newsfirstkannada.com

ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ದೆಹಲಿಯಲ್ಲಿ ಅಕ್ಕಿಗಾಗಿ ಸುತ್ತಾಟ.. ಕೈಗೆ ಸಿಗ್ತಿಲ್ವಂತೆ ಕೇಂದ್ರ ಸಚಿವರು..!

Share :

Published June 22, 2023 at 7:12am

    ರೈಸ್ ರಾಜಕೀಯ; ಅಕ್ಕಿಗಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಬಿಗ್ ವಾರ್

    ಅನ್ನಭಾಗ್ಯ ಅಕ್ಕಿ ಬಡವರ ಮನೆ ಸೇರುವುದು ಕೊಂಚ ವಿಳಂಬ ಆಗುತ್ತೆ

    ಕೊನೆಗೂ ಅಮಿತ್ ಶಾ ಭೇಟಿಯಾದ ಸಿದ್ದು- ಏನೆಲ್ಲ ಬೇಡಿಕೆ ಇಟ್ಟರು..?

ಅನ್ನಭಾಗ್ಯ ಯೋಜನೆ ಜಾರಿ ಮಾಡಲೇಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ. ನಾನಾ ರಾಜ್ಯಗಳ ಬಳಿ ರೈಸ್‌ಗಾಗಿ ಸುತ್ತಿದ ಬಳಿಕ ಇದೀಗ ನೇರವಾಗಿ ಕೇಂದ್ರಕ್ಕೆ ಸಿಎಂ ಮೊರೆ ಇಟ್ಟಿದ್ದಾರೆ. ಸಚಿವರ ಜೊತೆ ಸೇರಿ ದೆಹಲಿ ಅಂಗಳದಲ್ಲಿ ಅಕ್ಕಿಗಾಗಿ ಅಸಲಿ ಯುದ್ಧ ಶುರು ಮಾಡಿದ್ದಾರೆ. ಆದ್ರೆ, ಮೊದಲು ಘೋಷಿಸಿದಂತೆ ಜುಲೈ 01ಕ್ಕೆ 10 ಕೆ.ಜಿ ಅಕ್ಕಿ ಸಿಗೋದು ಡೌಟ್ ಎನ್ನಲಾಗುತ್ತಿದೆ.

ಹೀಗೆ ನೇರಾನೇರ ಕತ್ತಿವರಸೆಗೆ ಕಾರಣವಾಗಿರೋದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಭಾಗ್ಯ ಯೋಜನೆ. ಜುಲೈ 1ರಿಂದ ರಾಜ್ಯದ ಬಡ ಜನರ ಮನೆ ಸೇರಬೇಕಿರೋ ಅನ್ನಭಾಗ್ಯ ವಿಳಂಬವಾಗೋ ಸೂಚನೆ ಸಿಕ್ಕಿದೆ. ಹೀಗಂತ ಹೇಳ್ತಿರೋದು ರಾಜ್ಯ ಸರ್ಕಾರ.

ಆದಷ್ಟು ಶೀಘ್ರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಬೇಕಾದ ಒತ್ತಡದಲ್ಲಿ ರಾಜ್ಯ ಸರ್ಕಾರ ಇದೆ. ಅದರ ಭಾಗವಾಗಿಯೇ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ, ಕಾಂಗ್ರೆಸ್​ನ ಹೈಕಮಾಂಡ್ ನಾಯಕರು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿದ್ದಾರೆ. ಕೃಷ್ಣಮೆನನ್​ ಮಾರ್ಗದಲ್ಲಿರೋ ಅಮಿತ್ ಶಾ ನಿವಾಸದಲ್ಲಿ ಕೆಲವು ಕಾಲ ಚರ್ಚೆ ನಡೆಸಿದ್ರು. ಹಲವು ವಿಚಾರಗಳು ಮೀಟಿಂಗ್ ವೇಳೆ ಪ್ರಸ್ತಾಪ ಆದ್ರೂ ಪ್ರಮುಖವಾಗಿ ಮಂಡಿಸಿದ್ದು ಅಕ್ಕಿ ಬೇಡಿಕೆಯನ್ನೇ.

ಅಮಿತ್ ಶಾ-ಸಿದ್ದರಾಮಯ್ಯ ಅಕ್ಕಿ ಚರ್ಚೆ..!

  • ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ಕುರಿತು ಸಿಎಂ ಪ್ರಸ್ತಾಪ
  • ನಿಗದಿತ ದರಕ್ಕೆ ಅಕ್ಕಿ ಖರೀದಿಸೊದಾಗಿ ತಿಳಿಸಿದ ಸಿದ್ದರಾಮಯ್ಯ
  • ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿ ಹಲವು ವಿಚಾರ ಪ್ರಸ್ತಾಪ
  • ಇತ್ತೀಚೆಗೆ ರದ್ದುಪಡಿಸಿದ ಕಾನೂನುಗಳ ಬಗ್ಗೆ ಶಾಗೆ ಮನವರಿಕೆ
  • ಗೋಹತ್ಯೆ ಮಸೂದೆ, ಎಪಿಎಂಸಿ, ಮತಾಂತರ ನಿಷೇಧ ಕಾಯ್ದೆ
  • ಕಾಯ್ದೆಗಳನ್ನು ಹಿಂದೆ ಪಡೆಯಲು ಮುಂದಾಗಿರುವ ಸಿದ್ದು ಸರ್ಕಾರ

ಹೀಗೆ ಕೇಂದ್ರ ಸಚಿವರನ್ನ ಭೇಟಿಯಾದ್ರೂ, ಹಲವು ರಾಜ್ಯಗಳ ಬಳಿ ಅಕ್ಕಿಗಾಗಿ ಬೇಡಿಕೆ ಇಟ್ಟರೂ, ಅಗತ್ಯವಿದ್ದಷ್ಟು ಸಿಗ್ತಿಲ್ಲ. ಹೀಗಾಗಿ ಅನ್ನಭಾಗ್ಯ ಅಕ್ಕಿ ಬಡವರ ಮನೆ ಸೇರೋದು ಕೊಂಚ ವಿಳಂಬ ಅಂತ ಸರ್ಕಾರವೇ ಹೇಳಿದೆ. ಅನ್ನಭಾಗ್ಯದ ಬಗ್ಗೆ ದೆಹಲಿಯಲ್ಲಿ ಮಾತನಾಡಿರೋ ಸಿಎಂ ಸಿದ್ದರಾಮಯ್ಯ, ಯೋಜನೆ ಜಾರಿಯಾಗೋದು ವಿಳಂಬ ಎಂಬ ಮಾಹಿತಿ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೀಗೆ ಹೇಳ್ತಿದ್ರೆ, ಅತ್ತ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅಕ್ಕಿಗಾಗಿ ದೆಹಲಿಯಲ್ಲಿ ತಮ್ಮದೇ ಕಸರತ್ತು ಮುಂದುವರಿಸಿದ್ದಾರೆ. ಫುಡ್​ ಕಾರ್ಪೊರೇಷನ್​ ಆಫ್ ಇಂಡಿಯಾ ಅಕ್ಕಿ ಕೊಡಲು ನಿರಾಕರಿಸಿದ ಬೆನ್ನಲ್ಲೇ ಆಹಾರ ಸಚಿವರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ನಿನ್ನೆ ಕೇಂದ್ರ ಸಚಿವ ಪಿಯೂಷ್ ಗೋಯಲ್‌ರನ್ನ ಭೇಟಿಯಾಗಲು ಮುನಿಯಪ್ಪ ಸಮಯ ಕೇಳಿದ್ರು. ಗೋಯೆಲ್​ರನ್ನ ಭೇಟಿ ಮಾಡಿ ಹೆಚ್ಚುವರಿ ಅಕ್ಕಿಗೆ ಬೇಡಿಕೆ ಇಡಲು ಸಜ್ಜಾಗಿದ್ರು. ಆದ್ರೆ, ಮುನಿಯಪ್ಪಗೆ ಪಿಯೂಷ್ ಗೋಯಲ್ ಭೇಟಿ ಮಾಡಲು ಕಾಲಾವಕಾಶ ಸಿಕ್ಕಿಲ್ಲ. ಇದಕ್ಕೆ ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಜುಲೈ 01 ರಿಂದ ಅನ್ನಭಾಗ್ಯ ಜಾರಿ ಕಷ್ಟಕಷ್ಟ

ಹೀಗೆ ಕೇಂದ್ರದ ನಡೆ ವಿರುದ್ಧ ಕಿಡಿಕಾರಿದ ಕೆ.ಹಚ್​ ಮುನಿಯಪ್ಪ ಅಕ್ಕಿ ಕೊಟ್ಟೇ ಕೊಡ್ತೀವಿ ಎಂದಿದ್ದಾರೆ. ನಾವು ಕೊಟ್ಟ ಮಾತಿನಂತೆ 10 ಕೆ.ಜೆ ಕೊಡ್ತೀವಿ ಅಂತಾ ಸ್ಪಷ್ಟಪಡಿಸಿದ್ರು. ಆದ್ರೆ, ಜುಲೈ 01ಕ್ಕೆ ಸಿಗೋದು ಅನುಮಾನ ಅಂತಲೂ ಹೇಳಿದ್ದಾರೆ.

ಅತ್ತ ಗೃಹಜ್ಯೋತಿ ಪಡೆಯಲು ನೋಂದಣಿ ಕಾರ್ಯ ಜೋರಾಗಿ ನಡೀತಿದೆ. ಈ ನಡುವೆ ಅರ್ಜಿ ಸಲ್ಲಿಕೆ ಕೇಂದ್ರಗಳಲ್ಲಿ ಸಮಸ್ಯೆ ಮುಂದುವರಿದಿದೆ. ಸರಾಗವಾಗಿ ಕಾರ್ಯನಿರ್ವಹಿಸಲು ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿತ್ತು. ಜನರು ಪರದಾಡುವಂತಾಗಿತ್ತು. ಪ್ರತೀ ಸಲ ಕಾದು ಕಾದು ರಿಜಿಸ್ಟರ್ ಆಗದೇ ಜನರು ವಾಪಸ್ ಆಗೋ ನಿರ್ಧಾರ ಮಾಡಿದ್ರು.. ಇದೀಗ ಇಲಾಖೆ ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದೆ. ಈ ಹೊಸ ವೆಬ್​​ಸೈಟ್​ನ ಮೂಲಕ ಅರ್ಜಿ ಸಲ್ಲಿಸಲು ಮನವಿ ಮಾಡಲಾಗಿದೆ.

ಒಂದೊಂದೇ ಗ್ಯಾರಂಟಿಗಳನ್ನ ಜಾರಿ ಮಾಡಲು ಸರ್ಕಾರ ಒಂದೊಂದೆ ಹೆಜ್ಜೆ ಇಡ್ತಿರುವಂತೆ ಕಂಡು ಬರ್ತಿದೆ. ಅದರಲ್ಲೂ ಶೀಘ್ರ ಅನ್ನಭಾಗ್ಯ ಯೋಜನೆಯನ್ನ ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ ಪಣ ತೊಟ್ಟಿದ್ದಾರೆ. ಹಾಗಾದ್ರೆ ಮುಂದೆ ಮಾಡೋದೇನು ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ದೆಹಲಿಯಲ್ಲಿ ಅಕ್ಕಿಗಾಗಿ ಸುತ್ತಾಟ.. ಕೈಗೆ ಸಿಗ್ತಿಲ್ವಂತೆ ಕೇಂದ್ರ ಸಚಿವರು..!

https://newsfirstlive.com/wp-content/uploads/2023/06/SIDDU_MUNIYAPPA.jpg

Load More