/newsfirstlive-kannada/media/post_attachments/wp-content/uploads/2025/03/SIDDU-1.jpg)
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧಾರ ತಳೆದಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಎಂಬ ಬಿಜೆಪಿ ಆರೋಪದ ನಡುವೆ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇತ್ತ, ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಗ್ರಾಮೀಣ ಭಾಗದಲ್ಲಿ ಇ- ಖಾತಾ ನೀಡಲು ಸರ್ಕಾರ ಪ್ಲಾನ್ ರೂಪಿಸಿದೆ.
ಮೊನ್ನೆ ಮೊನ್ನೆಯಷ್ಟೇ ಬಜೆಟ್ ಮಂಡಿಸಿದ್ದ ಸಿದ್ದು ಸರ್ಕಾರ, ಅಹಿಂದ ಮಂತ್ರ ಪಠಿಸಿತ್ತು. ಅದ್ರಲ್ಲೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಭರ್ಜರಿ ಕೊಡುಗೆ ನೀಡಿ ರಂಜಾನ್ ಹಬ್ಬಕ್ಕೆ ಮುಬಾರಕ್ ಹೇಳಿತ್ತು. ಈಗ ವಿಪಕ್ಷಗಳ ವಿರೋಧದ ನಡುವೆಯೂ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ಜಾರಿಗೆ ತರಲು ಪ್ಲಾನ್ ಮಾಡಿದೆ. ಇದು ರಾಜ್ಯದಲ್ಲಿ ಮತ್ತೊಂದು ಸಂಘರ್ಷಕ್ಕೆ ದಾರಿ ಆಗುವ ಸಾಧ್ಯತೆ ಇದೆ.
ಇದೇ ಅಧಿವೇಶನದಲ್ಲಿ ಗುತ್ತಿಗೆ ವಿಧೇಯಕ ಮಂಡನೆ!
ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ವಿಧೇಯಕ ತರಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದೇ ಅಧಿವೇಶನದಲ್ಲಿ ಬಿಲ್ ಮಂಡಿಸಲು ತೀರ್ಮಾನಿಸಲಾಗಿದೆ. ದಲಿತ, ಹಿಂದುಳಿದ ವರ್ಗಗಳಿಗಷ್ಟೇ ಇದ್ದ ಗುತ್ತಿಗೆ ಮೀಸಲಾತಿ, ಇದೀಗ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ವಿಸ್ತರಿಸಿದೆ.
ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ
- ಎಸ್ಸಿ-ಎಸ್ಟಿ ಸಮುದಾಯಕ್ಕೆ 1 ಕೋಟಿ ರೂ.ವರೆಗೆ ಗುತ್ತಿಗೆ
- ಈಗ ಈ ಮೊತ್ತವನ್ನು 2 ಕೋಟಿ ರೂ. ಕಾಮಗಾರಿಗೆ ವಿಸ್ತರಣೆ
- ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ
- ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆ ಅನುಮೋದನೆ
- ಮುಸ್ಲಿಮರ ಪ್ರವರ್ಗ 2-ಬಿ ಅಡಿ ಶೇ.4ರಷ್ಟು ಮೀಸಲಾತಿ ಪ್ಲಾನ್
ಇದನ್ನೂ ಓದಿ: ಪೋಷಕರೇ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ! ನೀವು ಗಮನಿಸಲೇಬೇಕಾದ ಸ್ಟೋರಿ ಇದು
ಗ್ರಾಮೀಣ ಭಾಗದ ಜನರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಇ-ಖಾತಾ ನಿರೀಕ್ಷೆಯಲ್ಲಿವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇ-ಖಾತಾ ಯೋಜನೆಯನ್ನು ಜಾರಿಗೆ ತರಲು ಸಂಪುಟ ಅನುಮೋದನೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ವಿಧೇಯಕ ಅಂಗೀಕರಿಸಿದರೆ ಗ್ರಾಮೀಣ ಭಾಗದ ಕಂದಾಯ ಬಡಾವಣೆ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ, ನಿವೇಶನ ಸಕ್ರಮಕ್ಕೆ ಅವಕಾಶ ನೀಡಿದಂತಾಗಲಿದೆ. ಈ ವಿಧೇಯಕ ಅಂಗೀಕರಿಸಿದ್ರೆ ಗ್ರಾಮೀಣ ಭಾಗದ ಜನರ ಬಹು ದೊಡ್ಡ ಬೇಡಿಕೆ ಈಡೇರಿದಂತಾಗಲಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ