಗಳಲ್ಲವೂ ಹುಸಿಯಾದವು

ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಗೆ ಕೈ ಪಾಳಯ ಹಾಗೂ ಮೈತ್ರಿ ಪಾಳಯ ತಮ್ಮ ಅಭ್ಯರ್ಥಿಯನ್ನು ಘೋಷಿಸಿವೆ. ಎರಡು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿ ಚನ್ನಪಟ್ಟಣವನ್ನು ಬಿಜೆಪಿ-ಜೆಡಿಎಸ್ ಕುತೂಹಲ ಉಳಿಸಿಕೊಂಡಿದ್ರೆ. ಶಿಗ್ಗಾವಿ ಅಖಾಡಕ್ಕೆ ಯಾರು ಇಳಿಯಲಿದ್ದಾರೆ ಅನ್ನೋದನ್ನ ಕಾಂಗ್ರೆಸ್​ ಸಸ್ಪೆನ್ಸ್ ಇಟ್ಟುಕೊಂಡಿತ್ತು. ಈಗ ಕಾಂಗ್ರೆಸ್ ಕೂಡ ಶಿಗ್ಗಾವಿಯ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ. ಬಿಜೆಪಿಯೂ ತನ್ನ ಚನ್ನಪಟ್ಟಣದ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ

Advertisment

ಇದನ್ನೂ ಓದಿ: ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯೇ ಯಾಕೆ? ಬಿ.ಎಸ್ ಯಡಿಯೂರಪ್ಪ ಹೇಳಿದ್ದು ನಿಜವಾಗುತ್ತಾ?

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಅಖಾಡಕ್ಕೆ ಇಳಿಯಲು ಅನೇಕರು ಸಜ್ಜಾಗಿದ್ದರು. ಆದ್ರೆ ಕೈ ಹೈಕಮಾಂಡ್​, ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಪರಾಜಿತರಾಗಿದ್ದ ಯಾಸೀರ್ ಅಹ್ಮದ್​ ಖಾನ್ ಪಠಾಣ್​ರನ್ನೇ ಕಣಕ್ಕಿಳಿಸಿದೆ.

ಇದನ್ನೂ ಓದಿ:ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್.. ಜೆಡಿಎಸ್, BJP ನಾಯಕರಿಂದ ಮಹತ್ವದ ತೀರ್ಮಾನ!

Advertisment

ಬಿಜೆಪಿ ಈಗಾಗಲೇ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಣೆ ಮಾಡಿದೆ. ಆದ್ರೆ ಚನ್ನಪಟ್ಟಣದ ಟಿಕೆಟ್​ ಯಾರಿಗೆ ಕೊಡಬೇಕು ಎನ್ನುವ ಗೊಂದಲದಲ್ಲಿತ್ತು ಈಗ ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿಯವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇತ್ತ ಕಾಂಗ್ರೆಸ್​ ಕೂಡ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು, ಶಿಗ್ಗಾವಿ ಕ್ಷೇತ್ರದ ಬಗ್ಗೆ ಇನ್ನೂ ಯಾವ ನಿರ್ಧಾರಕ್ಕೆ ಬಂದಿರಲಿಲ್ಲ. ಈಗ ಯಾಸೀರ್ ಅಹ್ಮದ್ ಖಾನ್​ರನ್ನ ಅಖಾಡಕ್ಕೆ ಇಳಿಸಿದೆ. ಕಳೆದ ಬಾರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಸೋತು ಸುಣ್ಣವಾಗಿದ್ದ ಯಾಸೀರ್ ಈ ಬಾರಿ ಪುಟಿದೇಳುತ್ತಾರಾ ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment